Varamahalakshmi Vrata 2025: ವರಮಹಾಲಕ್ಷ್ಮಿ ವ್ರತದಂದು ಮಾಡಲೇಬಾರದ ತಪ್ಪುಗಳು ಇವೆ ನೋಡಿ
ವರಲಕ್ಷ್ಮಿ ಈ ಹೆಸರೇ ಸೂಚಿಸುವಂತೆ ವರವನ್ನು ನೀಡುವ ಲಕ್ಷ್ಮಿ ಎಂದರ್ಥ. ಸಮೃದ್ಧಿ ಹಾಗೂ ದೈವಿಕ ರೂಪವಾದ ಲಕ್ಷ್ಮಿಯನ್ನು ಪೂಜಿಸುವ ಸುದಿನವಾಗಿದ್ದು, ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದಲ್ಲಿ ಈ ದಿನ ಬಹಳ ವಿಶೇಷ ಮಹತ್ವ ನೀಡಲಾಗಿದ್ದು, ಈ ದಿನ ನೀವು ಮಾಡುವ ಈ ಕೆಲವು ತಪ್ಪುಗಳಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ವ್ರತಾಚರಣೆಯ ವೇಳೆ ಈ ಕೆಲವು ತಪ್ಪುಗಳು ನಿಮ್ಮಿಂದ ಅಪ್ಪಿತಪ್ಪಿಯೂ ಆಗದಂತೆ ನೋಡಿಕೊಳ್ಳಿ.

ಹಿಂದೂ ಧರ್ಮದ ಪ್ರಕಾರವಾಗಿ ಸಂಪತ್ತಿನ ದೇವತೆಯಾಗಿ ಲಕ್ಷ್ಮಿದೇವಿಯನ್ನು ಆರಾಧಿಸಲಾಗುತ್ತದೆ. ಹೀಗಾಗಿ ವರಮಹಾಲಕ್ಷ್ಮಿ ವ್ರತ (Varamahalakshmi Vrata)ಆಚರಣೆಗೆ ವಿಶೇಷ ಮಹತ್ವವನ್ನು ನೀಡಲಾಗಿದ್ದು, ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ಶುಕ್ರವಾರದಂದು ಆಚರಿಸಲಾಗುವುದು ವಾಡಿಕೆ. ಆದರೆ ಈ ವರ್ಷ ಆಗಸ್ಟ್ 8ರಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಸುಮಂಗಲಿಯರು ಬಹಳ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಕೂರಿಸಿ ಶಾಸ್ತ್ರಬದ್ಧವಾಗಿ ಪೂಜಿಸುತ್ತಾರೆ. ಆದರೆ ಈ ವರಮಹಾಲಕ್ಷ್ಮಿ ಹಬ್ಬ ಅಥವಾ ವ್ರತದ ದಿನ ಈ ತಪ್ಪುಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ, ಆ ಕುರಿತಾದ ಮಾಹಿತಿ ಇಲ್ಲಿದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಈ ತಪ್ಪುಗಳು ನಿಮ್ಮಿಂದ ಆಗದಿರಲಿ:
- ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆ ಮಾಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಇಡಬಾರದು.
- ವರಮಹಾಲಕ್ಷ್ಮಿ ಮರದ ಕುರ್ಚಿ ಮೇಲೆ ಕೂರಿಸಿ. ಅಪ್ಪಿತಪ್ಪಿಯೂ ಕಬ್ಬಿಣದ ಕುರ್ಚಿ ಮೇಲೆ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಡಿ.
- ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಹೂವುಗಳು ಹಾಗೂ ಹಣ್ಣುಗಳನ್ನು ಬಳಸಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಡಿ.
- ಕಲಶವಿಟ್ಟು ಪೂಜೆ ಮಾಡುವ ಪದ್ಧತಿ ನಿಮ್ಮ ಮನೆಯಿಲ್ಲದ್ದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ. ಲಕ್ಷ್ಮಿ ಫೋಟೋಗೆ ಪೂಜೆ ಮಾಡಿದರೂ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
- ನೀವೇನಾದ್ರೂ ಕಲಶವಿಟ್ಟು ಪೂಜೆ ಮಾಡುತ್ತೀರಿ ಅಂತಾದರೆ ತ್ರಾಮದ ಕಲಶವನ್ನು ಬಳಸುವುದು ಸೂಕ್ತ. ಪೂಜೆಯ ವೇಳೆ ಮನಸ್ಸು ಶುದ್ಧವಾಗಿರಲಿ, ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
- ಈ ವ್ರತಾಚರಣೆಗೆ ಸಾಲವಾಗಿ ತಂದ ಹಣವನ್ನಾಗಲಿ ಹಾಗೂ ಆಭರಣಗಳನ್ನು ಬಳಸಬೇಡಿ. ಇದರಿಂದ ಲಕ್ಷ್ಮಿ ದೇವಿಯೂ ಮುನಿಸಿಕೊಳ್ಳುತ್ತಾಳೆ. ತುಕ್ಕು ಹಿಡಿದ ಆಭರಣಗಳನ್ನು ಎಂದಿಗೂ ಬಳಸುವುದು ತಪ್ಪಿಸಿ.
ಇದನ್ನೂ ಓದಿ: Nag Panchami 2025: ನಾಗನಿಗೆ ಹಿಂಗಾರ ಏಕೆ ಪ್ರಿಯ; ಈ ಬಗ್ಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಏನು ಹೇಳಿದ್ದಾರೆ ನೋಡಿ
- ದೀಪ ಬೆಳಗಿಸಲು ಅಡುಗೆಗೆ ಬಳಸಿದ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಇದರಿಂದ ಪೂಜೆಗೆ ತಕ್ಕ ಫಲವು ಸಿಗುವುದಿಲ್ಲ.
- ಲಕ್ಷ್ಮಿ ದೇವಿಯನ್ನು ಮೆಟ್ಟಿಲುಗಳ ಕೆಳಗೆ, ಶೌಚಾಲಯ, ಸ್ನಾನಗೃಹದ ಹತ್ತಿರ ಹಾಗೂ ಸ್ವಚ್ಛವಲ್ಲದ ಸ್ಥಳಗಳಲ್ಲಿ ಕೂರಿಸಬೇಡಿ. ಪೂಜೆ ಮಾಡುವ ಸ್ಥಳದ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








