
Baba Ramdev’s home remedies for monsoon diseases: ಬಾಬಾ ರಾಮದೇವ್ ಬಹಳ ಸಮಯದಿಂದ ಜನರಲ್ಲಿ ಆಯುರ್ವೇದ ಮತ್ತು ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಾಬಾ ರಾಮದೇವ್ ವಿವಿಧ ಆಯುರ್ವೇದ ಪರಿಹಾರಗಳನ್ನು ಹೇಳುತ್ತಲೇ ಇರುತ್ತಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ, ಅಲ್ಲಿ ಅವರು ತಮ್ಮ ಪತಂಜಲಿ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿರುತ್ತಾರೆ. ಆರೋಗ್ಯಕರ ಜೀವನಕ್ಕಾಗಿ ಅಮೂಲ್ಯ ಸಲಹೆಗಳನ್ನು ಸಹ ಹೇಳುತ್ತಾರೆ. ಈ ಬಾರಿ ಬಾಬಾ ರಾಮದೇವ್ (Baba Ramdev) ಮಳೆಗಾಲದಲ್ಲಿ ಬರುವ ರೋಗಗಳನ್ನು ತಪ್ಪಿಸಲು ಒಳ್ಳೆಯ ಚಿಕಿತ್ಸೆ ಬಗ್ಗೆ ಹೇಳಿದ್ದಾರೆ.
ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಲ್ ಇನ್ಫೆಕ್ಷನ್ ಬಹಳ ಬೇಗ ಸಂಭವಿಸುವ ಅವಕಾಶ ಇರುತ್ತೆ. ಫುಡ್ ಪಾಯ್ಸನಿಂಗ್, ಕೆಮ್ಮು, ಶೀತ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಬಹಳಷ್ಟು ಹೆಚ್ಚಾಗುತ್ತದೆ. ಈ ಋತುವಿನಲ್ಲಿ ವೈರಲ್ ಜ್ವರವೂ ತುಂಬಾ ಸಾಮಾನ್ಯ. ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾದಾಗ ದೇಹವು ಒಳಗಿನಿಂದ ದುರ್ಬಲಗೊಳ್ಳುತ್ತದೆ. ಆದ್ದರಿಂದ ವೈರಲ್ ಫಿವರ್ ಅನ್ನು ತಪ್ಪಿಸುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಅವರು ಮಳೆಗಾಲದಲ್ಲಿ ಸಂಭವಿಸುವ ರೋಗಗಳನ್ನು ತಪ್ಪಿಸಲು ನೀಡಿರುವ ಸಲಹೆಗಳನ್ನು ಪಾಲಿಸಿವುದು ಜಾಣತನ.
ಇದನ್ನೂ ಓದಿ: ವಾತ, ಪಿತ್ತ, ಕಫ ದೋಷಗಳು: ಬಾಬಾ ರಾಮದೇವ್ರಿಂದ ಸುಲಭ ಪರಿಹಾರ
ಬಾಬಾ ರಾಮದೇವ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಮಳೆಗಾಲದಲ್ಲಿ ಶೀತ, ಕೆಮ್ಮು ಮತ್ತು ಜ್ವರ ತುಂಬಾ ಸಾಮಾನ್ಯ ಎಂದು ಹೇಳಿರುವುದು ಕಂಡುಬರುತ್ತದೆ. ನೀವು ಮಳೆಗಾಲದಲ್ಲಿ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರೆ, ಅದಕ್ಕಾಗಿ ನೀವು ಮುಲೇಥಿ ಅಥವಾ ಅತಿಮಧುರ (licorice) ರಸವನ್ನು ಕುಡಿಯಬಹುದು. ಇದು ಕೆಮ್ಮು ಮತ್ತು ಶೀತದಿಂದ ಬೇಗನೆ ಪರಿಹಾರ ನೀಡುತ್ತದೆ. ಲೈಕೋರೈಸ್ನಲ್ಲಿ ಗ್ಲೈಸಿರೈಜಿನ್ (Glycyrrhizin) ಎಂಬ ಸಂಯುಕ್ತ ಇರುತ್ತದೆ, ಇದು ಆಂಟಿವೈರಲ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದರ ಹೊರತಾಗಿ, ಇದು ಆ್ಯಂಟಿ ಆಕ್ಸಿಡೆಂಟ್ಸ್ಗಳ ಅತ್ಯುತ್ತಮ ಮೂಲವಾಗಿದೆ. ಮಿನರಲ್ಸ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್‌ನಂತಹ ಅಂಶಗಳು ಸಹ ಇದರಲ್ಲಿ ಕಂಡುಬರುತ್ತವೆ.
ಬಾಬಾ ರಾಮದೇವ್ ಅವರ ಇನ್ಸ್ಟಾ ಪೋಸ್ಟ್
ಮಳೆಗಾಲದಲ್ಲಿ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, 4-5 ದಿನಗಳವರೆಗೆ ಧಾನ್ಯಗಳನ್ನು ತಿನ್ನುವುದನ್ನು ನಿಲ್ಲಿಸಿ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಬದಲಾಗಿ, ಹುರಿದ ಕಡಲೆ, ಖರ್ಜೂರ, ದಾಳಿಂಬೆ, ಪಪ್ಪಾಯಿ ಅಥವಾ ಹಬೆಯಲ್ಲಿ ಬೇಯಿಸಿದ ಸೇಬು ತಿನ್ನಿರಿ. ಇದು ಬಿಟ್ಟು ಬೇರೆ ಏನನ್ನೂ ತಿನ್ನಬೇಡಿ. ಹೀಗೆ ಮಾಡುವುದರಿಂದ, ನೀವು 7 ದಿನಗಳಲ್ಲಿ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ನಿಮಗೆ ಕೆಮ್ಮು, ಶೀತ ಅಥವಾ ಜ್ವರ ಏನೇ ಇದ್ದರೂ ಮಾಯ. ಈ ರೀತಿಯ ಆಹಾರವನ್ನು ತೆಗೆದುಕೊಳ್ಳುವುದರಿಂದ ನಿಮಗೆ ತ್ವರಿತ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ Cardiotoxicity ಅಡ್ಡಪರಿಣಾಮ; ಪತಂಜಲಿಯಲ್ಲಿ ಪರಿಹಾರ
ಮಳೆಗಾಲದಲ್ಲಿ ಜ್ವರ ಬಂದರೆ, ಕೇವಲ ಒಂದು ಕಷಾಯ ಕುಡಿಯುವುದರಿಂದ ಪರಿಹಾರ ಸಿಗುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಕ್ಕಾಗಿ ಗಿಲೋಯ್, ತುಳಸಿ, ಶುಂಠಿ, ಲವಂಗ ಮತ್ತು ಕರಿಮೆಣಸನ್ನು ಸೇರಿಸಿ ಕಷಾಯ ತಯಾರಿಸಿ ಕುಡಿಯಬೇಕು. ಜ್ವರದಿಂದ ಬೇಗ ಗುಣಮುಖರಾಗಲು ಇದು ಸಹಾಯ ಮಾಡುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ