Personality Test: ಈ ಚಿತ್ರದಲ್ಲಿ ಒಂದು ಪಾದರಕ್ಷೆ ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ
ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿ ಹಲವಾರು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳ ಮೂಲಕ ನೀವು ಸಹ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಅದಲ್ಲಿ ನಿಮ್ಮಿಷ್ಟದ ಒಂದು ಪಾದರಕ್ಷೆಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಸಾಮಾವ್ಯವಾಗಿ ಜನರು ನಮ್ಮ ನಡವಳಿಕೆ, ಮಾತು, ನಾವು ಧರಿಸುವ ಬಟ್ಟೆಯ ಮೂಲಕ ಜನರು ನಮ್ಮ ವ್ಯಕ್ತಿತ್ವವನ್ನು ಅಳೆಯುತ್ತಾರೆ. ಇಷ್ಟು ಮಾತ್ರವಲ್ಲದೆ ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕವೂ ನಮ್ಮ ಪರ್ಸನಾಲಿಟಿ ಹೇಗಿದೆ ಎಂಬುದನ್ನು ನಾವೇ ತಿಳಿಯಬಹುದು. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಂತಹ ಪರ್ಸನಾಲಿಟಿ ಟೆಸ್ಟ್‌ಗಳ ಮೂಲಕ ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ, ಕೋಪಿಷ್ಠರೇ, ಸಹಾನುಭೂತಿಯನ್ನು ಹೊಂದಿದವರೇ ಎಂಬುದನ್ನೆಲ್ಲಾ ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅಂತಹದ್ದೇ ಚಿತ್ರ ಇದೀಗ ವೈರಲ್ ಆಗಿದ್ದು, ಇದರಲ್ಲಿರುವ ಪಾದರಕ್ಷೆಯ ಗುಂಪಿನಲ್ಲಿ ಒಂದನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರದಲ್ಲಿ ಒಂದು ಪಾದರಕ್ಷೆಯನ್ನು ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ:
ಬ್ಯಾಲೆ ಫ್ಲಾಟ್‌ಗಳು: ನೀವು ಬ್ಯಾಲೆ ಪಾದರಕ್ಷೆಯನ್ನು ಆಯ್ಕೆ ಮಾಡಿದರೆ ನೀವು ಶಾಂತ, ಸ್ಥಿರ ಮತ್ತು ಸೃಜನಶೀಲ ವ್ಯಕ್ತಿ ಎಂದರ್ಥ. ನೀವು ನಾಟಕ ಮತ್ತು ಅವ್ಯವಸ್ಥೆಯನ್ನು ಇಷ್ಟಪಡುವುದಿಲ್ಲ. ನೀವು ಶಾಂತಿಯುತವಾಗಿರಲು ಇಷ್ಟಪಡುವ ಸ್ವಭಾವವನ್ನು ಹೊಂದಿದರಾಗಿರುತ್ತೀರಿ.
ಲೆದರ್ ಬೂಟುಗಳು: ನೀವು ಈ ಚಿತ್ರದಲ್ಲಿ ಲೆದರ್ ಬೂಟುಗಳನ್ನು ಆಯ್ಕೆ ಮಾಡಿದರೆ, ನೀವು ವಿಶ್ವಾಸಾರ್ಹರು, ಪ್ರಾಯೋಗಿಕರು ಮತ್ತು ಶ್ರಮಶೀಲರು ಎಂದರ್ಥ. ನೀವು ಸಮಸ್ಯೆಗಳನ್ನು ನೇರವಾಗಿ ಎದುರಿಸುತ್ತೀರಿ ಅಲ್ಲದೆ ನೀವು ಶಿಸ್ತನ್ನು ಗೌರವಿಸುವ ನೀವು ಯೋಜನೆಗಳನ್ನು ರೂಪಿಸಲು ಇಷ್ಟಪಡುತ್ತೀರಿ.
ಹೈ ಹೀಲ್ಸ್ ಬೂಟುಗಳು: ನಿಮಗೆ ಹೈ ಹೀಲ್ಸ್ ಬೂಟ್ಸ್ ಇಷ್ಟವಾದರೆ ನೀವು ಶಾಂತ ಕ್ಷಣಗಳನ್ನು ಇಷ್ಟಪಡುವವರು ಎಂದರ್ಥ. ಕಲಾತ್ಮಕವಾಗಿ ಯೋಚಿಸುವ ನೀವು ಹೊರಗಡೆ ಸಮಯ ಕಳೆಯಲು ಇಷ್ಟಪಡುತ್ತೀರಿ. ಸರಳ ವಿಷಯಗಳಲ್ಲೂ ಹೆಚ್ಚಿನ ಸೌಂದರ್ಯವನ್ನು ಕಾಣುತ್ತೀರಿ.
ರನ್ನಿಂಗ್ ಶೂಗಳು: ಈ ಚಿತ್ರದಲ್ಲಿ ನೀವು ರನ್ನಿಂಗ್ ಶೂಗಳನ್ನು ಆಯ್ಕೆ ಮಾಡಿದರೆ, ನೀವು ನಿರಾಳ ಸ್ವಭಾವದವರು ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವವರು ಎಂದರ್ಥ. ಪರಾನುಭೂತಿಯನ್ನು ಹೊಂದಿರುವ ನಿಮ್ಮನ್ನು ಇತರರು ಇಷ್ಟಪಡುತ್ತಾರೆ. ಜೊತೆಗೆ ಜನರು ನಿಮ್ಮೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.
ಫ್ಲಿಪ್ ಫ್ಲಾಪ್ಸ್: ಈ ಚಿತ್ರದಲ್ಲಿ ನೀವು ಫ್ಲಿಪ್ ಫ್ಲಾಪ್ಸ್ ಪಾದರಕ್ಷೆಯನ್ನು ಆಯ್ಕೆ ಮಾಡಿದರೆ ನೀವು ನಿರಾಳಭಾವವನ್ನು ಹೊಂದಿದ, ದಯೆಯನ್ನು ಹೊಂದಿರುವ ವ್ಯಕ್ತಿಯೆಂದರ್ಥ. ನೀವು ಜೀವನವನ್ನು ಜಟಿಲಗೊಳಿಸದೆ, ಆದಂತೆ ಆಗಲಿ ಎಂದು ಮುಂದೆ ಸಾಗುತ್ತಾ ಜೀವನವನ್ನು ಆನಂದಿಸುವವರು. ಅಲ್ಲದೆ ನೀವು ಒತ್ತಡವನ್ನು ಕೂಡ ಇಷ್ಟಪಡುವುದಿಲ್ಲ.
ಕ್ರಾಕ್ಸ್: ಈ ಚಿತ್ರದಲ್ಲಿ ನೀವು ಕ್ರಾಕ್ಸ್ ಚಪ್ಪಲಿಯನ್ನು ಆಯ್ಕೆ ಮಾಡಿದರೆ ನೀವು ತಮಾಷೆಯ ಹಾಗೂ ಆತ್ಮವಿಶ್ವಾಸದ ಸ್ವಭಾವವನ್ನು ಹೊಂದಿದವರು ಎಂದರ್ಥ. ನೀವು ಟ್ರೆಂಡ್‌ಗಳ ಜೊತೆಗೆ ಸಂತೋಷವನ್ನು ಕೂಡ ಅನುಸರಿಸುತ್ತೀರಿ. ದೃಢತೆಯೇ ನಿಮ್ಮ ಶಕ್ತಿಯಾಗಿದ್ದು, ನೀವು ಯಾವುದಕ್ಕೂ ಭಯ ಪಡುವುದಿಲ್ಲ.
ಹೈ ಹೀಲ್ಸ್: ನಿಮಗೆ ಹೈ ಹೀಲ್ಸ್ ಚಪ್ಪಲಿ ಇಷ್ಟವಾಗಿದ್ದರೆ, ನೀವು ಮಹತ್ವಾಕಾಂಕ್ಷೆಯನ್ನು ಹೊಂದಿದವರೆಂದು ಅರ್ಥ. ನಿಮಗೆ ಏನು ಬೇಕು ಎಂಬುದು ನಿಮಗೆ ತಿಳಿದಿದೆ ಹಾಗೂ ಅದನ್ನು ಪಡೆಯಲು ಸಾಕಷ್ಟು ಶ್ರಮ ಪಡುತ್ತೀರಿ.
ಇದನ್ನೂ ಓದಿ: ನಿಮ್ಮಿಷ್ಟದ ವಜ್ರದುಂಗುರ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ
ಅಥ್ಲೆಟಿಕ್ ಶೂಗಳು: ನಿಮಗೆ ಅಥ್ಲೆಟಿಕ್ ಶೂಗಳನ್ನು ಇಷ್ಟಪಟ್ಟರೆ ನೀವು ಉತ್ಸಾಹಭರಿತ ಹಾಗೂ ಯಾವಾಗಲೂ ಲವಲವಿಕೆಯಿಂದ ಇರುವವರು ಎಂದರ್ಥ. ಜೊತೆಗೆ ನೀವು ಯಾವಾಗಲೂ ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡುವವರಾಗಿರುತ್ತೀರಿ. ಉತ್ಸಾಹವೇ ನಿಮ್ಮ ಶಕ್ತಿಯಾಗಿದ್ದು, ನೀವು ಯಾವಾಗಲೂ ಮುಂದೆ ಸಾಗಲು ಬಯಸುತ್ತೀರಿ.
ಟ್ರೆಂಡಿ ಸ್ನೀಕರ್ಸ್: ಈ ಪಾದರಕ್ಷೆ ನಿಮಗೆ ಇಷ್ಟವಾದರೆ ನೀವು ಸ್ವಲ್ಪ ಗಂಭೀರವಾಗಿ ಕಾಣಿಸಿಕೊಳ್ಳುವವರಾಗಿರುತ್ತೀರಿ. ಗಂಭೀರವಾಗಿ ಕಾಣಿಸಿದರೂ ನೀವು ಸೌಮ್ಯ ಸ್ವಭಾವದವರು. ಅಲ್ಲದೆ ಸೂಕ್ಷ್ಮ ಸ್ವಭಾವದವರಾದ ನೀವು ಎಲ್ಲರ ಬಗ್ಗೆಯೂ ಬಹಳಷ್ಟು ಕಾಳಜಿಯನ್ನು ವಹಿಸುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Fri, 18 July 25








