ಹಲ್ಲುಗಳ ಆರೋಗ್ಯ ಕಾಪಾಡಲು ಈ ಆಹಾರ ಸೇವಿಸಿ, ಇಲ್ಲಿದೆ ಸಲಹೆ

ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವ ನಾವುಗಳು ಹಲ್ಲುಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದೇ ಇಲ್ಲ. ಆದರೆ ಹಲ್ಲು ನೋವು, ಪಾಚಿಗಟ್ಟುವುದು, ಹಲ್ಲಿನಲ್ಲಿ ಉಳುಕು ಕಾಣಿಸಿಕೊಳ್ಳುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಹಲ್ಲು ಪಾಚಿಗಟ್ಟುವುದು ಹಲ್ಲಿನ ಸಹಜ ಸಮಸ್ಯೆಗಳಲ್ಲಿ ಒಂದಾಗಿದೆ. ಕಾಫಿ, ಟೀ, ಚಾಕಲೇಟ್‌, ಸಿಗರೇಟು ಸೇದುವುದು ಅಥವಾ ತಂಬಾಕನ್ನು ಜಗಿಯುವ ಅಭ್ಯಾಸಗಳಿಂದ ಹಲ್ಲು ಬಣ್ಣಗೆಟ್ಟು ಮುಖದ ಅಂದವನ್ನೇ ಹಾಳು ಮಾಡುತ್ತವೆ. ಆದರೆ ಹಲ್ಲು ಪಳಪಳನೆ ಹೊಳೆಯುವಂತೆ ಮಾಡಲು ಈ ಕೆಲವು ಆಹಾರವನ್ನು ಸೇವಿಸಬೇಕು.

ಹಲ್ಲುಗಳ ಆರೋಗ್ಯ ಕಾಪಾಡಲು ಈ ಆಹಾರ ಸೇವಿಸಿ, ಇಲ್ಲಿದೆ ಸಲಹೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2024 | 12:23 PM

ನಕ್ಕಾಗ ಬಾಯಲ್ಲಿ ದಾಳಿಂಬೆಯಂತಿರುವ ಹಲ್ಲುಗಳು ಎದ್ದು ಕಾಣುತ್ತವೆ. ಹೀಗಾಗಿ ಹಲ್ಲು ಬೆಳ್ಳಗಿದ್ದರೆ ನೋಡಲು ಚಂದ. ಆದರೆ ಕೆಲವು ಅಭ್ಯಾಸಗಳಿಂದ ಇಲ್ಲವಾದರೆ ವಯಸ್ಸು ಆದಂತೆ ಹಲ್ಲುಗಳು ಬಣ್ಣ ಕಳೆದುಕೊಳ್ಳುತ್ತವೆ. ಹೀಗಾಗಿ ಈ ಹಲ್ಲುಗಳು ಬಣ್ಣಗೆಟ್ಟರೆ ಎಲ್ಲರ ಮುಂದೆ ನಗುವುದಕ್ಕೂ ಆಗುವುದಿಲ್ಲ. ಬಣ್ಣಗೆಟ್ಟ ಹಲ್ಲುಗಳು ಮತ್ತೆ ತಥಾಸ್ಥಿತಿಗೆ ಮರಳಲು ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ ಒಳ್ಳೆಯದು.

ಹಲ್ಲನ್ನು ಬಿಳಿಯಾಗಿಸಲು ಈ ಆಹಾರಗಳನ್ನು ಸೇವಿಸಿ

* ಸ್ಟ್ರಾಬೆರಿ ಹಣ್ಣು ಮ್ಯಾಲಿಕ್ ಆಸಿಡ್ ಎಂಬ ಕಿಣ್ವವನ್ನು ಹೊಂದಿದ್ದು ಬಣ್ಣ ಕಳೆದುಕೊಂಡ ಹಲ್ಲುಗಳನ್ನು ಬಿಳಿಯಾಗಿಸುತ್ತವೆ. ಸ್ಟ್ರಾಬೆರಿಯನ್ನು ಹಲ್ಲುಗಳ ಮೇಲೆ ಉಜ್ಜಿಕೊಂಡು, ಐದು ನಿಮಿಷಗಳು ಬಿಟ್ಟು ನೀರಿನಿಂದ ಬಾಯನ್ನು ತೊಳೆಯಬೇಕು. ಹೀಗೆ ಮಾಡಿದ್ದಲ್ಲಿ ಬಣ್ಣಗೆಟ್ಟ ಹಲ್ಲುಗಳು ಬಿಳಿಯಾಗುತ್ತವೆ.

* ಸೇಬು, ಸೆಲರಿ ಹಾಗೂ ಕ್ಯಾರೆಟ್ ನಂತಹ ಹಣ್ಣು ತರಕಾರಿಗಳು ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನೈಸರ್ಗಿಕ ಸ್ಟೇನ್ ರಿಮೂವರ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಹಣ್ಣುಗಳು ಹಲ್ಲನ್ನು ಸ್ವಯಂ-ಶುಚಿಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸಿ, ಹಲ್ಲಿನ ಬಣ್ಣವನ್ನು ಮರಳುವಂತೆ ಮಾಡುತ್ತದೆ.

ಇದನ್ನೂ ಓದಿ: ಭಾರತೀಯರ ಪಾಲಿಗೆ ಹೆಮ್ಮೆಯ ದಿನ ಗಣರಾಜ್ಯೋತ್ಸವ, ಈ ದಿನದ ಮಹತ್ವ ಹಾಗೂ ಇತಿಹಾಸ

* ಕಿತ್ತಳೆ ಮತ್ತು ಅನಾನಸ್‌ನಂತಹ ಹಣ್ಣುಗಳಲ್ಲಿ ಲಾಲಾರಸವನ್ನು ಉತ್ಪಾದಿಸುವ ಗುಣವು ಅಧಿಕವಾಗಿದೆ. ಈ ಹಣ್ಣುಗಳ ಸೇವನೆಯಿಂದ ಹಲ್ಲುಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಿ ಹಲ್ಲಿನ ಬಿಳಿ ಬಣ್ಣವನ್ನು ಮರಳಿ ನೀಡುತ್ತದೆ.

* ಹಲ್ಲು ಬಣ್ಣವನ್ನು ಕಳೆದುಕೊಂಡಿದ್ದರೆ ಅಡುಗೆ ಸೋಡಾದಿಂದ ಹಲ್ಲುಗಳನ್ನು ಉಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ.

* ಡೈರಿ ಉತ್ಪನ್ನಗಳಾದ ಮೊಸರು, ಹಾಲು ಹಾಗೂ ಚೀಸ್​​ಗಳು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಹಲ್ಲುಗಳನ್ನು ಕೊಳೆಯದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಅದಲ್ಲದೇ ಗಟ್ಟಿಯಾದ ಚೀಸ್ ಹಳದಿ ಬಣ್ಣವನ್ನು ಬದಲಾಯಿಸಿ ಹಲ್ಲನ್ನು ಬಿಳುಪಾಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ