Optical Illusion:ಈ ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಹುಡುಕಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ಪರೀಕ್ಷಿಸಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಮೆದುಳು ಹಾಗೂ ಕಣ್ಣುಗಳಿಗೆ ಕೆಲಸಗಳನ್ನು ನೀಡುವುದು ಮಾತ್ರವಲ್ಲದೆ, ಕ್ಲಿಷ್ಟಕರ ಸವಾಲುಗಳನ್ನು ಹಾಕುವ ಮೂಲಕ ನಮ್ಮ ಬುದ್ಧಿವಂತಿಕೆಗೂ ಸವಾಲೊಡ್ಡುತ್ತವೆ. ಇಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಅದರಲ್ಲಿ ಅಡಗಿ ಕುಳಿತಿರುವಂತಹ ಹುಲಿಯನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು 22 ಸೆಕೆಂಡುಗಳ ಒಳಗಾಗಿ ಹುಡುಕಬೇಕು.

Optical Illusion:ಈ ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಹುಡುಕಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ಪರೀಕ್ಷಿಸಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Jagran Josh

Updated on: Sep 23, 2025 | 6:53 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಮೆದುಳಿಗೆ ವ್ಯಾಯಾಮ ನೀಡುವಂತಹ ಒಂದೊಳ್ಳೆ ವ್ಯಾಯಾಮವಾಗಿದ್ದು, ಇದು ಬುದ್ಧಿವಂತಿಕೆ, ದೃಷ್ಟಿ ತೀಕ್ಷ್ಣತೆ, ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಇವು ಸಖತ್‌ ಮೋಜಿನ ಆಟಗಳಾಗಿವೆ. ಇಂತಹ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.  ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಅಡಗಿರುವ ಹುಲಿಯನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. 22 ಸೆಕೆಂಡುಗಳ ಒಳಗಾಗಿ ಈ ಸವಾಲನ್ನು ಪೂರೈಸುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.

ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಕಂಡುಹಿಡಿಯಬಲ್ಲಿರಾ?

ಈ ಮೇಲಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಹುಲಿಯೊಂದು ಮರೆಯಾಗಿದ್ದು, ಅದನ್ನು ನೀವು 22 ಸೆಕೆಂಡುಗಳ ಒಳಗೆ ಹುಡುಕಬೇಕು. ಈ ಒಗಟಿನ ಆಟ ನಿಮ್ಮ ಏಕಾಗ್ರತೆ, ಗ್ರಹಿಕೆ, ಬುದ್ಧಿವಂತಿಕೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸಲಿರುವ ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ
ನೀವು ಸೋಮಾರಿಯೇ, ಶ್ರಮಜೀವಿಯೇ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
ನೀವು ಆಯ್ಕೆ ಮಾಡುವ ಕಿಟಕಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ಕಾರು ಎತ್ತ ಕಡೆ ಸಾಗುತ್ತಿದೆ ಎಂಬ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ
ನೀವು ಯಾವ ವಿಚಾರಕ್ಕೆ ಭಯ ಪಡುವವರು ಎಂಬುದನ್ನು ಈ ಚಿತ್ರ ತಿಳಿಸುತ್ತೆ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ದಟ್ಟ ಕಾಡುಗಳು ಇರುವಂತಹದ್ದನ್ನು ನೀವು ಗಮನಿಸಬಹುದು. ಈ ಹಚ್ಚ ಹಸಿರಿನ ಕಾಡಿನ ಮಧ್ಯೆ ಹುಲಿಯೊಂದು ಮರೆಯಾಗಿ ಕುಳಿತಿದೆ. ಈ ಮರೆಯಾದ ಹುಲಿಯನ್ನು ಹುಲಿಯನ್ನು ತೀಕ್ಷ್ಣವಾದ ವೀಕ್ಷಣಾ ಕೌಶಲ್ಯ, ಏಕಾಗ್ರತೆ ಹೊಂದಿರುವವರಿಗೆ ಮಾತ್ರ ಹುಡುಕಲು ಸಾಧ್ಯವಂತೆ. ಹಾಗಿದ್ದರೆ ನೀವು ಸಹ ಈ ಸವಾಲನ್ನು ಸ್ವೀಕರಿಸುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ, ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: ಚಿತ್ರದಲ್ಲಿ ಕಾರು ಎತ್ತ ಕಡೆ ಸಾಗುತ್ತಿದೆ ಎಂಬ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ

ನೀವು ಮೊದಲು ಏಕಾಗ್ರತೆಯಿಂದ ಗಮನವಿಟ್ಟು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು  ನೋಡಿ, ಅಗತ್ಯವಿದ್ದರೆ ನೀವು ಚಿತ್ರವನ್ನು ಜೂಮ್‌ ಇನ್‌ ಕೂಡ ಮಾಡಬಹುದು. ಆಗ ನಿಮಗೆ ಉತ್ತರ ಕಂಡುಕೊಳ್ಳಲು ಸುಲಭವಾಗುತ್ತದೆ. ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎಂದಾದರೆ 22 ಸೆಕೆಂಡುಗಳ ಒಳಗಾಗಿ ಕಾಡಿನಲ್ಲಿ ಮರೆಯಾಗಿರುವ ಹುಲಿ ನಿಮ್ಮ ಕಣ್ಣಿಗೆ ಬೀಳುತ್ತದೆ.

ಉತ್ತರ ಇಲ್ಲಿದೆ:

22 ಸೆಕೆಂಡುಗಳ ಒಳಗಾಗಿ ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಪತ್ತೆಹಚ್ಚಿದವರಿಗೆ ಧನ್ಯವಾದಗಳು. ನೀವು ಉತ್ತಮ ದೃಷ್ಟಿ ಕೌಶಲ್ಯವನ್ನು ಹೊಂದಿದ್ದೀರಿ ಎಂದರ್ಥ. ಎಷ್ಟೇ ಹುಡುಕಿದರೂ ಹುಲಿ ಮಾತ್ರ ಕಣ್ಣಿಗೆ ಬೀಳಲಿಲ್ಲ ಎನ್ನುವವರಿಗೆ ಇಲ್ಲಿದೆ ನೋಡಿ ಉತ್ತರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ