
ವ್ಯಕ್ತಿತ್ವ ಪರೀಕ್ಷೆಗಳು (Personality Test) ನಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಲಿರುವ ಒಂದು ಮೋಜಿನ ಮಾರ್ಗವಾಗಿದೆ. ಇವುಗಳು ನಾವು ಹೇಗೆ ಯೋಚಿಸುತ್ತೇವೆ, ನಿರ್ಧಾರಗಳನ್ನು ಯಾವ ರೀತಿ ತೆಗೆದುಕೊಳ್ಳುತ್ತೇವೆ, ನಮ್ಮ ಭಾವನೆಗಳು ಹೇಗಿವೆ, ನಾವು ಅಂತರ್ಮುಖಿಯೇ, ಬಹಿರ್ಮುಖಿಯೇ, ಹೃದಯವಂತರೇ ಎಂಬಿತ್ಯಾದಿ ಅಂಶಗಳ ಬಗ್ಗೆ ತಕ್ಕ ಮಟ್ಟಿಗೆ ತಿಳಿಸುತ್ತದೆ. ಇಲ್ಲೊಂದು ಅದೇ ರೀತಿ ಪರ್ಸನಾಲಿಟಿ ಟೆಸ್ಟ್ ಫೋಟೋವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿರುವ ಮೂರು ಕುರ್ಚಿಗಳ ಪೈಕಿ ನೀವು ಯಾವ ಕುರ್ಚಿಯನ್ನು ಆಯ್ಕೆ ಮಾಡುತ್ತೀರಿ ಎಂಬುದರ ಮೇಲೆ ನೀವೆಂಥಾ ವ್ಯಕ್ತಿ, ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.
ಈ ಮೇಲಿನ ಚಿತ್ರದಲ್ಲಿ ಮೂರು ವಿಭಿನ್ನ ಕುರ್ಚಿಗಳಿವೆ. ಅದರಲ್ಲಿ ನಿಮಗೆ ಇಷ್ಟವಾದ ಕುರ್ಚಿ ಯಾವುದು ಎಂಬುದರ ಮೇಲೆ ನಿಮ್ಮ ಭಾವನೆ, ಗುಪ್ತ ವ್ಯಕ್ತಿತ್ವದ ಲಕ್ಷಣ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.
ಸರಳವಾಗಿರುವ ಮರದ ಕುರ್ಚಿ: ಈ ಚಿತ್ರದಲ್ಲಿ ನಿಮಗೆ ಸರಳವಾಗಿರುವಂತಹ ಮರದ ಕುರ್ಚಿ ಇಷ್ಟವಾದರೆ ನೀವು ಜೀವನದಲ್ಲಿ ಸ್ಥಿರ ಮತ್ತು ಪ್ರಾಯೋಗಿಕವಾಗಿರುವುದನ್ನು ಗೌರವಿಸುವ ವ್ಯಕ್ತಿಯೆಂದು ಅರ್ಥ. ನೀವು ಗೊಂದಲದಲ್ಲಿ ಸುತ್ತುವರೆದಿರುವ ಬದಲು ವಿಷಯಗಳನ್ನು ಸ್ಪಷ್ಟವಾಗಿ ನೋಡಲು ಇಷ್ಟಪಡುತ್ತೀರಿ. ಪ್ರಾಮಾಣಿಕತೆಯನ್ನು ಗೌರವಿಸುತ್ತೀರಿ. ದೃಢನಿಶ್ಚಯದಿಂದ ಇರುವ ನೀವು ಒತ್ತಡದಲ್ಲಿಯೂ ವಿಶ್ವಾಸಾರ್ಹರಾಗಿರುತ್ತೀರಿ. ನೀವು ಮುಖ್ಯವಾಗಿ ಅತಿಯಾದ ಮಾತು ಅಥವಾ ಅನಗತ್ಯ ನಾಟಕವಿಲ್ಲದೆ ಜೀವನವನ್ನು ನಡೆಸಲು ಇಷ್ಟಪಡುತ್ತೀರಿ.
ಹಸಿರು ಬಣ್ಣದ ಕುರ್ಚಿ: ಈ ಚಿತ್ರದಲ್ಲಿ ನೀವು ಹಸಿರು ಬಣ್ಣದ ಕುರ್ಚಿಯನ್ನು ಆಯ್ಕೆ ಮಾಡಿದರೆ ನೀವು ಭಾವನಾತ್ಮಕವಾಗಿ ಅರ್ಥಗರ್ಭಿತರಾಗಿರುವ ವ್ಯಕ್ತಿ ಎಂದರ್ಥ. ನೀವು ಸೌಕರ್ಯ ಮತ್ತು ಸೌಂದರ್ಯ ಎರಡರ ಬಗ್ಗೆಯೂ ಸಮಾನವಾಗಿ ಕಾಳಜಿ ವಹಿಸುತ್ತೀರಿ. ನೀವು ಪ್ರತಿಯೊಂದು ವಿಷಯಗಳ ಬಗ್ಗೆಯೂ ಆಳವಾಗಿ ಯೋಚಿಸುತ್ತೀರಿ, ನಿಜವಾದ ಸಂಪರ್ಕಕ್ಕಾಗಿ ಹಂಬಲಿಸುತ್ತೀರಿ. ಜೊತೆಗೆ ನೀವು ಮೃದು ಸ್ವಭಾವದ ವ್ಯಕ್ತಿಯೂ ಹೌದು. ನೀವು ಸ್ನೇಹಶೀಲ, ಸೃಜನಶೀಲ ಮತ್ತು ಸಾಮರಸ್ಯವನ್ನು ಅನುಭವಿಸುವ ವಾತಾವರಣದಲ್ಲಿ ಇರಲು ಇಷ್ಟಪಡುವ ವ್ಯಕ್ತಿಗಳು.
ಇದನ್ನೂ ಓದಿ: ಗಲ್ಲದ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ
ವೃತ್ತಾಕಾರದ ಕುರ್ಚಿ: ನೀವು ಮೇಲಿನ ಚಿತ್ರದಲ್ಲಿ ವೃತ್ತಾಕಾರದ ಕುರ್ಚಿಯನ್ನು ಆಯ್ಕೆ ಮಾಡಿದರೆ, ನೀವು ಸೃಜನಶೀಲರು, ವಿನೋದಪ್ರಿಯರು ಎಂದರ್ಥ. ನಿಮಗೆ ಕಠಿಣ ನಿಯಮಗಳು ಇಷ್ಟವಿಲ್ಲ, ನೀವು ನೀವಾಗಿಯೇ ಇರಲು ಇಷ್ಟಪಡುವ ವ್ಯಕ್ತಿಗಳು. ನೀವು ಎಲ್ಲರೊಂದಿಗೂ ಹೊಂದಿಕೊಳ್ಳುವ ನೀವು ಪ್ರತಿಯೊಬ್ಬರ ಜೊತೆಗೂ ಮೋಜಿನಿಂದ ಇರಲು ಬಯಸುತ್ತೀರಿ. ಈ ಗುಣದಿಂದ ನೀವು ಯಾವಾಗಲೂ ಇತರರ ಕಣ್ಣಿಗೆ ಉತ್ಸಾಹಭರಿತ ವ್ಯಕ್ತಿಗಳಾಗಿ ಕಾಣುತ್ತೀರಿ. ಅಲ್ಲದೆ ನೀವು ಯಾವಾಗಲೂ ನೀವು ಮಾಡುವ ಕೆಲಸದಲ್ಲಿ ಹೊಸ ಆಲೋಚನೆಗಳು ಮತ್ತು ಬಣ್ಣವನ್ನು ತುಂಬುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ