Personality Test: ಗಲ್ಲದ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ

ಒಬ್ಬ ವ್ಯಕ್ತಿಯ ಕಣ್ಣುಗಳು ಹೇಗಿವೆ, ಆತನ ಮೂಗಿನ ಆಕಾರ ಹೇಗಿದೆ, ಪಾದದ ಆಕಾರ, ಕೈಗಳ ರೇಖೆ ಇವೆಲ್ಲದರ ಮೂಲಕ ಆತನ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದೇ ರೀತಿ ಗಲ್ಲದ ಮೂಲಕವೂ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಂತೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಗಲ್ಲದ ಆಕಾರ ಹೇಗಿದೆ ಎಂಬುದರ ಮೇಲೆ ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಿ.

Personality Test: ಗಲ್ಲದ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ
ವ್ಯಕ್ತಿತ್ವ ಪರೀಕ್ಷೆ
Image Credit source: Jagran Josh

Updated on: Nov 10, 2025 | 5:33 PM

ಪ್ರತಿಯೊಬ್ಬರ ವ್ಯಕ್ತಿತ್ವ (Personality), ನಡವಳಿಕೆ, ಹಾವಭಾವ, ಚಿಂತನೆಗಳು, ಭಾವನಾತ್ಮಕ ನಿಲುವುಗಳಲ್ಲಿ ಹಲವಾರು ಭಿನ್ನತೆಗಳು ಇರುವಂತೆ, ಪ್ರತಿಯೊಬ್ಬರ ದೇಹಕಾರವು ಸಹ ಭಿನ್ನವಾಗಿರುತ್ತದೆ. ಉದಾಹರಣೆಗೆ ಕೆಲವರ ಕಿವಿ ಆಕಾರದಲ್ಲಿ ದೊಡ್ಡದಾಗಿದ್ದರೆ, ಇನ್ನೂ ಕೆಲವರ ಕಿವಿ ಚಿಕ್ಕದಾಗಿರುತ್ತದೆ, ಕೆಲವರ ಕಣ್ಣುಗಳು ದೊಡ್ಡದಾಗಿದ್ದರೆ, ಕೆಲವರ ಕಣ್ಣುಗಳು ಚಿಕ್ಕದಾಗಿರುತ್ತವೆ. ಹೀಗೆ ದೇಹಕಾರದಲ್ಲಿ ಸಾಕಷ್ಟು ಭಿನ್ನತೆಗಳಿರುತ್ತವೆ.  ಈ ಕಿವಿ, ಮೂಗು, ಪಾದ, ಬೆರಳು, ಕಣ್ಣು, ಹಣೆ, ಕೂದಲು ಇವುಗಳ ಆಕಾರದ ಮೂಲಕವೂ ವ್ಯಕ್ತಿತ್ವ ನಿಗೂಢ ವ್ಯಕ್ತಿತ್ವವನ್ನು ತಿಳಿಯಬಹುದು. ನೀವು ಸಹ ಇವುಗಳ ಮುಖಾಂತರ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಗಲ್ಲ ಹೇಗಿದೆ ಎಂಬುದರ ಮೇಲೆ ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಿ.

ಗಲ್ಲದ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ:

ಡಿಂಪಲ್‌ ಗಲ್ಲ: ಕೆಲವರ ಗಲ್ಲದ ಮಧ್ಯಭಾಗದಲ್ಲಿ ರೇಖೆ ಇರುತ್ತದೆ. ಇದನ್ನು ಡಿಂಪಲ್‌ ಗಲ್ಲ ಎಂದಿ ಕರೆಯುತ್ತಾರೆ. ಇಂತಹ ಗಲ್ಲವಿದ್ದವರು ಹೆಚ್ಚು ವರ್ಚಸ್ವಿ, ಆತ್ಮವಿಶ್ವಾಸ, ಬೆರೆಯುವ, ಬುದ್ಧಿವಂತ, ಸೃಜನಶೀಲ ಮತ್ತು ಕಲಾತ್ಮಕ ವ್ಯಕ್ತಿಗಳಾಗಿರುತ್ತಾರೆ. ನಾಯಕತ್ವ ಗುಣಗಳನ್ನು ಹೊಂದಿರುವ ಇವರು ಯಾವುದೇ ಭಯವಿಲ್ಲದೆ ಅಪಾಯಗಳನ್ನು ಎದುರಿಸುತ್ತಾರೆ. ಇವರು ಸ್ವಂತ ವ್ಯವಹಾರ, ಉದ್ಯಮಗಳಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಜೊತೆಗೆ ಇಂತಹ ಗಲ್ಲವನ್ನು ಹೊಂದಿರುವವರು ಚಿತ್ರಕಲೆ, ಹಾಡುಗಾರಿಕೆ ಸಂಗೀತ ಇತ್ಯಾದಿ ಕಲೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇನ್ನೊಂದೇನೆಂದರೆ ಈ ರೀತಿಯ ಗಲ್ಲವನ್ನು ಹೊಂದಿರುವವರು ಮಿಲಿಟರಿ ಅಥವಾ ಪೊಲೀಸ್‌ ವೃತ್ತಿಗೆ ಸೇರುವ ಸಾಧ್ಯತೆ ಹೆಚ್ಚಂತೆ.

ಇದನ್ನೂ ಓದಿ: ನಿಮ್ಮ ಕಿವಿಗಳ ಆಕಾರ ಹೇಗಿದೆ? ಇದುವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ನೇರ ಗಲ್ಲ: ಕೆಲವರ ಗಲ್ಲ ಡಿಂಪಲ್‌ ರೀತಿಯಲ್ಲಿ ಇದ್ದರೆ ಹಲವರ ಗಲ್ಲ ನೇರವಾಗಿರುತ್ತದೆ. ಇಂತಹ ಗಲ್ಲದ ವ್ಯಕ್ತಿಗಳು  ದೃಢನಿಶ್ಚಯ ಮತ್ತು ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ. ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಸಾಮಾಜಿಕವಾಗಿ ಎಲ್ಲರೊಂದಿಗೂ ಬೆರೆಯುವ ಇವರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಸಖತ್‌ ಇಷ್ಟಪಡುತ್ತಾರೆ. ತುಂಬಾ ವರ್ಚಸ್ವಿಯಾಗಿರುವ ಇವರತ್ತ ಜನ ಬೇಗನೆ ಆಕರ್ಷಿತರಾಗುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ