
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇತರರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ, ವರ್ತಿಸುತ್ತಾನೆ ಎಂಬುದರ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು (Personality Test) ಅಳೆಯುತ್ತಾರೆ. ಇದಲ್ಲದೆ ಆತ ಮಾತನಾಡುವ ರೀತಿ, ಹಾಕಿಕೊಳ್ಳುವ ಬಟ್ಟೆಯಿಂದಲೂ ವ್ಯಕ್ತಿತ್ವ ಅಳೆಯುತ್ತಾರೆ. ಇದರ ಹೊರತಾಗಿ ಕಣ್ಣಿನ ಬಣ್ಣ, ಮೂಗಿನ ಆಕಾರ, ಕೂದಲು, ಹೊಕ್ಕುಳ ಆಕಾರ ಸೇರಿದಂತೆ ದೇಹಾಕಾರದ ಮೂಲಕವೂ ವ್ಯಕ್ತಿಯ ನಿಗೂಢ ಗುಣ ಸ್ವಭಾವ (nature) ಹೇಗಿದೆ ಎಂಬುದನ್ನು ತಿಳಿಯಬಹುದು. ಅದೇ ರೀತಿ ನಿಮ್ಮ ಪಾದಗಳ ಆಕಾರ (shape of feet) ಹೇಗಿದೆ ಎಂಬುದರ ಮೇಲೂ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಹೌದು ನೀವು ಬಹುಮುಖ ವ್ಯಕ್ತಿತ್ವದವರೇ ಅಥವಾ ಸ್ವಾವಲಂಬಿ ಜೀವನವನ್ನು ನಡೆಸಲು ಇಷ್ಟಪಡುವವರೇ ಎಂದು ನಿಮ್ಮ ಪಾದಗಳ ಆಕಾರದ ಮೂಲಕ ತಿಳಿಯಿರಿ.
ಪ್ರತಿಯೊಬ್ಬರ ಪಾದಗಳ ಆಕಾರವೂ ಭಿನ್ನವಾಗಿರುತ್ತವೆ. ಕೆಲವರ ಪಾದ ಚಪ್ಪಟೆಯಾಗಿದ್ದರೆ, ಕೆಲವರು ಎತ್ತರದ ಪಾದವನ್ನು ಹೊಂದಿರುತ್ತಾರೆ. ಈ ನಿಮ್ಮ ಪಾದದ ಆಕಾರದಿಂದ ನೀವು ಬಹಿರ್ಮುಖಿ ವ್ಯಕ್ತಿತ್ದವರೇ ಅಥವಾ ಸ್ವಾವಲಂಬಿ ಜೀವನ ನಡೆಸಲು ಇಷ್ಟಪಡುವ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.
ಚಪ್ಪಟೆಯಾಕಾರದ ಪಾದ: ನಿಮ್ಮ ಪಾದದ ಆಕಾರ ಚಪ್ಪಟೆಯಾಗಿದ್ದರೆ, ನೀವು ವಾಸ್ತವಿಕವಾಗಿ ಜೀವಿಸುವ ಮತ್ತು ಬಹಿರ್ಮುಖಿ, ಬರೆಯುವ ಮತ್ತು ಸ್ನೇಹಪರ ಸ್ವಭಾವವನ್ನು ಹೊಂದಿರುವವರಾಗಿರುತ್ತೀರಿ. ಸ್ನೇಹಪರ ವ್ಯಕ್ತಿಯಾಗಿರುವ ನೀವು ಒಂಟಿಯಾಗಿರಲು ಇಷ್ಟಪಡುವುದಿಲ್ಲ. ಜನರ ಗುಂಪಿನೊಂದಿಗೆ ಬೆರೆಯುವುದು, ಅವರೊಂದಿಗೆ ಖುಷಿಖುಷಿಯಾಗಿರುವುದು ನಿಮಗೆ ಸಂತೋಷವನ್ನು ನೀಡುತ್ತದೆ. ಇಷ್ಟು ಮಾತ್ರವಲ್ಲದೆ ಭಾವನಾತ್ಮಕವಾಗಿರುವ ಹಾಗೂ ಕುಟುಂಬವನ್ನು ಹೆಚ್ಚು ಪ್ರೀತಿಸುವ ನೀವು, ನಿಮ್ಮ ಜೀವನವನ್ನು ಅದು ಬಂದಂತೆ ಸ್ವೀಕರಿಸುವವರಾಗಿರುತ್ತೀರಿ.
ಇದನ್ನೂ ಓದಿ: ವೃದ್ಧ, ಪಕ್ಷಿ, ಪರ್ವತ ಮೊದಲು ಕಂಡಿದ್ದೇನು? ನಿಮ್ಮ ಲವ್ ಲೈಫ್ ಹೇಗಿರುತ್ತೆ ಎಂಬುದನ್ನು ತಿಳಿಸುತ್ತೆ ಈ ಚಿತ್ರ
ಎತ್ತರದ ಪಾದ: ನಿಮ್ಮ ಪಾದದ ಆಕಾರ ಎತ್ತರವಾಗಿದ್ದರೆ, ನೀವು ಹೆಚ್ಚು ಬೌದ್ಧಿಕ, ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಜೀವನವನ್ನು ನಡೆಸಲು ಇಷ್ಟಪಡುವ ವ್ಯಕ್ತಿಯಾಗಿರುತ್ತೀರಿ. ಅಲ್ಲದೆ ನೀವು ಸ್ವಂತವಾಗಿ ಯೋಚಿಸುವ, ಕನಸುಗಳನ್ನು ಕಾಣುವ, ಬುದ್ಧಿವಂತ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ಕೂಡಾ ಹೊಂದಿರುತ್ತೀರಿ. ಹೊಸ ವಿಷಯಗಳನ್ನು ಕಲಿಯಲು ನೀವು ತುಂಬಾನೇ ಉತ್ಸುಹಕರಾಗಿರುವುದರಿಂದ, ನೀವು ಬಹಳ ಬುದ್ಧಿವಂತ ವ್ಯಕ್ತಿ ಕೂಡಾ ಆಗಿರುತ್ತೀರಿ. ಭವಿಷ್ಯದ ಬಗ್ಗೆ ಬಹಳಷ್ಟು ಕನಸು ಕಾಣುವ ನೀವು, ಆ ಕನಸುಗಳನ್ನು ನನಸಾಗಿಸಲು ಎಲ್ಲಾ ರೀತಿಯಲ್ಲೂ ಶ್ರಮ ಪಡುತ್ತೀರಿ. ಸರಿ-ತಪ್ಪುಗಳ ಬಗ್ಗೆ ಚೆನ್ನಾಗಿ ತಿಳಿದಿರುವ ನೀವು, ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೀರಿ.
ಗಮನಿಸಿ: ಈ ವ್ಯಕ್ತಿತ್ವ ಪರೀಕ್ಷೆಯು ಸಾಮಾನ್ಯ ಒಳನೋಟಗಳನ್ನು ಒಳಗೊಂಡಿದ್ದು, ಇದು ಮನರಂಜನೆಯ ಉದ್ದೇಶವನ್ನು ಮಾತ್ರ ಹೊಂದಿದೆ. ನಿಮ್ಮ ವ್ಯಕ್ತಿತ್ವವು ನಿಮ್ಮ ಪಾದದ ಆಕಾರದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ