Personality Test: ಉಗುರು ಕಚ್ಚುವ ಅಭ್ಯಾಸ ಬಹಿರಂಗಪಡಿಸುತ್ತೆ ವ್ಯಕ್ತಿಯ ರಹಸ್ಯ ಗುಣಸ್ವಭಾವ

ಉಗುರು ಕಚ್ಚುವ ಕೊಳಕು ಅಭ್ಯಾಸ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿದ್ದರೂ ಹಲವರು ಉಗುರು ಕಚ್ಚುತ್ತಲೇ ಇರುತ್ತಾರೆ. ಈ ಅಭ್ಯಾಸ ಸಹ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳುತ್ತವೆಯಂತೆ. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಪದೇ ಪದೇ ಉಗುರು ಕಚ್ಚುವವರ ಗುಣ ಸ್ವಭಾವ ಹೇಗಿದೆ ಎಂಬುದನ್ನು ನೋಡೋಣ.

Personality Test: ಉಗುರು ಕಚ್ಚುವ ಅಭ್ಯಾಸ ಬಹಿರಂಗಪಡಿಸುತ್ತೆ ವ್ಯಕ್ತಿಯ ರಹಸ್ಯ ಗುಣಸ್ವಭಾವ
ವ್ಯಕ್ತಿತ್ವ ಪರೀಕ್ಷೆ
Image Credit source: Getty Images

Updated on: Sep 07, 2025 | 5:17 PM

ಅನೇಕ ಜನರಿಗೆ ಉಗುರು ಕಚ್ಚುವ (nail biting habit) ಅಭ್ಯಾಸವಿದೆ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ ಎಂದರೂ ಉಗುರು ಕಚ್ಚುತ್ತಲೇ ಇರುತ್ತಾರೆ. ಈ ದುರಾಭ್ಯಾಸವೂ ಸಹ ವ್ಯಕ್ತಿಯ ನಿಗೂಢ ವ್ಯಕ್ತಿತ್ವ (Personality), ಗುಣ ಸ್ವಭಾವದ ಬಗ್ಗೆ ತಿಳಿಸುತ್ತಂತೆ. ಹೌದು ನಾವು ನಮ್ಮ ಪಾದದ ಆಕಾರ, ಮೂಗಿನ ಆಕಾರ, ಕೂದಲು, ಕೈ ಬೆರಳಿನ ಆಕಾರ, ಹಸ್ತ ರೇಖೆಯ ಮೂಲಕ ನಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಸುವಂತೆ, ಉಗುರು ಕಚ್ಚುವ ಅಭ್ಯಾಸವೂ ವ್ಯಕ್ತಿಯ ರಹಸ್ಯ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸುತ್ತಂತೆ. ಹೀಗೆ ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ? ಈ ಅಭ್ಯಾಸ ಮುಖಾಂತರ ನಿಮ್ಮ ಸೀಕ್ರೆಟ್‌ ಪರ್ಸನಾಲಿಟಿ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಉಗುರು ಕಚ್ಚುವ ಅಭ್ಯಾಸವೂ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ:

ಪರಿಪೂರ್ಣತವಾದಿಗಳು: ಉಗುರು ಕಚ್ಚುವವರ ಸ್ವಭಾವ ಹೇಗಿದೆ ಎಂಬುದನ್ನು ನೋಡುವುದಾದರೆ, ಇವರುಗಳು ಪರಿಪೂರ್ಣತವಾದಿಗಳಾಗಿರುತ್ತಾರೆ. ಅವರು ತಮ್ಮ ಕೆಲಸದಲ್ಲಿ ಸಣ್ಣ ದೋಷ ಅಥವಾ ವ್ಯತ್ಯಾಸವನ್ನೂ ಇಷ್ಟಪಡುವುದಿಲ್ಲ. ಮತ್ತು ಅವರು ತಮ್ಮ ನಿರೀಕ್ಷೆಗಳಿಗೆ ತಕ್ಕಂತೆ ವಿಷಯ ಅಥವಾ ಕೆಲಸಗಳು ನಡೆಯದಾಗ ಒತ್ತಡಕ್ಕೆ ಒಳಗಾಗುತ್ತಾರೆ. ಮತ್ತು ಇದೇ ಒತ್ತಡದಿಂದ ತಮ್ಮ ಉಗುರನ್ನು ಕಚ್ಚಲು ಪ್ರಾರಂಭಿಸುತ್ತಾರೆ.

ಶಕ್ತಿಶಾಲಿ ವ್ಯಕ್ತಿತ್ವ: ಕೆಲವು ಮನಶಾಸ್ತ್ರಜ್ಞರು ಉಗುರು ಕಚ್ಚುವುದು ಹೆಚ್ಚಿನ ಶಕ್ತಿಯ ಸಂಕೇತವಾಗಿರಬಹುದು ಎಂದು ಹೇಳುತ್ತಾರೆ. ಇಂತಹ ಜನರು ತಮ್ಮೊಳಗೆ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತಾರೆ, ಅದನ್ನು ಅವರು ಸಂಪೂರ್ಣವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಉಗುರನ್ನು ಕಚ್ಚುತ್ತಾರೆ.

ಇದನ್ನೂ ಓದಿ
ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ ಎಂಬುದನ್ನು ಈ ಚಿತ್ರದ ಮೂಲಕ ತಿಳಿಯಿರಿ
ಹಸ್ತದ ಹೃದಯ ರೇಖೆಯಿಂದಲೂ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ
ಗುಲಾಬಿ ಬಣ್ಣವನ್ನು ಇಷ್ಟಪಡುವವರು ಎಂತಹ ವ್ಯಕ್ತಿಗಳು ಗೊತ್ತಾ?
ನೀವು ಮಲಗುವ ಭಂಗಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಇದನ್ನೂ ಓದಿ: ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ ಎಂಬುದನ್ನು ಚಿತ್ರದ ಮೂಲಕ ತಿಳಿಯಿರಿ

ಅಂತರ್ಮುಖಿ ಸ್ವಭಾವ: ಜನ ಸಂದಣಿ ಅಥವಾ ಸಂಭಾಷಣೆಯ ಮಧ್ಯದಲ್ಲಿ ನೀವೇನಾದರೂ ಉಗುರು ಕಚ್ಚಿದರೆ ನೀವು ಅಂತರ್ಮುಖಿ ಸ್ವಭಾವದವರೆಂದು ಅರ್ಥ. ಹೀಗೆ ಉಗುರು ಕಚ್ಚುವವರು ಹೆಚ್ಚಾಗಿ ಜನರೊಂದಿಗೆ ಬೆರೆಯುವುದಿಲ್ಲ, ಉಗುರು ಕಚ್ಚುತ್ತಾ ತಮ್ಮ ಆಲೋಚನೆಗಳಲ್ಲಿಯೇ ಕಳೆದು ಹೋಗುತ್ತಾರೆ.

ತಾಳ್ಮೆಯ ಕೊರತೆ: ಉಗುರು ಕಚ್ಚುವ ಅಭ್ಯಾಸ ತಾಳ್ಮೆಯ ಕೊರತೆಯನ್ನು ತೋರಿಸುತ್ತದೆ. ಕೆಲವು ಕೆಲಸಗಳು ವಿಳಂಬವಾದಾಗ ಅಥವಾ ಕಾಯಬೇಕಾದಾಗ, ಕೆಲವರು ತಮ್ಮ ಉಗುರುಗಳನ್ನು ಕಚ್ಚಲು ಪ್ರಾರಂಭಿಸುತ್ತಾರೆ. ಇದರರ್ಥ ಅವರು ಬೇಗನೆ ಫಲಿತಾಂಶಗಳನ್ನು ಪಡೆಯಲು ಬಯಸುವ ಮತ್ತು ಉತ್ಸಾಹಭರಿತ ಸ್ವಭಾವದವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ