ನಿಮ್ಮ ವ್ಯಕ್ತಿತ್ವ ಎಂಥದ್ದು?-ಮನುಷ್ಯರ ನಡುವಳಿಕೆ ಆಧಾರದ ಮೇಲೆ ಈ 4 ವರ್ಗಗಳಲ್ಲಿ ವಿಂಗಡಿಸಬಹುದಂತೆ ನೋಡಿ !

ಅಧ್ಯಯನ ಮಾಡುವಾಗ ಸ್ವಯಂಸೇವಕರಿಗೆ ಜೋಡಿಯಾಗಿ ಪಾಲ್ಗೊಳ್ಳುವಂತೆ ಕೇಳಿದ್ದೆವು. ಅಚ್ಚರಿಯೆಂದರೆ, ಪ್ರತಿ ಸುತ್ತಿನಲ್ಲಿ ಹಾಗಿರಲಿ, ಕೆಲವೇ ನಿಮಿಷ, ತಾಸುಗಳಲ್ಲಿ ಅವರ ಮಾತುಗಳಲ್ಲಿ ವ್ಯತಿರಿಕ್ತತೆ, ಬದಲಾವಣೆ ಕಾಣುತ್ತಿತ್ತು ಎಂದು ಆಂಕ್ಸೋ ಸ್ಯಾಂಚೆಜ್ ಹೇಳಿದ್ದಾರೆ.

ನಿಮ್ಮ ವ್ಯಕ್ತಿತ್ವ ಎಂಥದ್ದು?-ಮನುಷ್ಯರ ನಡುವಳಿಕೆ ಆಧಾರದ ಮೇಲೆ ಈ 4 ವರ್ಗಗಳಲ್ಲಿ ವಿಂಗಡಿಸಬಹುದಂತೆ ನೋಡಿ !
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Feb 03, 2022 | 7:33 AM

ಮನುಷ್ಯರನ್ನು ಮೂಲಭೂತವಾಗಿ ನಾಲ್ಕು ವರ್ಗದಲ್ಲಿ ವಿಂಗಡಿಸಬಹುದಂತೆ. ಇದು ನಾವು ಹೇಳಿದ್ದಲ್ಲ ಅಧ್ಯಯನವೊಂದು ನೀಡಿದ ವರದಿ. ಜನರ ನಡವಳಿಕೆ, ವ್ಯಕ್ತಿತ್ವವನ್ನು ಆಧರಿಸಿ ಮಾಡಲಾದ ಅಧ್ಯಯನದ ಪ್ರಕಾರ, ಜನರನ್ನು ಆಶಾವಾದಿಗಳು, ನಿರಾಶಾವಾದಿಗಳು, ನಂಬಿಕಸ್ಥರು ಮತ್ತು ಅಸೂಯೆಪಡುವವರು ಎಂದು ವಿಂಗಡಿಸಬಹುದು ಎಂದು ಹೇಳಲಾಗಿದೆ. ಅದರಲ್ಲೂ ಈ ನಾಲ್ಕು ವರ್ಗದಲ್ಲಿ ಅಸೂಯೆಪಡುವ ಸ್ವಭಾವದ ವರ್ಗದವರೇ ಹೆಚ್ಚಂತೆ. ಉಳಿದ ವರ್ಗದವರು ಶೇ.20ರಷ್ಟಿದ್ದರೆ, ಇವರು ಮಾತ್ರ ಶೇ.30ರಷ್ಟು ಇದ್ದಾರೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

2016ರಲ್ಲಿ ನಡೆದ ಅಧ್ಯಯನವೊಂದರ ವರದಿಯನ್ನು ಸೈನ್ಸ್ ಅಡ್ವಾನ್ಸಸ್ ಎಂಬ ಜರ್ನಲ್ ಪ್ರಕಟಿಸಿತ್ತು. ಸ್ಪೇನ್ನ universidad carlos iii de madrid ಯೂನಿವರ್ಸಿಟಿಯ ಅಧ್ಯಯನಕಾರರು ಒಟ್ಟು 541 ಸ್ವಯಂಸೇವಕರನ್ನೊಳಗೊಂಡು ಈ ರಿಸರ್ಚ್ ನಡೆಸಿದ್ದರು. ವೈಯಕ್ತಿಕ ಮತ್ತು ಸಾಮೂಹಿಕ ಹಿತಾಸಕ್ತಿಯನ್ನಾಧರಿಸಿ ಸಾಮಾಜಿಕವಾಗಿರುವ ಅನೇಕ ಗೊಂದಲಗಳು, ಇತರರೊಂದಿಗೆ ಅವರು ಹೊಂದಿಕೊಳ್ಳುವ ರೀತಿ, ಸಂಘರ್ಷ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ವಿಶ್ಲೇಷಣೆಯನ್ನು ಪ್ರಕಟಿಸಿದ್ದರು.

ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಆಂಕ್ಸೋ ಸ್ಯಾಂಚೆಜ್ ಮಾಹಿತಿ ನೀಡಿದ್ದು, ನಾವು ವ್ಯಕ್ತಿಗಳ ನಡುವಳಿಕೆಗಳನ್ನು ಅವಲೋಕಿಸಿ ಅಧ್ಯಯನ ಮಾಡುವಾಗ ಅವರಿಗೆ ಜೋಡಿಯಾಗಿ ಪಾಲ್ಗೊಳ್ಳುವಂತೆ ಕೇಳಿದ್ದೆವು. ಅಚ್ಚರಿಯೆಂದರೆ, ಪ್ರತಿ ಸುತ್ತಿನಲ್ಲಿ ಹಾಗಿರಲಿ, ಕೆಲವೇ ನಿಮಿಷ, ತಾಸುಗಳಲ್ಲಿ ಅವರ ಮಾತುಗಳಲ್ಲಿ ವ್ಯತಿರಿಕ್ತತೆ, ಬದಲಾವಣೆ ಕಾಣುತ್ತಿತ್ತು ಎಂದು ಹೇಳಿದ್ದಾರೆ. ಅತಿ ಹೆಚ್ಚಾಗಿ ಆಯ್ಕೆ ಇರುವುದು ಒಂದೋ ಸಹಕರಿಸಬೇಕು ಇಲ್ಲವೇ ವಿರೋಧಿಸಬೇಕು ಎಂಬ ಎರಡು ಅಂಶಗಳಲ್ಲಿ. ಇಂಥ ಸನ್ನಿವೇಶ ಸೇರಿ, ಸಾಮಾಜಿಕ ಜೀವನದಲ್ಲಿ ಎದುರಾಗಬಹುದಾದ ವಿವಿಧ ಸನ್ನಿವೇಶದಲ್ಲಿ ಜನರು ಹೇಗೆ ವರ್ತಿಸಬಹುದು ಎಂಬುದನ್ನು ನಾವು ಅವಲೋಕಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಅಧ್ಯಯನ ಸಾರಾಂಶದಲ್ಲಿ ಶೇ.90ರಷ್ಟು ಮಂದಿ ಆಶಾವಾದಿಗಳು, ನಿರಾಶಾವಾದಿಗಳು, ನಂಬಿಕಸ್ಥರು ಮತ್ತು ಅಸೂಯೆಪಡುವವರು ಎಂಬ ನಾಲ್ಕು ವರ್ಗಕ್ಕೆ ಸೇರಿದ್ದಾಗಿ ತಿಳಿದುಬಂತು. ಅದರಲ್ಲಿ ಶೇ.30ರಷ್ಟು ಜನರು ಅಸೂಯೆಪಡುವವರ ವರ್ಗಕ್ಕೆ ಸೇರುತ್ತಾರೆ. ಇವರು ತಾವೇನು ಸಾಧನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಗಮನಹರಿಸುವುದಿಲ್ಲ. ಇತರರ ಬಗ್ಗೆಯೇ ಹೆಚ್ಚು ಗಮನಿಸುತ್ತಿರುತ್ತಾರೆ. ಇನ್ನುಳಿದಂತೆ ಶೇ.20ರಷ್ಟು ಮಂದಿ ಆಶಾವಾದಿಗಳ ವಿಭಾಗಕ್ಕೆ ಸೇರುತ್ತಾರೆ. ಇಂಥವರು ಯಾವಾಗಲೂ ಎಲ್ಲವೂ ಒಳಿತಾಗುತ್ತದೆ ಎಂಬ ಆಶಯದಲ್ಲಿ ಇರುತ್ತಾರೆ. ಹಾಗೇ, ಮೂರನೇಯ ವರ್ಗ ನಿರಾಶಾವಾದಿಗಳದ್ದು. ಈ ವಿಭಾಗದಲ್ಲಿ ಕೂಡ ಶೇ.20ರಷ್ಟು ಜನರಿದ್ದಾರೆ. ಇಂಥವರು ಪ್ರತಿಯೊಂದರಲ್ಲೂ ಕೆಡುಕನ್ನೇ ನೋಡುತ್ತಾರೆ. ಹಾಗೇ, ಶೇ.20ರಷ್ಟು ವಿಶ್ವಾಸಾರ್ಹರಾಗಿದ್ದು, ಇನ್ನೊಬ್ಬರೊಂದಿಗೆ ಸಹಭಾಗಿತ್ವ, ಸಹಕಾರದಿಂದ ಜೀವನ ನಡೆಸುತ್ತಾರೆ. ತಾವು ಗೆಲ್ಲಲಿ-ಸೋಲಲಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆಂಕ್ಸೋ ಸ್ಯಾಂಚೆಜ್ ತಿಳಿಸಿದ್ದಾರೆ. ಇವಿಷ್ಟರ ಮಧ್ಯೆ ಇನ್ನೊಂದು ಗುಂಪಿದೆ. ಅದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅಂಥವರ ನಡುವಳಿಕೆಯನ್ನು ಯಾವುದೇ ನಿರ್ದಿಷ್ಟ ಗುಂಪಿಗೂ ಸೇರಿಸಲು ಸಾಧ್ಯವಾಗುವುದಿಲ್ಲ. ಇವರು ಶೇ.10ರಷ್ಟು ಜನರಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Women Health: ಮುಟ್ಟಿನ ದಿನಗಳಲ್ಲಿ ಮಹಿಳೆಯರ ತೂಕ ಹೆಚ್ಚಾಗುತ್ತದೆ; ಇದರ ಹಿಂದಿನ ಕಾರಣ ತಿಳಿಯಲೇಬೇಕು

Published On - 7:32 am, Thu, 3 February 22

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ