ಗರ್ಭಾವಸ್ಥೆಯಲ್ಲಿ ಚರ್ಮದ ಸಮಸ್ಯೆ ಸಾಮಾನ್ಯವೇ?; ಅದರ ಲಕ್ಷಣಗಳೇನು?

ಗರ್ಭಿಣಿಯಾಗಿದ್ದಾಗ ಮಹಿಳೆಯರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಹೊಟ್ಟೆ ನೋವು, ಚರ್ಮದಲ್ಲಿ ಬದಲಾವಣೆ, ಕೂದಲು ಉದುರುವುದು, ಮೈಕೈ ನೋವು ಹೀಗೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಗರ್ಭಿಣಿಯರಲ್ಲಿ ಚರ್ಮದ ಸಮಸ್ಯೆಯ ಲಕ್ಷಣಗಳು ಯಾವುವು? ಅದಕ್ಕೆ ಪರಿಹಾರವೇನು? ಎಂಬ ಮಾಹಿತಿ ಇಲ್ಲಿದೆ.

ಗರ್ಭಾವಸ್ಥೆಯಲ್ಲಿ ಚರ್ಮದ ಸಮಸ್ಯೆ ಸಾಮಾನ್ಯವೇ?; ಅದರ ಲಕ್ಷಣಗಳೇನು?
ಸಾಂದರ್ಭಿಕ ಚಿತ್ರ Image Credit source: iStock
Follow us
|

Updated on: Jan 25, 2024 | 12:08 PM

ಗರ್ಭಾವಸ್ಥೆಯು ಮಹಿಳೆಯರಿಗೆ ಒಂದು ಸುಂದರವಾದ ಪ್ರಯಾಣವಾಗಿದೆ. 9 ತಿಂಗಳ ಈ ಜರ್ನಿ ಎಷ್ಟೇ ವಿಶೇಷವಾಗಿದ್ದರೂ ಆ ಮಹಿಳೆ ಸಾಕಷ್ಟು ಕಿರಿಕಿರಿ, ಅನಾರೋಗ್ಯವನ್ನು ಕೂಡ ಎದುರಿಸುತ್ತಾಳೆ. ಅನೇಕ ಗರ್ಭಿಣಿಯರು ಎದುರಿಸುವ ಸಾಮಾನ್ಯ ಸಮಸ್ಯೆಗಳೆಂದರೆ ಹಾರ್ಮೋನ್ ಏರಿಳಿತದಿಂದ ಅವರ ಚರ್ಮದಲ್ಲಿ ಆಗುವ ಬದಲಾವಣೆಗಳು. ಈ ಬದಲಾವಣೆಗಳು ಮೊಡವೆ, ಚರ್ಮದ ಹಿಗ್ಗುವಿಕೆ, ಚರ್ಮ ಕಪ್ಪಾಗುವಿಕೆ ಮತ್ತು ಮೆಲಸ್ಮಾದಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾರ್ಮೋನ್‌ಗಳ ಹೆಚ್ಚಿದ ಮಟ್ಟಗಳು ಅದರಲ್ಲೂ ವಿಶೇಷವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಚರ್ಮದಲ್ಲಿ ಎಣ್ಣೆಯ ಅಧಿಕ ಉತ್ಪಾದನೆಗೆ ಕಾರಣವಾಗಬಹುದು.

ಪಂಚಶೀಲ್ ಪಾರ್ಕ್‌ನ ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಸೆಂಟರ್‌ನ ಡರ್ಮಟಾಲಜಿಯ ಹಿರಿಯ ಸಲಹೆಗಾರರಾದ ಡಾ. ದೀಪ್ತಿ ರಾಣಾ ಅವರ ಪ್ರಕಾರ, ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಪಿಗ್ಮೆಂಟೇಶನ್ ಹೆಚ್ಚಾಗಿ ಕಂಡುಬರುತ್ತದೆ.

ಇದನ್ನೂ ಓದಿ: Skin Care: ಚಳಿಗಾಲದಲ್ಲಿ ಚರ್ಮಕ್ಕೆ ಯಾವ ಎಣ್ಣೆಯ ಮಸಾಜ್ ಉತ್ತಮ?

ಮುಖದ ಮೇಲೆ ಕಂಡುಬರುವ ಅಲರ್ಜಿಯನ್ನು ಮೆಲಸ್ಮಾ ಎಂದೂ ಕರೆಯಲಾಗುತ್ತದೆ. ಹಾಗೇ, ದೇಹದ ಮಡಿಕೆಗಳ ವರ್ಣದ್ರವ್ಯ, ಮೊಲೆತೊಟ್ಟುಗಳ ಸುತ್ತಲಿನ ವರ್ಣದ್ರವ್ಯ ಮತ್ತು ಅರೋಲಾದಲ್ಲೂ ಚರ್ಮದ ಸಮಸ್ಯೆ ಕಂಡುಬರುತ್ತದೆ. ಭ್ರೂಣದ ಬೆಳೆಯುತ್ತಿರುವ ಗಾತ್ರದಿಂದಾಗಿ ಕೆಲವರಲ್ಲಿ ಮುಖದ ವರ್ಣದ್ರವ್ಯ ಬದಲಾಗಿ ಕಪ್ಪಾಗುತ್ತದೆ. ಸ್ತನ ಪ್ರದೇಶ ಮತ್ತು ಹೊಟ್ಟೆಯ ಸುತ್ತಲೂ ಚರ್ಮ ಹಿಗ್ಗುತ್ತದೆ.

ಕೆಲವೊಮ್ಮೆ ಮಹಿಳೆಯರು ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಸಾಕಷ್ಟು ಕೂದಲು ಉದುರುವಿಕೆ ಮತ್ತು ಉಗುರುಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ನೋಡಬಹುದು. ಈ ವೇಳೆ ಉಗುರುಗಳು ಬಹಳ ವೇಗವಾಗಿ ಬೆಳೆಯುತ್ತವೆ ಮತ್ತು ಕೆಲವರಿಗೆ ಮೊಡವೆಗಳು ಉಲ್ಬಣಗೊಳ್ಳಬಹುದು. ಇನ್ನು ಕೆಲವರಿಗೆ ಮೈಯಲ್ಲಿ ತುರಿಕೆ ಉಂಟಾಗಿ ಅಲರ್ಜಿಯಾಗಬಹುದು.

ಇದನ್ನೂ ಓದಿ: ಕಾಂತಿಯುತ ಚರ್ಮ ಬೇಕೇ? ನುಗ್ಗೆ ಸೊಪ್ಪಿನ ಪೌಡರ್ ಬಳಸಿ

ಮಗುವಿನ ಜನನದ ನಂತರ ಈ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಅವುಗಳಲ್ಲಿ ಕೆಲವು ಸಮಸ್ಯೆಗಳಾದ ಮೆಲಸ್ಮಾ, ಮೊಡವೆ ಮತ್ತು ಕೂದಲು ಉದುರುವಿಕೆ ಮುಂತಾದವುಗಳು ಹೆರಿಗೆಯ ನಂತರವೂ ಮುಂದುವರಿಯಬಹುದು. ಗರ್ಭಾವಸ್ಥೆಯಲ್ಲಿ ಈ ಯಾವುದೇ ರೀತಿಯ ಚರ್ಮದ ಸಮಸ್ಯೆಗಳನ್ನು ಗಮನಿಸಿದರೆ ವೈದ್ಯರನ್ನು ಭೇಟಿ ಮಾಡಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ