Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಮುಟ್ಟಿನ ದಿನಗಳಲ್ಲಿ ಮಹಿಳೆಯರ ತೂಕ ಹೆಚ್ಚಾಗುತ್ತದೆ; ಇದರ ಹಿಂದಿನ ಕಾರಣ ತಿಳಿಯಲೇಬೇಕು

ವಾಸ್ತವವಾಗಿ ಪ್ರತಿ ಮಹಿಳೆಯು ತನ್ನದೇ ಆದ ಮುಟ್ಟಿನ ಲಕ್ಷಣಗಳನ್ನು ಹೊಂದಿರುತ್ತಾಳೆ. ಮುಟ್ಟಿನ ಮೊದಲ ದಿನದಂದು ನಿಮ್ಮ ದೇಹವು ನೀರನ್ನು ಉಳಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ನಿಮ್ಮ ತೂಕ ಹೆಚ್ಚಾಗಬಹುದು.

Women Health: ಮುಟ್ಟಿನ ದಿನಗಳಲ್ಲಿ ಮಹಿಳೆಯರ ತೂಕ ಹೆಚ್ಚಾಗುತ್ತದೆ; ಇದರ ಹಿಂದಿನ ಕಾರಣ ತಿಳಿಯಲೇಬೇಕು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Feb 03, 2022 | 7:10 AM

ಮುಟ್ಟಾಗುವುದು ಮಹಿಳೆಯರು ಎದುರಿಸುವ ನೈಸರ್ಗಿಕ ಸಮಸ್ಯೆಯಾಗಿದೆ. ಆದಾಗ್ಯೂ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಟ್ಟು ಪ್ರಾರಂಭವಾದ ತಕ್ಷಣ ಮಹಿಳೆಯರಲ್ಲಿ ವಿವಿಧ ರೀತಿಯ ರೋಗಲಕ್ಷಣಗಳು ಕಂಡುಬರುತ್ತವೆ. ಇದರಲ್ಲಿ ಹೊಟ್ಟೆ ನೋವಿನ ಜೊತೆಗೆ ಎದೆಯಲ್ಲಿ ಬಿಗಿತದ ಭಾವನೆ, ಹೆದರಿಕೆ, ಮುಖದ ಮೇಲೆ ಗುಳ್ಳೆಗಳು(Pimples), ಎಲ್ಲದರ ಬಗ್ಗೆ ಮನಸ್ಥಿತಿ ಬದಲಾವಣೆ, ಕಿರಿಕಿರಿ ಶುರುವಾಗುತ್ತದೆ. ವಾಸ್ತವವಾಗಿ ಪ್ರತಿ ಮಹಿಳೆಯು (Woman) ತನ್ನದೇ ಆದ ಮುಟ್ಟಿನ ಲಕ್ಷಣಗಳನ್ನು ಹೊಂದಿರುತ್ತಾಳೆ. ಮುಟ್ಟಿನ ಮೊದಲ ದಿನದಂದು ನಿಮ್ಮ ದೇಹವು ನೀರನ್ನು ಉಳಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ನಿಮ್ಮ ತೂಕ ಹೆಚ್ಚಾಗಬಹುದು. ವಾಸ್ತವವಾಗಿ ಈ ದಿನಗಳಲ್ಲಿ ಕೆಲವು ಮಹಿಳೆಯರಿಗೆ ( Periods Health Issue) ಹೊಟ್ಟೆಯ ಮೇಲೆ ಊದಿಕೊಳ್ಳುತ್ತದೆ.

ಪಿರಿಯಡ್ಸ್ ಸಮಯದಲ್ಲಿ ತೂಕ ಹೆಚ್ಚಾಗಲು ಕಾರಣಗಳೇನು?

ಹಾರ್ಮೋನುಗಳ ವ್ಯತ್ಯಯ

ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಈಸ್ಟ್ರೊಜೆನ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಅಲ್ಪ ಪ್ರಮಾಣದ ಆಹಾರವು ದೇಹದಲ್ಲಿ ದ್ರವವನ್ನು ಉಳಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಪ್ರೊಜೆಸ್ಟರಾನ್ ಎಂಬ ಹಾರ್ಮೋನ್ ಸಹ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದರಿಂದಾಗಿ ನೀರಿನ ಧಾರಣವು ಪ್ರಾರಂಭವಾಗುತ್ತದೆ ಮತ್ತು ದೇಹವು ಇದ್ದಕ್ಕಿದ್ದಂತೆ ತೂಕವನ್ನು ಹೆಚ್ಚಿಸುತ್ತದೆ.

ಸೋಮಾರಿತನ

ಮುಟ್ಟಿನ ಸಮಯದಲ್ಲಿ ನೋವಿನಿಂದಾಗಿ ನಾವು ಸೋಮಾರಿತನವನ್ನು ಅನುಭವಿಸುತ್ತೇವೆ ಮತ್ತು ಏನನ್ನೂ ಮಾಡಲು ಬಯಸುವುದಿಲ್ಲ. ಜೊತೆಗೆ ದೇಹದಲ್ಲಿ ಆಯಾಸ ಉಳಿಯುತ್ತದೆ. ಇದರಿಂದ ನಾವು ವ್ಯಾಯಾಮ ಅಥವಾ ಜಿಮ್​ಗೆ ಹೋಗುವುದನ್ನು ನಿಲ್ಲಿಸುತ್ತೇವೆ. ಮತ್ತೊಂದೆಡೆ, ಈ ದಿನಗಳಲ್ಲಿ ಅತಿಯಾಗಿ ತಿನ್ನುವುದು ಮತ್ತು ನೀರಿನ ಧಾರಣದಿಂದಾಗಿ ಕ್ಯಾಲೊರಿ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುಟ್ಟಿನ ಸಮಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಕ್ಯಾಲೊರಿಗಳನ್ನು ಸುಡಬೇಕು.

ಜೀರ್ಣಕಾರಿ ಸಮಸ್ಯೆ

ಮಹಿಳೆಯರು ಹೊಟ್ಟೆ ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಮುಟ್ಟಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಈ ದಿನಗಳಲ್ಲಿ ಮಹಿಳೆಯರು ತಿನ್ನುವುದು ಜೀರ್ಣವಾಗುವುದಿಲ್ಲ. ಪ್ರೊಜೆಸ್ಟರಾನ್ ಮಟ್ಟದಲ್ಲಿನ ಹೆಚ್ಚಳದಿಂದಾಗಿ ಇದು ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ರೀತಿಯ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆಯೂ ಉಬ್ಬಿಕೊಳ್ಳುತ್ತದೆ ಮತ್ತು ಇದರಿಂದ ಮಹಿಳೆಯರಿಗೆ ಅಸಿಡಿಟಿ, ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ತೂಕವೂ ಹೆಚ್ಚಾಗುತ್ತದೆ.

ಹಸಿವು ಹೆಚ್ಚಾಗುತ್ತದೆ

ದೇಹದಲ್ಲಿ ಪ್ರೊಜೆಸ್ಟರಾನ್ ಹೆಚ್ಚಿದ ಪ್ರಮಾಣದಿಂದಾಗಿ ಹಸಿವು ಹೆಚ್ಚಾಗುತ್ತದೆ. ಈ ದಿನಗಳಲ್ಲಿ ಚೆನ್ನಾಗಿ ತಿನ್ನುತ್ತೇವೆ. ಹೊರಗಿನ ಆಹಾರವನ್ನು ತಿನ್ನುತ್ತೇವೆ. ಇದರಲ್ಲಿ ಚಾಕಲೇಟ್ ಇತ್ಯಾದಿಗಳನ್ನು ಮುಖ್ಯವಾಗಿ ಸೇವಿಸಲಾಗುತ್ತದೆ. ಇದರಿಂದ ಈ ದಿನಗಳಲ್ಲಿ ದೈಹಿಕ ಚಟುವಟಿಕೆಗಳು ಸಹ ಕಡಿಮೆಯಾಗುತ್ತವೆ. ಇದರಿಂದಾಗಿ ಕ್ಯಾಲೋರಿಗಳು ಹೆಚ್ಚುವರಿಯಾಗಿ ತೂಕ ಹೆಚ್ಚಾಗುತ್ತದೆ.

ಕಾಫಿ ಸೇವನೆ

ಮುಟ್ಟಿನ ಸಮಯದಲ್ಲಿ ಹಾರ್ಮೋನುಗಳು ಬದಲಾಗುತ್ತವೆ. ಈ ಸಮಯದಲ್ಲಿ ಮಹಿಳೆಯರು ಆಯಾಸವನ್ನು ನಿವಾರಿಸಲು ಮತ್ತು ನೋವನ್ನು ನಿವಾರಿಸಲು ಕಾಫಿ ಇತ್ಯಾದಿಗಳನ್ನು ಸೇವಿಸುತ್ತಾರೆ. ಇದರಿಂದಲೂ ತೂಕ ಹೆಚ್ಚಾಗುವ ಸಾಧತೆ ಇದೆ.

ಇದನ್ನೂ ಓದಿ: ಡಯಟ್​ ಮತ್ತು ಅತಿಯಾದ ವ್ಯಾಯಾಮದಿಂದ ಮಹಿಳೆಯರಲ್ಲಿ ಕಾಡುತ್ತಿದೆ ಅನಿಯಮಿತ ಮುಟ್ಟಿನ ಸಮಸ್ಯೆ

ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವಿನಿಂದ ಪರಿಹಾರ ಪಡೆಯಲು ಈ ಪಾನೀಯ ಕುಡಿಯಿರಿ

VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ