ಸ್ಮಾರ್ಟ್ಫೋನ್ನ ಮಿತಿಮೀರಿದ ಬಳಕೆಯು ಪೋಷಕರು-ಮಕ್ಕಳ ಸಂಬಂಧದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊಬೈಲ್ಗೆ ಅಡಿಕ್ಟ್ ಆದ ತಂದೆ-ತಾಯಿ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಶೇ. 93ರಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ತಮಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯೇ ಕಾರಣವೆಂದು ವಿವೋ ಸ್ವಿಚ್ ಆಫ್ ರಿಸರ್ಚ್ ಅಧ್ಯಯನ ಹೇಳಿದೆ.
ಶೇ. 77ರಷ್ಟು ಪೋಷಕರು ತಮ್ಮ ಮಕ್ಕಳು ತಾವು ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಶೇ. 96ರಷ್ಟು ಪೋಷಕರು ಮತ್ತು ಶೇ. 93ರಷ್ಟು ಮಕ್ಕಳು ಕ್ರಮವಾಗಿ ತಮ್ಮ ಮಕ್ಕಳು ಮತ್ತು ಪೋಷಕರೊಂದಿಗೆ ಗಟ್ಟಿಯಾದ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಜನರು ತಮ್ಮ ಸ್ಮಾರ್ಟ್‌ಫೋನ್ ಬಳಕೆಯ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡಲು ವಿವೋ ಇಂಡಿಯಾ ಡಿಸೆಂಬರ್ 20ರಂದು ತಮ್ಮ ಡಿಜಿಟಲ್ ಸ್ಕ್ರೀನ್‌ಗಳನ್ನು ಒಂದು ಗಂಟೆಯವರೆಗೆ ಸ್ವಿಚ್ ಆಫ್ ಮಾಡಲು ಮತ್ತು ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯಲು ಅಭಿಯಾನ ನಡೆಸುತ್ತಿದೆ.
ಇದನ್ನೂ ಓದಿ: ಅತಿಯಾಗಿ ಟಿವಿ, ಮೊಬೈಲ್ ನೋಡುವ ಮಕ್ಕಳನ್ನು ನಿಯಂತ್ರಿಸೋದು ಹೇಗೆ?
ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ಪೋಷಕರಲ್ಲಿ ಸಾಮಾಜಿಕ ಸಂಪರ್ಕಗಳನ್ನು ಬೆಳೆಸಲು ಸ್ಮಾರ್ಟ್‌ಫೋನ್‌ಗಳು ಅನಿವಾರ್ಯ ಸಾಧನಗಳಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಶೇ. 70ರಷ್ಟು ಪೋಷಕರು ಪ್ರಪಂಚದ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ ಸ್ಮಾರ್ಟ್‌ಫೋನ್‌ಗಳ ಮಹತ್ವ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಅದೇ ರೀತಿ, ಶೇ. 60ಕ್ಕಿಂತ ಹೆಚ್ಚು ಪೋಷಕರು ಸ್ಮಾರ್ಟ್‌ಫೋನ್‌ಗಳನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕಿಸಲು ಅಮೂಲ್ಯವೆಂದು ಪರಿಗಣಿಸುತ್ತಾರೆ. ಆದರೆ ಸುಮಾರು ಶೇ. 60ರಷ್ಟು ಜನರು ಶಾಪಿಂಗ್‌ಗೆ ಮೊಬೈಲ್ ಆ್ಯಪ್ಗಳನ್ನು ಬಳಸಲು ಹೆಚ್ಚು ಉಪಯೋಗಿಸುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ