ಬೆಳಗ್ಗಿನ ತಿಂಡಿಗೆ ದೋಸೆ, ಇಡ್ಲಿ, ಚಪಾತಿ ಮಾಡೋದು ಸರ್ವೇ ಸಾಮಾನ್ಯ. ಆದರೆ ಮನೆಯಲ್ಲೇ ಇರುವ ಈ ಐಟಂಗಳಿಂದ ಒತ್ತು ಶಾವಿಗೆ ಹಾಗೂ ಕಾಯಿ ಹಾಲನ್ನು ಸುಲಭವಾಗಿ ಮಾಡಬಹುದು. ಕರ್ನಾಟಕದ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಒಂದಾಗಿರುವ ಇದನ್ನು ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ. ಈ ಒತ್ತು ಶಾವಿಗೆಯನ್ನು ಚಟ್ನಿ, ಸಾಂಬಾರು ಹಾಗೂ ಚಿಕನ್ ಸಾರಿನೊಂದಿಗೆ ಸವಿಯಬಹುದು. ಆದರೆ ಈ ಕಾಯಿ ಹಾಲಿನೊಂದಿಗೆ ಸವಿದರೆ ಅದರ ರುಚಿಯೇ ಬೇರೆ.
* ಒಂದು ಕಾಲು ಕಪ್ ದೋಸೆ ಅಕ್ಕಿ
* ಅರ್ಧ ಕಪ್ ತೆಂಗಿನ ತುರಿ
* ರುಚಿಗೆ ತಕ್ಕಷ್ಟು ಉಪ್ಪು
* ತುಪ್ಪ
* ಮೊದಲಿಗೆ ಮಿಕ್ಸಿ ಜಾರಿಗೆ ನೆನೆಸಿದ ದೋಸೆ ಅಕ್ಕಿ ಹಾಗೂ ಅರ್ಧ ಕಪ್ ತೆಂಗಿನ ತುರಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಈ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ, ಎರಡು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬೇಯಲು ಬಿಡಿ, ಆಗಾಗ ಒಂದೆರಡು ಚಮಚ ತುಪ್ಪ ಹಾಕಿ ಕಲಸುತ್ತ ಇರಿ. ಐದರಿಂದ ಹತ್ತು ನಿಮಿಷಗಳ ಬಳಿಕ ಸ್ಟವ್ ಆಫ್ ಮಾಡಿ.
* ತದನಂತರದಲ್ಲಿ ಅಂಗೈಗೆ ಸ್ವಲ್ಪ ತುಪ್ಪ ಸವರಿಕೊಂಡು ಈ ಮಿಶ್ರಣವನ್ನು ಉಂಡೆಗಳಾಗಿ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ ಇಟ್ಟು 10 ರಿಂದ 12 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಆ ಬಳಿಕ ಶಾವಿಗೆ ಅಚ್ಚಿಗೆ ಎಣ್ಣೆ ಸವರಿ, ಅದಕ್ಕೆ ಈ ಉಂಡೆಗಳನ್ನು ಹಾಕಿ ಒತ್ತಿದ್ದರೆ ಒತ್ತು ಶಾವಿಗೆ ಸಿದ್ಧ.
ಇದನ್ನೂ ಓದಿ: ಬೆಳೆಯುತ್ತಿರುವ ಮಗುವಿನ ಮುಂದೆ ಈ ಮಾತುಗಳನ್ನು ಆಡಲೇಬೇಡಿ
* ಒಂದು ಚಮಚ ನೆನೆಸಿರುವ ಅಕ್ಕಿ
* ತೆಂಗಿನ ತುರಿ
* ಗಸೆ ಗಸೆ
* ಬೆಲ್ಲ
* ಒಂದುವರೆ ಕಪ್ ತೆಂಗಿನಕಾಯಿ ಹಾಲು
* ರುಚಿಗೆ ತಕ್ಕಷ್ಟು ಉಪ್ಪು
* ಏಲಕ್ಕಿ ಪುಡಿ
* ಮಿಕ್ಸಿ ಜಾರಿಗೆ ನೆನೆಸಿರುವ ಅಕ್ಕಿ, ತೆಂಗಿನ ತುರಿ, ನೆನೆಸಿದ ಗಸ ಗಸೆ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಆ ಬಳಿಕ ಒಂದು ಪಾತ್ರೆಗೆ ಅರ್ಧ ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ ಬೆಲ್ಲ ಕರಗುವ ತನಕ ಬಿಸಿ ಮಾಡಿ ರುಬ್ಬಿಕೊಂಡ ಮಿಶ್ರಣ ಹಾಗೂ ತೆಳುವಾದ ತೆಂಗಿನಕಾಯಿ ಹಾಲು ಹಾಕಿ ಕಲಸಿಕೊಳ್ಳಿ.
* ರುಚಿಗೆ ತಕ್ಕಷ್ಟು ಉಪ್ಪು, ಏಲಕ್ಕಿ ಪುಡಿ ಹಾಕಿ ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕುದಿಸಿದರೆ ಕಾಯಿ ಹಾಲು ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ