ನಿಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುವ ಈ 5 ಅಭ್ಯಾಸಗಳನ್ನು ಬಿಟ್ಟುಬಿಡಿ

ಮನುಷ್ಯನ ಮೆದುಳು ಆತನ ದೇಹದ ಕೇಂದ್ರ ಸ್ಥಾನ. ಮೆದುಳು ನಮ್ಮ ಇಡೀ ದೇಹದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ಕೆಲವು ಸಣ್ಣಪುಟ್ಟ ರೂಢಿಗಳು ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ನಿಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುವ ಈ 5 ಅಭ್ಯಾಸಗಳನ್ನು ಬಿಟ್ಟುಬಿಡಿ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Jan 24, 2024 | 7:01 PM

ಮೆದುಳು ನಮ್ಮ ನೆನಪುಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ನಿಯಂತ್ರಿಸುತ್ತದೆ. ಮೆದುಳು ನಮ್ಮ ಎಲ್ಲಾ ಚಲನೆಗಳನ್ನು ನಿಯಂತ್ರಿಸುವುದರಿಂದ ಇದು ಮಾನವನ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ನಮ್ಮ ಕೆಲವು ರೂಢಿಗಳು ನಮಗರಿವಿಲ್ಲದಂತೆ ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಮೆದುಳಿನಂತಹ ಅಮೂಲ್ಯವಾದ ಅಂಗವನ್ನು ಕೆಲವೊಮ್ಮೆ ನಮಗೆ ತಿಳಿಯದೆ ಅಪಾಯಕ್ಕೆ ಸಿಲುಕಿಸುವ ಅಭ್ಯಾಸಗಳನ್ನು ನಾವು ರೂಢಿಸಿಕೊಳ್ಳುತ್ತೇವೆ. ಅಂತಹ 5 ರೂಢಿಗಳಿವು.

ಒಂದೇ ಕಡೆ ಕುಳಿತು ಕೆಲಸ ಮಾಡುವುದು:

ತಂತ್ರಜ್ಞಾನದಿಂದಾಗಿ ನಾವು ಜಡ ಜೀವನಶೈಲಿಯನ್ನು ರೂಢಿಸಿಕೊಂಡಿದ್ದೇವೆ. ನಮ್ಮ ದೇಹಕ್ಕೆ ವ್ಯಾಯಾಮ ಸಿಗಬೇಕು ಎನ್ನುವುದಕ್ಕಿಂತ ನಮಗೆ ಯಾವುದು ಆರಾಮದಾಯಕವಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಅದು ನಮ್ಮ ಮೆದುಳಿನ ಮೇಲೆ ಯಾವ ರೀತಿಯ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಾಡುವುದು ಬಹಳ ಮುಖ್ಯ. ಕುಳಿತು ಕೆಲಸ ಮಾಡುವಾಗ ಪ್ರತಿ 15ರಿಂದ 30 ನಿಮಿಷಗಳವರೆಗೆ ವಿರಾಮಗಳನ್ನು ತೆಗೆದುಕೊಳ್ಳಬೇಕು.

ನಿದ್ರೆಯ ಕೊರತೆ:

ನಮ್ಮ ಒತ್ತಡದ ಜೀವನದಲ್ಲಿ ನಿದ್ರೆಯ ಮೌಲ್ಯವನ್ನು ನಾವು ಆಗಾಗ ಕಡೆಗಣಿಸುತ್ತೇವೆ. ಹಾರ್ವರ್ಡ್ ಹೆಲ್ತ್ ಅಧ್ಯಯನದ ಪ್ರಕಾರ, ನಿದ್ರೆಯ ಅಭಾವವು ಅರಿವಿನ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ. ಇದು ಮೆಮೊರಿ, ತಾರ್ಕಿಕತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ಗಂಟೆ ಮುಂಚಿತವಾಗಿ ಮಲಗುವುದು, ಮಲಗುವ ಒಂದು ಗಂಟೆ ಮೊದಲು ಆಲ್ಕೋಹಾಲ್ ಮತ್ತು ಕೆಫೀನ್‌ನಿಂದ ದೂರವಿರುವುದು, ಟಿವಿ, ಮೊಬೈಲ್ ಸ್ಕ್ರೀನ್ ನೋಡುವುದನ್ನು ಕಡಿಮೆ ಮಾಡುವುದು ಇವೆಲ್ಲವೂ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತವೆ.

ಇದನ್ನೂ ಓದಿ: ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆ ಹೆಚ್ಚಿಸುವ 7 ಆಹಾರಗಳಿವು

ಅತಿಯಾದ ಗೆಜೆಟ್ ಬಳಕೆ:

ಅತಿಯಾದ ಸ್ಕ್ರೀನಿಂಗ್ ಸಮಯವು ನಮ್ಮ ಸಿರ್ಕಾಡಿಯನ್ ಲಯದ ಸೂಕ್ಷ್ಮ ಸಮತೋಲನವನ್ನು ಹೊರಹಾಕುತ್ತದೆ. ಇದು ಮನಸ್ಥಿತಿಯ ಅಸ್ವಸ್ಥತೆಗಳು, ಬಳಲಿಕೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮಕ್ಕಳು ಹೆಚ್ಚು ಮೊಬೈಲ್, ಲ್ಯಾಪ್​ಟಾಪ್​ಗಳನ್ನು ನೋಡುವುದರಿಂದ ಅವರ ಯೋಚನಾ ಸಾಮರ್ಥ್ಯ, ಭಾಷೆ, ಜನರೊಂದಿಗೆ ಸಂವಹನದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದೆ.

ನೀರಿನ ಕೊರತೆ:

ನೀರು ಮೆದುಳಿನ ಪ್ರಮುಖ ಅಂಶವಾಗಿದೆ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಆಗಾಗ ಮರೆತುಬಿಡುತ್ತೇವೆ. ನಿರ್ಜಲೀಕರಣವು ಪ್ರತಿಕ್ರಿಯೆಯ ಸಮಯ, ಜ್ಞಾಪಕಶಕ್ತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮೆದುಳಿನಲ್ಲಿರುವ ಓಯಸಿಸ್ ಅನ್ನು ಪುನಃ ತುಂಬಿಸಲು ನೀವು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು.

ಇದನ್ನೂ ಓದಿ: ನೆನಪಿನ ಶಕ್ತಿ, ಮೆದುಳಿನ ಆರೋಗ್ಯ ಹೆಚ್ಚಿಸಲು ಏನು ಕುಡಿಯಬೇಕು?

ಜೋರಾದ ಶಬ್ದವಿರುವ ಸಂಗೀತ ಕೇಳುವುದು:

ಸಂಗೀತವು ನಮಗೆ ಸಂತೋಷವನ್ನು ನೀಡಬಹುದಾದರೂ, ಅದು ತುಂಬಾ ನಮ್ಮ ಮೆದುಳಿನ ಆರೋಗ್ಯಕ್ಕೆ ಕೆಲವೊಮ್ಮೆ ಅಪಾಯವನ್ನುಂಟುಮಾಡುತ್ತದೆ. ದೀರ್ಘಾವಧಿಯಲ್ಲಿ ಜೋರಾದ ಶಬ್ದ ಇರುವ ಸಂಗೀತವನ್ನು ಕೇಳುವುದರಿಂದ ಮೆದುಳಿನ ರಚನೆ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಇಂಪಾದ ಸಂಗೀತವನ್ನು ಆಲಿಸಿ. ತುಂಬ ಸಮಯದವರೆಗೆ ಜೋರಾದ ಶಬ್ದವನ್ನು ಕೇಳುತ್ತಿರಬೇಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ