ನಕ್ಕಾಗ ಬಾಯಲ್ಲಿ ದಾಳಿಂಬೆಯಂತಿರುವ ಹಲ್ಲುಗಳು ಎದ್ದು ಕಾಣುತ್ತವೆ. ಹೀಗಾಗಿ ಹಲ್ಲು ಬೆಳ್ಳಗಿದ್ದರೆ ನೋಡಲು ಚಂದ. ಆದರೆ ಕೆಲವು ಅಭ್ಯಾಸಗಳಿಂದ ಇಲ್ಲವಾದರೆ ವಯಸ್ಸು ಆದಂತೆ ಹಲ್ಲುಗಳು ಬಣ್ಣ ಕಳೆದುಕೊಳ್ಳುತ್ತವೆ. ಹೀಗಾಗಿ ಈ ಹಲ್ಲುಗಳು ಬಣ್ಣಗೆಟ್ಟರೆ ಎಲ್ಲರ ಮುಂದೆ ನಗುವುದಕ್ಕೂ ಆಗುವುದಿಲ್ಲ. ಬಣ್ಣಗೆಟ್ಟ ಹಲ್ಲುಗಳು ಮತ್ತೆ ತಥಾಸ್ಥಿತಿಗೆ ಮರಳಲು ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ ಒಳ್ಳೆಯದು.
* ಸ್ಟ್ರಾಬೆರಿ ಹಣ್ಣು ಮ್ಯಾಲಿಕ್ ಆಸಿಡ್ ಎಂಬ ಕಿಣ್ವವನ್ನು ಹೊಂದಿದ್ದು ಬಣ್ಣ ಕಳೆದುಕೊಂಡ ಹಲ್ಲುಗಳನ್ನು ಬಿಳಿಯಾಗಿಸುತ್ತವೆ. ಸ್ಟ್ರಾಬೆರಿಯನ್ನು ಹಲ್ಲುಗಳ ಮೇಲೆ ಉಜ್ಜಿಕೊಂಡು, ಐದು ನಿಮಿಷಗಳು ಬಿಟ್ಟು ನೀರಿನಿಂದ ಬಾಯನ್ನು ತೊಳೆಯಬೇಕು. ಹೀಗೆ ಮಾಡಿದ್ದಲ್ಲಿ ಬಣ್ಣಗೆಟ್ಟ ಹಲ್ಲುಗಳು ಬಿಳಿಯಾಗುತ್ತವೆ.
* ಸೇಬು, ಸೆಲರಿ ಹಾಗೂ ಕ್ಯಾರೆಟ್ ನಂತಹ ಹಣ್ಣು ತರಕಾರಿಗಳು ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನೈಸರ್ಗಿಕ ಸ್ಟೇನ್ ರಿಮೂವರ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಹಣ್ಣುಗಳು ಹಲ್ಲನ್ನು ಸ್ವಯಂ-ಶುಚಿಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸಿ, ಹಲ್ಲಿನ ಬಣ್ಣವನ್ನು ಮರಳುವಂತೆ ಮಾಡುತ್ತದೆ.
ಇದನ್ನೂ ಓದಿ: ಭಾರತೀಯರ ಪಾಲಿಗೆ ಹೆಮ್ಮೆಯ ದಿನ ಗಣರಾಜ್ಯೋತ್ಸವ, ಈ ದಿನದ ಮಹತ್ವ ಹಾಗೂ ಇತಿಹಾಸ
* ಕಿತ್ತಳೆ ಮತ್ತು ಅನಾನಸ್‌ನಂತಹ ಹಣ್ಣುಗಳಲ್ಲಿ ಲಾಲಾರಸವನ್ನು ಉತ್ಪಾದಿಸುವ ಗುಣವು ಅಧಿಕವಾಗಿದೆ. ಈ ಹಣ್ಣುಗಳ ಸೇವನೆಯಿಂದ ಹಲ್ಲುಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಿ ಹಲ್ಲಿನ ಬಿಳಿ ಬಣ್ಣವನ್ನು ಮರಳಿ ನೀಡುತ್ತದೆ.
* ಹಲ್ಲು ಬಣ್ಣವನ್ನು ಕಳೆದುಕೊಂಡಿದ್ದರೆ ಅಡುಗೆ ಸೋಡಾದಿಂದ ಹಲ್ಲುಗಳನ್ನು ಉಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ.
* ಡೈರಿ ಉತ್ಪನ್ನಗಳಾದ ಮೊಸರು, ಹಾಲು ಹಾಗೂ ಚೀಸ್ಗಳು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಹಲ್ಲುಗಳನ್ನು ಕೊಳೆಯದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಅದಲ್ಲದೇ ಗಟ್ಟಿಯಾದ ಚೀಸ್ ಹಳದಿ ಬಣ್ಣವನ್ನು ಬದಲಾಯಿಸಿ ಹಲ್ಲನ್ನು ಬಿಳುಪಾಗಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ