Personality Test: ಕೈ ಹಿಂದೆ ಮಡಚಿ ನಿಲ್ಲುವ ಶೈಲಿಯಿಂದಲೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು

ನಮ್ಮ ವ್ಯಕ್ತಿತ್ವವನ್ನು ನಾವೇ ತಿಳಿದುಕೊಳ್ಳುವುದೆಂದರೆ ಒಂದು ರೀತಿ ಮಜಾ ಅಲ್ವಾ. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವ್ಯಕ್ತಿತ್ವ ಪರೀಕ್ಷೆಯ ಫೋಟೋ ವೈರಲ್‌ ಆಗಿದ್ದು, ಇದರಲ್ಲಿ ನೀವು ಯಾವ ರೀತಿ ಕೈ ಹಿಂದೆ ಮಡಚಿ ನಿಲ್ಲುತ್ತೀರಿ ಎಂಬುದರ ಮೇಲೆ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ.

Personality Test: ಕೈ ಹಿಂದೆ ಮಡಚಿ ನಿಲ್ಲುವ ಶೈಲಿಯಿಂದಲೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು
ವ್ಯಕ್ತಿತ್ವ ಪರೀಕ್ಷೆ
Image Credit source: okdario.com

Updated on: Aug 03, 2025 | 7:32 PM

ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರಗಳ ಮೂಲಕ ನಮ್ಮ ಗುಣ ಸ್ವಭಾವ  ಹೇಗಿದೆ ಎಂಬುದನ್ನು ತಿಳಿದುಕೊಳ್ಳುವಂತೆ, ನಮ್ಮ ನಡವಳಿಕೆ, ಇಷ್ಟದ ಬಣ್ಣ, ನಡಿಗೆಯ ಶೈಲಿ, ಪಾದದ ಆಕಾರ, ಕೂದಲಿನ ಆಕಾರ, ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಇತ್ಯಾದಿ ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಅದೇ ರೀತಿ ನೀವು ಕೈ ಹಿಂದೆ ಕಟ್ಟಿ ನಿಲ್ಲುವ ಶೈಲಿಯಿಂದಲೂ ನಿಗೂಢ ಗುಣ ಸ್ವಭಾವವನ್ನು (personality secret)  ತಿಳಿಯಬಹುದು. ಹೌದು ಕೆಲವರು ಮಣಿಕಟ್ಟನ್ನು ಹಿಡಿದು ಕೈ ಹಿಂದೆ ಕಟ್ಟಿ ನಿಂತರೆ, ಇನ್ನೂ ಕೆಲವರು ಮೊಣಕೈ ಹಿಡಿದು ಕೈ ಹಿಂದೆ ಮಡಚಿ ನಿಲ್ಲುತ್ತಾರೆ. ಇದರಲ್ಲಿ ನೀವು ಹೇಗೆ ಕೈ ಮಡಚಿ ನಿಲ್ಲುತ್ತೀರಿ ಎಂಬುದರ ಮೇಲೆ ನೀವು ನೇರ ಸ್ವಭಾವದವರೇ, ಆತ್ಮವಿಶ್ವಾಸವನ್ನು ಹೊಂದಿದವರೇ ಎಂಬುದನ್ನು ಪರೀಕ್ಷೆ ಮಾಡಿ.

ಕೈ ಹಿಂದೆ ಕಟ್ಟಿ ನಿಲ್ಲುವ ಶೈಲಿಯೇ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ:

ಮಣಿಕಟ್ಟನ್ನು ಹಿಡಿದು ನಿಲ್ಲುವುದು: ನೀವು ನಿಮ್ಮ ಮಣಿಕಟ್ಟನ್ನು ಹಿಡಿದುಕೊಂಡು ಕೈ ಹಿಂದೆ ಕಟ್ಟಿಕೊಳ್ಳುತ್ತೀರಿ ಎಂದಾದರೆ ನೀವು ಸ್ವಾಭಾವಿಕವಾಗಿ ಆತ್ಮವಿಶ್ವಾಸವನ್ನು ಹೊಂದಿದವರೆಂದು ಅರ್ಥ. ಅಲ್ಲದೆ ನೀವು ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ನಾಯಕತ್ವವನ್ನು ವಹಿಸಿ ಒಂದು ತಂಡವನ್ನು ಮುಂದುವರೆಸುವ ಸಾಮರ್ಥ್ಯವೂ ನಿಮ್ಮಲ್ಲಿದೆ. ಜೊತೆಗೆ ನೀವು ಸಮಸ್ಯೆ ಪರಿಹರಿಸುವಲ್ಲಿಯೂ ನಿಪುಣರು.

 ಕೈ ಬೆರಳುಗಳನ್ನು ಹಿಡಿದು ನಿಲ್ಲುವುದು: ನೀವು ನಿಮ್ಮ ಎರಡೂ ಕೈ ಬೆರಳುಗಳನ್ನು ಹಿಡಿದುಕೊಂಡು ಕೈ ಹಿಂದೆ ಕಟ್ಟಿಕೊಳ್ಳುತ್ತೀರಿ ಎಂದಾದರೆ ನೀವು ಎಲ್ಲರೊಂದಿಗೂ ಬೆರೆಯುವ  ಮತ್ತು ನೇರ ಸ್ವಭಾವದ ವ್ಯಕ್ತಿಯೆಂದು ಅರ್ಥ. ಮುಕ್ತವಾಗಿ ಮಾತನಾಡುವ ನೀವು ತುಂಬಾನೇ ಸಂಯಮದ ಸ್ವಭಾವದವರು. ಜೊತೆಗೆ ನೀವು ಯಾವುದೇ ಶುಗರ್‌ ಕೋಟ್‌ ಇಲ್ಲದೆ ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವ ನೇರ ಸ್ವಭಾವದ ವ್ಯಕ್ತಿ.  ನಿಮ್ಮ ಈ ಸ್ವಭಾವವು ಎಲ್ಲಾ ಕಡೆ ಸೌಹಾರ್ದತೆಯನ್ನು ಬೆಳೆಸುತ್ತದೆ ಮತ್ತು ನಿಮ್ಮನ್ನು ವಿಶ್ವಾಸಾರ್ಹ ವ್ಯಕ್ತಿಯಾಗಿ ರೂಪಿಸುತ್ತದೆ.

ಇದನ್ನೂ ಓದಿ
ಪೆನ್ನು ಹಿಡಿದುಕೊಳ್ಳುವ ಶೈಲಿಯಿಂದಲೂ ನಿಮ್ಮ ನಿಗೂಢ ವ್ಯಕ್ಯಿತ್ವ ತಿಳಿಯಬಹುದು
ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ
ಕಾಲ್ಬೆರಳಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ಗುಣ ಸ್ವಭಾವ

ಇದನ್ನೂ ಓದಿ: ನಿಮ್ಗೊತ್ತಾ ಪೆನ್ನು ಹಿಡಿದುಕೊಳ್ಳುವ ಶೈಲಿ ಸಹ ನೀವು ಎಂತಹ ವ್ಯಕ್ತಿ ಎಂಬುದನ್ನು ಬಹಿರಂಗಪಡಿಸುತ್ತದೆ

ಮೊಣಕೈ ಹಿಡಿದು ನಿಲ್ಲುವುದು: ನೀವು ಒಂದು ಕೈಯಲ್ಲಿ ಇನ್ನೊಂದು ಮೊಣಕೈ ಹಿಡಿದು ನಿಲ್ಲುವ ಅಭ್ಯಾಸವನ್ನು ಹೊಂದಿದ್ದರೆ ನೀವು ಶಾಂತ ಸ್ವಭಾವದ ಹಾಗೂ ಶಕ್ತಿಯುತ ವರ್ಚಸ್ಸನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ಅಲ್ಲದೆ ನೀವು ನಿಮ್ಮ ಪ್ರಾಮಾಣಿಕತೆಯ ಮೂಲಕವೇ ಎಲ್ಲರನ್ನು ಆಕರ್ಷಿಸುತ್ತೀರಿ. ನಿಮ್ಮಲ್ಲಿರುವ ಪ್ರಾಮಾಣಿಕತೆ, ಆತ್ಮವಿಶ್ವಾಸದ ಕಾರಣದಿಂದಲೇ ಎಲ್ಲರೂ ನಿಮ್ಮೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ