Republic Day: ಗಣರಾಜ್ಯೋತ್ಸವದಂದು ಮನೆಯಲ್ಲಿ ತ್ರಿರಂಗ್ ಇಡ್ಲಿ ಮಾಡಿ, ಮಾಡುವ ವಿಧಾನ ಇಲ್ಲಿದೆ

ಭಾರತೀಯರ ಪಾಲಿಗೆ ಜನವರಿ 26 ಮರೆಯಲಾಗದ ದಿನವಾಗಿದೆ. ಸಂವಿಧಾನವನ್ನು ಅಂಗೀಕರಿಸುವ ಮೂಲಕ ಗಣರಾಜ್ಯ ಎಂದು ಘೋಷಿಸಲ್ಪಟ್ಟ ಈ ದಿನವನ್ನು ಭಾರತೀಯರು ಹಬ್ಬದಂತೆ ಆಚರಿಸುತ್ತಾರೆ. ಈ ದಿನವನ್ನು ಕಲರ್ ಫುಲ್ ಆಗಿ ಆಚರಿಸಲು ಬಯಸುವವರು ತ್ರಿವರ್ಣ ಇಡ್ಲಿಯನ್ನು ತಯಾರಿಸಿ ಮಕ್ಕಳ ಮನಸ್ಸನ್ನು ಗೆಲ್ಲಬಹುದು. ಹಾಗಾದ್ರೆ ತ್ರಿರಂಗ್ ಇಡ್ಲಿ ಮಾಡುವ ಸಿಂಪಲ್ ವಿಧಾನ ಇಲ್ಲಿದೆ.

Republic Day: ಗಣರಾಜ್ಯೋತ್ಸವದಂದು ಮನೆಯಲ್ಲಿ ತ್ರಿರಂಗ್ ಇಡ್ಲಿ ಮಾಡಿ, ಮಾಡುವ ವಿಧಾನ ಇಲ್ಲಿದೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2024 | 12:05 PM

ಇಡ್ಲಿ ಎಂದರೆ ಎಲ್ಲರಿಗೂ ಕೂಡ ಇಷ್ಟವೇ. ದೂರದ ಊರಿಗೆ ಪ್ರಯಾಣ ಬೆಳೆಸುವವರು ಬೆಳಗ್ಗೆಯ ಉಪಾಹಾರಕ್ಕೆ ಆಯ್ಕೆ ಮಾಡಿಕೊಳ್ಳುವ ತಿಂಡಿಯೇ ಈ ಇಡ್ಲಿ. ಹೋಟೆಲುಗಳಲ್ಲಿ ತಟ್ಟೆ ಇಡ್ಲಿ, ರವೆ ಇಡ್ಲಿ, ಪುಡಿ ಇಡ್ಲಿ, ಕಾಂಚಿಪುರಂ ಇಡ್ಲಿ ಹೀಗೆ ನಾನಾ ರೀತಿಯ ಇಡ್ಲಿಗಳು ಸವಿಯಲು ಸಿಗುತ್ತವೆ. ಆದರೆ ಗೃಹಿಣಿಯರು ಗಣರಾಜ್ಯೋತ್ಸವದ ದಿನ ಮಕ್ಕಳ ಮನಸ್ಸನ್ನು ಗೆಲ್ಲಬೇಕೆಂದುಕೊಂಡಿದ್ದರೆ ಈ ತ್ರಿವರ್ಣ ಅಥವಾ ತ್ರಿರಂಗ್ ಇಡ್ಲಿಯನ್ನು ಒಮ್ಮೆ ಟ್ರೈ ಮಾಡಬಹುದು. ನೋಡುವುದಕ್ಕೂ ಕಲರ್ ಫುಲ್ ಆಗಿ ಕಾಣುವ ಈ ತ್ರಿವರ್ಣ ಇಡ್ಲಿಯನ್ನು ಮಕ್ಕಳಂತೂ ಇಷ್ಟ ಪಟ್ಟು ತಿನ್ನುತ್ತಾರೆ.

ತ್ರಿರಂಗ್ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

ಒಂದು ಲೋಟ ಅಕ್ಕಿ, ಪಾಲಾಕ್‌ ಸೊಪ್ಪು, ಅರ್ಧ ಲೋಟ ಉದ್ದಿನ ಬೇಳೆ, ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವ ಪರೇಡ್​, 1,500ಕ್ಕೂ ಅಧಿಕ ರೈತರಿಗೆ ಆಹ್ವಾನ

ತ್ರಿರಂಗ್ ಇಡ್ಲಿ ಮಾಡುವ ವಿಧಾನ

* ಇಡ್ಲಿ ಮಾಡಲು ಅಕ್ಕಿ ಮತ್ತು ಉದ್ದಿನ ಬೇಳೆ 8 ಗಂಟೆಗಳ ಕಾಲ ನೆನೆ ಹಾಕಬೇಕು.

* ನಂತರ ನೆನೆ ಹಾಕಿದ ಅಕ್ಕಿ ಹಾಗೂ ಉದ್ದಿನ ಬೇಳೆ ರುಬ್ಬಿಕೊಂಡು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಹಾಗೆ ಬಿಡಬೇಕು.

* ಬೆಳಗ್ಗೆ ಪಾಲಾಕ್‌ ಮತ್ತು ಕ್ಯಾರೆಟ್‌ ಬೇರೆ ಬೇರೆಯಾಗಿ ರುಬ್ಬಿಕೊಳ್ಳಿ.

* ಎರಡು ಪಾತ್ರೆಗೆ ಪ್ರತ್ಯೇಕವಾಗಿ ಪಾಲಾಕ್ ಮತ್ತು ಕ್ಯಾರೆಟ್ ಮಿಶ್ರಣ ಹಾಕಿ ಬೇಯಿಸಿಕೊಳ್ಳಿ.

* ಈಗಾಗಲೇ ಬೇಯಿಸಿದ ಈ ಪಾಲಾಕ್ ಮತ್ತು ಕ್ಯಾರೆಟ್ ಮಿಶ್ರಣಕ್ಕೆ ಪ್ರತ್ಯೇಕವಾಗಿ ಸ್ವಲ್ಪ ಪ್ರಮಾಣದಲ್ಲಿ ರುಬ್ಬಿದ ಅಕ್ಕಿ ಹಿಟ್ಟನ್ನು ಹಾಕಿ ಕಲಸಿಕೊಳ್ಳಿ.

* ಅಕ್ಕಿ ಇಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿಕೊಳ್ಳಿ, ಅದರ ಒಂದು ಬದಿಯಲ್ಲಿ ಪಾಲಾಕ್‌ ಹಿಟ್ಟಿನ ಮಿಶ್ರಣ ಹಾಕಿ, ಬದಿಯಲ್ಲಿ ಕ್ಯಾರೆಟ್ ಹಿಟ್ಟಿನ ಮಿಶ್ರಣವನ್ನು ಹಾಕಿ ಬೇಯಿಸಿದರೆ, ಮೂರು ಬಣ್ಣದ ತ್ರಿರಂಗ್ ಇಡ್ಲಿ ಸವಿಯಲು ಸಿದ್ದ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ