ಡಯಟ್ ಮತ್ತು ಅತಿಯಾದ ವ್ಯಾಯಾಮದಿಂದ ಮಹಿಳೆಯರಲ್ಲಿ ಕಾಡುತ್ತಿದೆ ಅನಿಯಮಿತ ಮುಟ್ಟಿನ ಸಮಸ್ಯೆ
ಡಯೆಟ್, ಅತಿಯಾದ ವ್ಯಾಯಾಮದ ಅಭ್ಯಾಸ ಮಹಿಳೆಯರ ಋತುಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಜಗತ್ತಿನ ಬಹುತೇಕ ಮಹಿಳೆಯರು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಡಯಟ್ ಅಥವಾ ಜಿಮ್, ವ್ಯಾಯಾಮ ಆರೋಗ್ಯ ಸುಧಾರಣೆಗೆ ಉತ್ತಮ ಅಭ್ಯಾಸ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಜಿಮ್, ವ್ಯಯಾಮ, ಡಯಟ್ ಮಹಿಳೆಯರ ಪಾಲಿಗೆ ಇತ್ತೀಚಿನ ದಿನಗಳಲ್ಲಿ ವಿಷವಾಗಿ ಪರಿಣಮಿಸಿದೆ ಎಂದು ತಜ್ಙರು ತಿಳಿಸಿದ್ದಾರೆ. ಹೌದು ಆಧುನಿಕ ಬದುಕಿನಲ್ಲಿ ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಮಹಿಳೆಯರು ಜಿಮ್, ಡಯಟ್ ಎಂದು ದೇಹವನ್ನು ಒಡ್ಡಿಕೊಳ್ಳುತ್ತಿದ್ದಾರೆ ಆದರೆ ಈ ಅಭ್ಯಾಸ ಮಹಿಳೆಯರ ಋತುಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಜಗತ್ತಿನ ಬಹುತೇಕ ಮಹಿಳೆಯರು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಗೀಳಿಗೆ ಒಳಗಾಗಿ ಮಹಿಳೆಯರು ಅತಿಯಾದ ಡಯಟ್ ಅಥವಾ ಜಿಮ್ ಮಾಡಿ ಫೋಟೋ ಹಂಚಿಕೊಳ್ಳುತ್ತಾರೆ. ಅದು ತಾರೆಗಳೇ ಇರಬಹುದು ಅಥವಾ ಇತರರೇ ಆಗಿರಬಹುದು. ನೆನಪಿಡಿ ಫೋಟೋದಲ್ಲಿ ಕಾಣುವುದೆಲ್ಲವೂ ಸತ್ಯವಲ್ಲ. ಅದರಲ್ಲಿ ಎಡಿಟೆಡ್ ಫೋಟೋಗಳು ಇರಬಹುದು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಡೆಯಟ್ ನಿಯಮಗಳನ್ನು ಪಾಲಿಸುವ ಮುನ್ನ ಎಚ್ಚರಿಕೆಯಿರಲಿ.
ಯುಕೆಯ ಪೌಷ್ಟಿಕತಜ್ಞರು ಹೈಪೋಥಾಲಾಮಿಕ್ ಅಮೆನೋರಿಯಾದ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೈಪೋಥಾಲಮಿಕ್ ಅಮೆನೋರಿಯಾ ಎನ್ನುವುದು ಹೈಪೋಥಾಲಮಸ್‌ಗೆ ಸಂಬಂಧಿಸಿದ ಸಮಸ್ಯೆ. ಇದರಿಂದ ಹಲವಾರು ತಿಂಗಳುಗಳವರೆಗೆ ಋತುಚಕ್ರ ನಿಲ್ಲುತ್ತದೆ. ಈ ಹೈಪೋಥಾಲಮಸ್ ಮೆದುಳಿನ ಮಧ್ಯಭಾಗದಲ್ಲಿದೆ. ಇದು ಸಂತಾನೋತ್ಪತ್ತಿಯನ್ನು ನಿಯಂತ್ರಿಸುತ್ತದೆ ಮತ್ತು ಗೊನಾಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ (GnRH) ಅನ್ನು ಉತ್ಪಾದಿಸುತ್ತದೆ. ಈ ಸಮಸ್ಯೆ ದೇಹದ ತೂಕ ನಷ್ಟ, ಅತಿಯಾದ ವ್ಯಾಯಾಮ ಮತ್ತು ಆಘಾತಕ್ಕೆ ಸಂಬಂಧಿಸಿದ ಒತ್ತಡದಿಂದ ಉಂಟಾಗುವ ರಿವರ್ಸಿಬಲ್ ಅಸ್ವಸ್ಥತೆಯಾಗಿದೆ.
ಋತುಚಕ್ರ ನಿಲ್ಲುವುದರಿಂದ ಏನಾಗುತ್ತದೆ? ಮಹಿಳೆಯರಲ್ಲಿ ಋತುಚಕ್ರ ಎನ್ನುವುದು ದೇಹದ ಸಂಪೂರ್ಣ ಆರೋಗ್ಯವನ್ನು ನಿಯಂತ್ರಿಸುತ್ತದೆ. ಅನಿಯಮಿತ ಮುಟ್ಟು ದೇಹದಲ್ಲಿ ಹಲವು ಸಮಸ್ಯೆಗಳನ್ನು ಉಲ್ಬಣಿಸುತ್ತವೆ. ಸಣ್ಣ ವಯಸ್ಸಿನಲ್ಲಿ ಮುಟ್ಟಿನ ಸಮಸ್ಯೆ ಎದುರಾಗುವುದರಿಂದ ಹೈಪೋಥಾಲಾಮಿಕ್ ಅಮೆನೋರಿಯಾವು ಅಂಡಾಶಯದಿಂದ ಕಡಿಮೆ ಈಸ್ಟ್ರೊಜೆನ್ ಉತ್ಪಾದನೆಗೆ ಕಾರಣವಾಗುತ್ತದೆ. ಈಸ್ಟ್ರೊಜೆನ್ ಕೊರತೆಯು ಆಸ್ಟಿಯೊಪೊರೋಸಿಸ್ ಅಪಾಯಕ್ಕೆ ನಿಮ್ಮನ್ನು ಒಡ್ಡುತ್ತದೆ. ತಿಳಿದರಿಲಿ ಈಸ್ಟ್ರೊಜೆನ್ ಹೃದ್ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಅವಧಿಗಳನ್ನು ಕಳೆದುಕೊಳ್ಳುವುದು ಸಹ ನಿಮಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಂದೊಡ್ಡುತ್ತವೆ. ಆದ್ದರಿಂದ ಋತುಚಕ್ರ ಸರಿಯಾಗಿರುವಂತೆ ನೋಡಿಕೊಳ್ಳುವುದು ಮಹಿಳೆಯರ ಆರೋಗ್ಯ ಸುರಕ್ಷತೆಗೆ ಅಗತ್ಯವಾಗಿದೆ.
ಋತುಚಕ್ರ ಮಹಿಳೆಯರ ಪಾಲಿನ ವರವಾಗಿದೆ. ಆದರೆ ಇತ್ತೀಚಿನ ದಿನಗಳ ಆಹಾರ ಶೈಲಿ, ಜಿಮ್ ಅಭ್ಯಾಸಗಳು ಅನಿಯಮಿತ ಮುಟ್ಟಿಗೆ ಕಾರಣವಾಗಿದೆ. ಆದ್ದರಿಂದ ಸೋಷಿಯಲ್ ಮೀಡಿಯಾಗಾಗಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಬದಲು ನಿಮ್ಮ ಆರೋಗ್ಯಕ್ಕೆ ಹೊಂದುವ, ನಿಯಮಿತ ಋತುಚಕ್ರಕ್ಕೆ ಪುಷ್ಟಿ ನೀಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಎನ್ನುತ್ತಾರೆ ತಜ್ಙರು.
ಇದನ್ನು ಓದಿ:
Blueberries: ಮಧುಮೇಹ ನಿಯಂತ್ರಣಕ್ಕೆ ನೇರಳೆ ಹಣ್ಣುಗಳು ಸಹಕಾರಿ: ತಜ್ಞರ ಸಲಹೆಗಳೇನು?
Published On - 11:43 am, Wed, 12 January 22