
ಹೆಚ್ಚಿನವರಿಗೆ ಅದರಲ್ಲೂ ಹುಡುಗಿಯರಿಗೆ ಗುಲಾಬಿ ಬಣ್ಣ (pink color) ಎಂದ್ರೆ ಸಕತ್ ಇಷ್ಟ. ಬಟ್ಟೆ, ಬ್ಯಾಗ್‌ನಿಂದ ಹಿಡಿದು ಅವರು ಖರಿದಿಸುವ ಬಹುತೇಕ ಎಲ್ಲಾ ವಸ್ತುಗಳು ಪಿಂಕ್ ಕಲರ್‌ನಲ್ಲಿಯೇ ಇರುತ್ತವೆ. ಅದರಲ್ಲೂ ಗುಲಾಬಿ ಬಣ್ಣದ ಬಟ್ಟೆ, ಸೀರೆಗಳನ್ನು ಪದೇ ಪದೇ ಖರೀದಿ ಮಾಡುತ್ತಿರುತ್ತಾರೆ. ಹೀಗೆ ನಿಮ್ಗೂ ಕೂಡ ಪಿಂಕ್ ಕಲರ್ ಎಂದ್ರೆ ಬಲು ಇಷ್ಟವೇ? ನಿಮ್ಮಿಷ್ಟದ ಈ ಬಣ್ಣದಿಂದಲೂ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದು. ಹೌದು ನಿಮ್ಮ ಮನಸ್ಥಿತಿ, ಗುಣಸ್ವಭಾವ ಮತ್ತು ವ್ಯಕ್ತಿತ್ವ ಎಂತಹದ್ದು ಎಂಬುದನ್ನು ನಿಮ್ಮಿಷ್ಟದ ಈ ಬಣ್ಣದಿಂದ ತಿಳಿಯಬಹುದು. ಹಾಗಿದ್ರೆ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ (Personality Test) ಗುಲಾಬಿ ಬಣ್ಣವನ್ನು ಇಷ್ಟಪಡುವವರ ಸೀಕ್ರೆಟ್ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಿರಿ.
ಗುಲಾಬಿ ಬಣ್ಣವನ್ನು ಇಷ್ಟಪಡುವವರು ತುಂಬಾನೇ ಸಹಾನುಭೂತಿಯುಳ್ಳ ಹಾಗೂ ಪ್ರೀತಿಗೆ ಪ್ರಾಮುಖ್ಯತೆಯನ್ನು ನೀಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಮುಗ್ಧ ಮತ್ತು ಅತಿಯಾದ ಭಾವನಾತ್ಮಕ ವ್ಯಕ್ತಿಗಳೂ ಹೌದು. ಜೊತೆಗೆ ಇವರು ದೃಢ ನಿಶ್ಚಯದ ವ್ಯಕ್ತಿ, ಸ್ನೇಹಪರ, ಆದರ್ಶವಾದಿ, ಶಾಂತಿಯುತ ಮತ್ತು ಸೃಜನಶೀಲ ವ್ಯಕ್ತಿಗಳು. ಇವರು ಯಾವಾಗಲೂ ಸಣ್ಣ ಸಣ್ಣ ವಿಷಯಕ್ಕೂ ತುಂಬಾನೇ ಉತ್ಸುಹಕರಾಗಿರುತ್ತಾರೆ. ಬಹಿರ್ಮುಖಿಗಳಾದ ಇವರು ಹೊಸ ಜನರನ್ನು ಭೇಟಿಯಾಗಲು, ಹೊಸ ವಿಷಯಗಳನ್ನು ಕಲಿಯಲು, ಮಾತನಾಡಲು ತುಂಬಾನೇ ಇಷ್ಟಪಡುತ್ತಾರೆ.
ಗುಲಾಬಿ ಬಣ್ಣವನ್ನು ಇಷ್ಟಪಡುವವರ ಸಂಬಂಧದ ವಿಷಯಕ್ಕೆ ಬರುವುದಾದರೆ, ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳಾದ ಇವರು ತಮ್ಮ ಸಂಗಾತಿಯ ಭಾವನೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಸಂಗಾತಿಯ ಇಷ್ಟಕ್ಕೆ ಹೊಂದಿಕೆಯಾಗುವಂತೆ ಜೀವನ ನಡೆಸಲು ಇಷ್ಟಪಡುತ್ತಾರೆ. ಸಂಗಾತಿಯ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿರುತ್ತಾರೆ, ತುಂಬಾನೇ ಪ್ರೀತಿಸುತ್ತಾರೆ. ಜೊತೆಗೆ ಪ್ರೀತಿಯ ವಿಷಯದಲ್ಲಿ ಫ್ಯಾಂಟಸಿ ಜಗತ್ತಿನಲ್ಲಿ ತೇಳುತ್ತಿರುತ್ತಾರೆ. ಹಾಗಾಗಿ ಕೆಲವೊಂದು ಬಾರಿ ಇವರಿಗೆ ಪ್ರೀತಿಯಲ್ಲಿ ನೋವುಂಟಾಗುವ ಸಾಧ್ಯತೆ ಇರುತ್ತದೆ.
ಇನ್ನೂ ಗುಲಾಬಿ ಬಣ್ಣವನ್ನು ಇಷ್ಟಪಡುವವರ ಕೆಲಸದ ವಿಚಾರಗಳನ್ನು ನೋಡುವುದಾದರೆ, ಇವರಿಗೆ ವೈಯಕ್ತಿಕ ಮತ್ತು ವೈಯಕ್ತಿಕ ಜೀವನದ ನಡುವೆ ಗೆರೆ ಎಳೆಯಲು ತುಂಬಾನೇ ಕಷ್ಟವಾಗುತ್ತದೆ. ಇವರು ಸಹದ್ಯೋಗಿಗಳೊಂದಿಗೆ ಯಾವಾಗಲೂ ಸ್ನೇಹಪರವಾಗಿ ವರ್ತಿಸುತ್ತಾರೆ. ಜೊತೆಗೆ ಕಾರ್ಯಕ್ರಮಗಳನ್ನು ಯೋಜಿಸುವುದು, ಸಂಘಟಿಸುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಆಕ್ಟಿವ್ ಆಗಿರುತ್ತಾರೆ. ಬುದ್ಧಿವಂತ ಮತ್ತು ಹಾಸ್ಯ ಸ್ವಭಾವದವರಾದ ಇವರು ಕ್ರಮಬದ್ಧವಾಗಿ ಎಲ್ಲವನ್ನೂ ನಿಭಾಯಿಸುತ್ತಾರೆ.
ಇದನ್ನೂ ಓದಿ: ನೀವು ಮಲಗುವ ಭಂಗಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ಇನ್ನೊಂದು ಪಿಂಕ್ ಬಣ್ಣವನ್ನು ಇಷ್ಟಪಡುವವರ ಸೀಕ್ರೆಟ್ ಏನೆಂದ್ರೆ, ಈ ಬಣ್ಣವನ್ನು ಇಷ್ಟಪಡುವ ಜನರು ಸೌಂದರ್ಯಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಈ ಸೌಂದರ್ಯವು ಪ್ರಕೃತಿಯದ್ದಾಗಿರಲಿ ಅಥವಾ ಇನ್ನೊಬ್ಬ ವ್ಯಕ್ತಿಯದ್ದಾಗಿರಲಿ, ಅವರು ಬಹಳ ಬೇಗನೆ ಆಕರ್ಷಿತರಾಗುತ್ತಾರೆ. ಒಬ್ಬ ಸುಂದರ ವ್ಯಕ್ತಿ ಪ್ರೀತಿಯಿಂದ ಮಾತನಾಡಿದರೆ, ಆ ವ್ಯಕ್ತಿಯನ್ನು ಇವರು ಸುಲಭವಾಗಿ ನಂಬುತ್ತಾರೆ. ಇದರ ಹೊರತಾಗಿ ಈ ಬಣ್ಣವನ್ನು ಇಷ್ಟಪಡುವ ಜನರ ದೊಡ್ಡ ಗುಣವೆಂದರೆ ಇವರ ಆತ್ಮವಿಶ್ವಾಸ. ಇವರು ಇತರರಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ತುಂಬಾ ಮುಗ್ಧರಾದ ಇವರು ಯಾರಿಗೂ ಕೇಡು ಬಯಸದ ವ್ಯಕ್ತಿಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ