Optical Illusion: ಕಣ್ಣಿಗೊಂದು ಸವಾಲ್;‌ ಜಸ್ಟ್ 9 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ ನೋಡೋಣ

ಮೆದುಳಿನ ಚುರುಕುತನಕ್ಕೆ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಮೆದುಳಿಗೆ ಒಂದೊಳ್ಳೆ ವ್ಯಾಯಾಮವನ್ನು ನೀಡುವ ಈ ಆಟ ಅಷ್ಟೇ ಮೋಜುಭರಿತವಾಗಿದೆ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದೆ. ಆ ಚಿತ್ರದಲ್ಲಿ ಉದ್ಯಾನವನವೊಂದಿದ್ದು, ಆ ಉದ್ಯಾನ ದೃಶ್ಯದಲ್ಲಿ ಅಡಗಿರುವ ಬೆಕ್ಕನ್ನು 9 ಸೆಕೆಂಡುಗಳ ಒಳಗಾಗಿ ಹುಡುಕಲು ನಿಮಗೆ ಸವಾಲು ನೀಡಲಾಗಿದೆ.

Optical Illusion: ಕಣ್ಣಿಗೊಂದು ಸವಾಲ್;‌ ಜಸ್ಟ್ 9 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ ನೋಡೋಣ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: May 27, 2025 | 3:55 PM

ಈಗಂತೂ ಬುದ್ಧಿವಂತಿಕೆ, ಮೆದುಳಿನ ತೀಕ್ಷ್ಣತೆ, ಕಣ್ಣಿನ ಚುರುಕುತನವನ್ನು ಪರೀಕ್ಷಿಸಬಹುದಾದ ಮೋಜಿನ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಬುದ್ಧಿವಂತಿಕೆ ಮತ್ತು ನಮ್ಮ ಯೋಚನಾ ಶಕ್ತಿಗೆ ಸವಾಲು ನೀಡುವ ಈ ಆಟಗಳು ಟೈಮ್‌ ಪಾಸ್‌ ಮಾತ್ರವಲ್ಲದೆ ಕಣ್ಣು ಮತ್ತು ಮೆದುಳಿಗೆ ವ್ಯಾಯಾಮವನ್ನು ಕೂಡಾ ನೀಡುತ್ತವೆ. ನೀವು ಸಹ ಇಂತಹ ಕಣ್ಕಟ್ಟಿನ ಸವಾಲಿನ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಗಾರ್ಡನ್‌ನಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಹುಡುಕಲು ಸವಾಲು ನೀಡಲಾಗಿದೆ. ಕೇವಲ 9 ಸೆಕೆಂಡುಗಳ ಒಳಗೆ ಆ ಬೆಕ್ಕನ್ನು ಪತ್ತೆ (find a hidden cat) ಹಚ್ಚುವ ಮೂಲಕ ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಕಂಡುಹಿಡಿಯಬಲ್ಲಿರೇ?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು r/FindTheSniper ಹೆಸರಿನ ರೆಡ್ಡಿಟ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ನಿಮಗೊಂದು ಗಾರ್ಡನ್‌ ಕಾಣಿಸಬಹುದು. ಮತ್ತು ಆ ಗಾರ್ಡನ್‌ನಲ್ಲಿ ಗಿಡ, ಮರ, ಬೆಂಚು, ಇತರೆ ವಸ್ತುಗಳು ಇರುವುದು ನಿಮ್ಮ ಗಮನಕ್ಕೆ ಬಂದಿರಬಹುದಲ್ವಾ. ಜೊತೆಗೆ ಈ ಗಾರ್ಡನ್‌ನಲ್ಲಿ ಒಂದು ಬೆಕ್ಕು ಕೂಡಾ ಅಡಗಿ ಕುಳಿತಿದೆ. ಆ ಬೆಕ್ಕನ್ನು ಕೇವಲ 9 ಸೆಕೆಂಡುಗಳ ಒಳಗಾಗಿ ಹುಡುಕುವ ಮೂಲಕ ನಿಮ್ಮ ಕಣ್ಣು ಮತ್ತು ಬುದ್ಧಿಶಕ್ತಿ ಎಷ್ಟು ಶಾರ್ಪ್‌ ಆಗಿದೆ ಎಂಬುದನ್ನು ಪರೀಕ್ಷಿಸಿ.

ಪೋಸ್ಟ್ ಇಲ್ಲಿದೆ ನೋಡಿ:

ಇದನ್ನೂ ಓದಿ
ಹೀಗೆ ಮಾಡಿದರೆ ಕೋಪವೆಲ್ಲ ಕ್ಷಣದಲ್ಲಿ ಮಾಯವಾಗುತ್ತೆ ನೋಡಿ
ನಿಮ್ಮ ಆಹಾರದಲ್ಲಿ ಒಣ ತೆಂಗಿನಕಾಯಿ ಬಳಸಿ
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ
ನಿಮ್ಮ ರಹಸ್ಯ ಸಾಮರ್ಥ್ಯವನ್ನು ತಿಳಿಸುತ್ತೆ ಈ ಚಿತ್ರ

Couldn’t find the cat in this pic my mom sent
byu/Ginny_Rummy inFindTheSniper

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಒಗಟಿನ ಚಿತ್ರದಲ್ಲಿ ನೀವು ಗಿಡ ಮರಗಳ ಜೊತೆ ಬಹಳಷ್ಟು ತೋಟಗಾರಿಕೆ ಉಪಕರಣಗಳನ್ನು ಹೊಂದಿರುವ ಉದ್ಯಾನ ದೃಶ್ಯವನ್ನು ನೋಡಬಹುದು. ಮತ್ತು ಆ ದೃಶ್ಯದಲ್ಲಿ ಒಂದು ಬೆಕ್ಕು ಸಹ ಇದೆ. ಈಗ ಚಿತ್ರವನ್ನು ಸೂಕ್ಷಮವಾಗಿ ಗಮನಿಸಿ ಮತ್ತು ಚಿತ್ರದಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಕಂಡು ಹಿಡಿಯಿರಿ.

ಬೆಕ್ಕು ಕಾಣಿಸಿತೇ?

ತೋಟದಲ್ಲಿ ಅಡಗಿರುವ ಬೆಕ್ಕನ್ನು ನೀವು ಗುರುತಿಸಲು ಸಾಧ್ಯವಾಯಿತೇ?, ನಿಮಗೆ ಚಿತ್ರದಲ್ಲಿರುವ ಬೆಕ್ಕು ಕಾಣಿಸಿತು ಎಂದಾದರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಮತ್ತು ತಾರ್ಕಿಕ ಕೌಶಲ್ಯ ಉತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ: ಇದರಲ್ಲಿ ನಿಮಗೆ ಕಾಣಿಸುವ ಮೊದಲ ಚಿತ್ರ ಬಹಿರಂಗ ಪಡಿಸುತ್ತೆ ನಿಮ್ಮ ರಹಸ್ಯ ಗುಣಸ್ವಭಾವ

ಉತ್ತರ ಇಲ್ಲಿದೆ:

ಅರೇ ಎಷ್ಟು ಹುಡುಕಿದರೂ ಬೆಕ್ಕು ಸಿಗುತ್ತಿಲ್ಲವೇ ಎಂದು ತಲೆಕೆಡಿಸಿಕೊಂಡಿದ್ದೀರಾ? ಯೋಚನೆ ಮಾಡಬೇಡಿ ಇಲ್ಲಿದೆ ಉತ್ತರ. ಉದ್ಯಾನವನದಲ್ಲಿರುವ ಬೆಂಚಿನ ಬಲ ಭಾಗದ ಕಡೆಗೆ ಕಣ್ಣು ಹಾಯಿಸಿ, ಅಲ್ಲೇ ಪಕ್ಕದಲ್ಲಿ ಪೊದೆಯಂತಿರುವ ಗಿಡವೊಂದಿದೆ. ಆ ಗಿಡದ ಬಳಿ ನೀವು ಹುಡುಕುತ್ತಿರುವ ಕಪ್ಪು ಬೆಕ್ಕು ಅಡಗಿ ಕುಳಿತಿದೆ ನೋಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ