
ದೇಹಕಾರ ಆಗಿರ್ಬೇದು, ಮಾತನಾಡುವ ಶೈಲಿ, ನಡೆಯುವ ರೀತಿ, ಆಹಾರ ಪದ್ಧತಿ, ಹವ್ಯಾಸಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತವೆ. ಇದರ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಈ ಅಂಶಗಳಿಗೆ ಸಂಬಂಧಿಸಿದ ಪರ್ಸನಾಲಿಟಿ ಟೆಸ್ಟ್‌ಗಳು (Personality Test) ಹರಿದಾಡುತ್ತಲೇ ಇರುತ್ತವೆ. ಇದು ಮಾತ್ರವಲ್ಲ ಒಬ್ಬ ವ್ಯಕ್ತಿ ಹೇಗೆ ಊಟ ಮಾಡ್ತಾನೆ ಅನ್ನೋದರ ಮೇಲೂ ಆತನ ವ್ಯಕ್ತಿತ್ವವನ್ನು ಅಳೆಯಬಹುದಂತೆ. ಊಟ ಮಾಡುವ ಶೈಲಿಯಲ್ಲೂ ಸಾಕಷ್ಟು ಭಿನ್ನತೆಗಳಿರುತ್ತವೆ. ಕೆಲವರು ಫಾಸ್ಟ್ ಆಗಿ ತಿಂದು ಮುಗಿಸಿದ್ರೆ, ಇನ್ನೂ ಕೆಲವರು ಸ್ಲೋ ಆಗಿ ಊಟ ಮಾಡ್ತಾರೆ. ಊಟ ಮಾಡುವ ಶೈಲಿಯೂ ವ್ಯಕ್ತಿಯ ಗುಣ ಸ್ವಭಾವದ ಬಗ್ಗೆ ತಿಳಿಸುತ್ತಂತೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಊಟ ಮಾಡುವ ಸ್ಟೈಲ್ ಹೇಗಿದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಿ.
ನಿಧಾನವಾಗಿ ತಿನ್ನುವವರು: ಊಟವನ್ನು ನಿಧಾನವಾಗಿ ತಿನ್ನುವ ಜನರಿಗೆ ತಾಳ್ಮೆಯೂ ಹೆಚ್ಚಿರುತ್ತಂತೆ. ಇವರು ಎಂದಿಗೂ ಯಾವ ವಿಷಯದಲ್ಲೂ ಆತುರ ಪಡುವುದಿಲ್ಲ. ಇವರು ತಮ್ಮ ಎಲ್ಲಾ ಗಮನ ಮತ್ತು ಶಕ್ತಿಯನ್ನು ತಿನ್ನುವುದರ ಮೇಲೆ ಕೇಂದ್ರೀಕರಿಸುವಂತೆ ತಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನದ ಬಗ್ಗೆಯೂ ವಿಶೇಷ ಗಮನ ಹರಿಸುತ್ತಾರೆ.
ಫಾಸ್ಟ್ ಆಗಿ ತಿನ್ನುವವರು: ಕೆಲವರು ತುಂಬಾನೇ ಫಾಸ್ಟ್ ಆಗಿ ಊಟ ಮಾಡ್ತಾರೆ. ಈ ರೀತಿಯ ಜನರಿಗೆ ಆತುರ ತುಂಬಾನೇ ಜಾಸ್ತಿ. ಅಲ್ಲದೆ ಇವರು ಬಹುಕಾರ್ಯಗಳಲ್ಲಿ ಪರಿಣಿತರು. ಇವರು ಯಾವಾಗಲೂ ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಅಥವಾ ಕೆಲವೊಮ್ಮೆ ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸುತ್ತಾರೆ.
ಸೂಕ್ಷ್ಮವಾಗಿ ತಿನ್ನುವವರು: ಊಟ ಮಾಡುವಾಗ, ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುವ ಅಂದ್ರೆ ತಟ್ಟೆಯಲ್ಲಿರುವ ಭಕ್ಷ್ಯಗಳು ಹೇಗೆ ಕಾಣುತ್ತವೆ, ಅದರ ವಾಸನೆ ಏನು, ಬಣ್ಣ ಏನು ಎಲ್ಲದರ ಬಗ್ಗೆಯೂ ಸೂಕ್ಷ್ಮವಾಗಿ ಪರಿಶೀಲಿಸುವ ಜನರು ತಮ್ಮ ಸುತ್ತಲಿನವರನ್ನು ನಿಯಂತ್ರಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಭಾವನಾತ್ಮಕವಾಗಿ ಸೂಕ್ಷ್ಮರಾಗಿರುವ ಇವರು ಸ್ನೇಹಪರರು ಹೌದು.
ತಿನ್ನುವುದರಲ್ಲಿ ಕುತೂಹಲ: ತಾವು ಎಂದಿಗೂ ಸೇವಿಸದ ಹೊಸ ಆಹಾರಗಳನ್ನು ಪ್ರಯತ್ನಿಸಲು ಯಾವಾಗಲೂ ಕುತೂಹಲವಿರುವವರು, ಹೊಸ ರುಚಿ ಹಾಗೂ ವಿಲಕ್ಷಣ ಫುಡ್‌ಗಳನ್ನು ಸವಿಯಲು ಬಯಸುವವರು ತಿನ್ನುವುದನ್ನು ಒಂದು ಮೋಜಿನ ಚಟುವಟಿಕೆಯಂತೆ ನೋಡುತ್ತಾರೆ. ಇವರ ವ್ಯಕ್ತಿತ್ ಹೇಗಿದೆ ಎಂಬುದನ್ನು ನೋಡುವುದಾದರೆ ಇವರು ಸಾಹಸಮಯ ಸ್ವಭಾವದವರು ಹಾಗೂ ಹೃದಯವಂತರು. ಇವರು ತಮ್ಮ ಜೀವನವನ್ನು ಪರಿಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ನೋಡುವ ಬಣ್ಣ ನಿಮ್ಮ ಸಾಮರ್ಥ್ಯ ಏನೆಂಬುದನ್ನು ತಿಳಿಸುತ್ತೆ
ಜೋರಾಗಿ ಅಗಿಯುತ್ತಾ ತಿನ್ನುವವರು: ಕೆಲವು ಜನರು ಆಹಾರವನ್ನು ಜೋರಾಗಿ ಅಗಿಯುತ್ತಾ ತಿನ್ನುತ್ತಾರೆ. ಈ ಸೌಂಡ್ ಅನೇಕರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಆದರೆ ಇದ್ಯಾವುದರ ಬಗ್ಗೆಯೂ ಇವರು ಕೇರ್ ಮಾಡುವುದಿಲ್ಲ. ಇಂತಹ ಜನರು ತುಂಬಾನೇ ಮಾತನಾಡುವವರಾಗಿರುತ್ತಾರೆ. ಬಹಿರ್ಮುಖಿಗಳಾದ ಇವರು ತುಂಬಾ ಸ್ನೇಹಪರರು ಮತ್ತು ಇವರು ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಸ್ವಲ್ಪವೂ ಕೇರ್ ಮಾಡುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ