
ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವಂತಹ ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ನಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವಂತಿರುತ್ತವೆ. ಕ್ಲಿಷ್ಟಕರವಾಗಿರುವ ಇಂತಹ ಆಟಗಳ ಸರಿಯಾದ ಉತ್ತರವನ್ನು ಕಂಡುಹಿಡಿಯುವುದು ಅಷ್ಟು ಸುಲಭದ ಮಾತಲ್ಲ. ಬುದ್ಧಿವಂತರು, ತೀಕ್ಷ್ಣ ದೃಷ್ಟಿ, ಸರಿಯಾದ ಏಕಾಗ್ರತೆಯನ್ನು ಹೊಂದಿರುವವರಿಗೆ ಮಾತ್ರ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳ ಉತ್ತರವನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯ. ನೀವು ಸಹ ಇಂತಹ ಆಟಗಳ ಮೂಲಕ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ತರಕಾರಿ ಕೈತೋಟದಲ್ಲಿ ಮರೆಯಾಗಿರುವ ಬೆಕ್ಕನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. 10 ನಿಮಿಷದೊಳಗೆ ಆ ಬೆಕ್ಕನ್ನು ಪತ್ತೆಹಚ್ಚುವ ಮೂಲಕ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.
ಈ ಮೇಲಿನ ಚಿತ್ರವನ್ನು ನೋಡಿದಾಗ ನಿಮಗೆ ತರಕಾರಿ ಗಿಡ, ಬಳ್ಳಿಗಳಿರುವುದು ಕಾಣಬಹುದು. ಆದರೆ ಇಲ್ಲೊಂದು ಬೆಕ್ಕು ಕೂಡ ಇದ್ದು ಅದನ್ನು ಕಂಡು ಹಿಡಿಯಲು ನಿಮಗೆ ಸವಾಲನ್ನು ನೀಡಲಾಗಿದೆ. ಈ ನಿರ್ಧಿಷ್ಟ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯನ್ನು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಈ ನಿರ್ದಿಷ್ಟ ಚಿತ್ರವನ್ನು ನೋಡಿದಾಗ ನಿಮಗೆ ಬರೀ ತರಕಾರಿ ಗಿಡಗಳು ಕಾಣಿಸುತ್ತವೆ. ಆದರೆ ಈ ಚಿತ್ರದಲ್ಲಿ ಒಂದು ಬೆಕ್ಕು ಕೂಡಾ ಇದು, ಅದು ಎಲ್ಲಿ ಮರೆಯಾಗಿ ಕುಳಿತಿದೆ ಎಂಬುದನ್ನು ನೀವು 10 ಸೆಕೆಂಡುಗಳ ಒಳಗೆ ಪತ್ತೆಹಚ್ಚಬೇಕು. ನೀವು ಬುದ್ಧಿವಂತಿಕೆ, ಉತ್ತಮ ದೃಷ್ಟಿ ಕೌಶಲ್ಯ, ಏಕಾಗ್ರತೆಯ ಸಾಮಾರ್ಥ್ಯವನ್ನು ಹೊಂದಿದ್ದರೆ ಮಾತ್ರ ನಿಮಗೆ ಮರೆಯಾಗಿರುವ ಬೆಕ್ಕನ್ನು ಹುಡುಕಲು ಸಾಧ್ಯವಂತೆ, ಹಾಗಿದ್ರೆ ನೀವು ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಲ್ವಾ. ಏಕಾಗ್ರತೆಯಿಂದ ಈ ಚಿತ್ರವನ್ನು ಜೂಮ್ ಇನ್ ಜೂಮ್ ಔಟ್ ಮಾಡಿ ನೋಡಿದರೆ ನಿಮಗೆ ತರಕಾರಿ ಗಿಡಗಳ ಮಧ್ಯೆ ಅಡಗಿ ಕುಳಿತಿರುವ ಬೆಕ್ಕು ಕಾಣಿಸುತ್ತದೆ.
ಇದನ್ನೂ ಓದಿ: ದ್ರಾಕ್ಷಿ ರಾಶಿಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೆ?
10 ಸೆಕೆಂಡುಗಳ ಒಳಗೆ ನೀವು ತರಕಾರಿ ತೋಟದಲ್ಲಿ ಅಡಗಿರುವ ಬೆಕ್ಕನ್ನು ಕಂಡುಹಿಡಿದಿದ್ದರೆ ಧನ್ಯವಾದಗಳು. ನೀವು ಉತ್ತಮ ದೃಷ್ಟಿ ಕೌಶಲ್ಯ ಮತ್ತು ಏಕಾಗ್ರತೆಯನ್ನು ಹೊಂದಿದ್ದೀರಿ ಎಂದರ್ಥ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ, ಉತ್ತರ ಇಲ್ಲಿದೆ ನೋಡಿ. ಆ ಬೆಕ್ಕು ಮೆಣಸಿನಕಾಯಿ ಗಿಡದ ಹಿಂದೆ ಅಡಗಿ ಕುಳಿತಿದೆ. ಚಿತ್ರವನ್ನು ಜೂಮ್ ಇನ್ ಮಾಡಿದಾಗ ಮಾತ್ರ ನಿಮಗೆ ಬೆಕ್ಕು ಗೋಚರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ