
ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದ ಮೂಲಕವೋ ಸಂಖ್ಯಾ ಶಾಸ್ತ್ರದ ಮೂಲಕವೋ ಒಬ್ಬ ವ್ಯಕ್ತಿಯ ಭವಿಷ್ಯ, ಆತನ ಗುಣ ಸ್ವಭಾವವನ್ನು ತಿಳಿಯಬಹುದಾಗಿದೆ. ಇದು ಮಾತ್ರವಲ್ಲದೆ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್, ಮೂಗಿನ ಆಕಾರ, ಪಾದದ ಆಕಾರ ಸೇರಿದಂತೆ ದೇಹಕಾರದಂತಹ ವ್ಯಕ್ತಿತ್ವ ಪರೀಕ್ಷೆಗಳ (Personality Test) ಮೂಲಕವೂ ಸ್ವತಃ ನಾವೇ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ನೀವು ಸಹ ಇಂತಹ ಸಾಕಷ್ಟು ಪರ್ಸನಾಲಿಟಿ ಟೆಸ್ಟ್‌ಗಳ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ನೀವು ಯಾವ ರೀತಿ ಮಲಗುತ್ತೀರಿ (sleeping position) ಎಂಬುದರ ಆಧಾರದ ಮೇಲೆಯೂ ನಿಮ್ಮ ಸೀಕ್ರೆಟ್ ಪರ್ಸನಾಲಿಟಿಯನ್ನು ತಿಳಿಯಿರಿ.
ನೇರವಾಗಿ ಬೆನ್ನಿನ ಮೇಲೆ ಮಲಗುವವರು: ಈ ರೀತಿ ಮಲಗುವ ಜನ ಆಶಾವಾದಿ ವ್ಯಕ್ತಿಗಳಾಗಿರುತ್ತಾರೆ. ಇವರು ಗುರಿಗಳನ್ನು ಸಾಧಿಸಲು ಅತ್ಯಂತ ಜಾಗರೂಕತೆಯಿಂದ ಹಾಗೂ ನಿರಂತರವಾಗಿ ಕೆಲಸ ಮಾಡುತ್ತಾರೆ. ಜೊತೆಗೆ ಇವರು ರಚನಾತ್ಮಕ ರೀತಿಯಲ್ಲಿ ಬದುಕು ಸಾಗಿಸುವ ವ್ಯಕ್ತಿಯಾಗಿರುತ್ತಾರೆ. ಜೊತೆಗೆ ಮುಕ್ತ ಮನಸ್ಸಿನವರಾದ ಇವರು ಸ್ನೇಹ ಮತ್ತು ಬಾಂಧವ್ಯವನ್ನು ಗೌರವಿಸುತ್ತಾರೆ. ಅವರು ಇತರರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸುತ್ತಾರೆ ಮತ್ತು ಅವರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ.
ಒಂದು ಬದಿಗೆ ಮುಖ ಮಾಡಿ ಮಲಗುವವರು: ಎಡ ಅಥವಾ ಬಲ ಹೀಗೆ ಕೆಲವ ಒಂದು ಕಡೆಗೆ ಮುಖ ಮಾಡಿ ಮಲಗುವ ಜನರು ಶಾಂತ, ವಿಶ್ವಾಸಾರ್ಹ, ನಿರಾಳ ಸ್ವಭಾವದ, ಕ್ರಿಯಾಶೀಲ, ಸಾಮಾಜಿಕವಾಗಿ ಬೆರೆಯುವ ವ್ಯಕ್ತಿಗಳಾಗಿರುತ್ತಾರೆ. ಇವರು ಯಾವಾಗಲೂ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತಾರೆ, ಹಿಂದೆ ನಡೆದಂತಹ ಘಟನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ಬದಲಾವಣೆಗಳು ಆದರೂ ಅಥವಾ ಎಂತಹದ್ದೇ ಪರಿಸ್ಥಿತಿ ಎದುರಾದರೂ ಇವರು ಎಲ್ಲದಕ್ಕೂ ಹೊಂದಿಕೊಳ್ಳುತ್ತಾರೆ. ಜೊತೆಗೆ ಕಷ್ಟಗಳ ಸಮಯದಲ್ಲಿಯೂ ಸಹ ಇವರ ಮುಖದಲ್ಲಿ ನಗು ಎನ್ನುವಂತಹದ್ದು ಇರುತ್ತದೆ.
ಕೈ ಕಾಲುಗಳನ್ನು ಮಡಚಿ ದುಂಡಗೆ ಮಲಗುವುದು: ಕೈಕಾಲು ಮಡಚಿ ಭ್ರೂಣದ ಭಂಗಿಯಲ್ಲಿ ಮಲಗುವವರಾಗಿದ್ದರೆ ನೀವು ಸ್ವಭಾವತಃ ನಾಚಿಕೆಯ ಸ್ವಭಾದವರು. ಈ ಭಂಗಿಯಲ್ಲಿ ಮಲಗುವವರು ತುಂಬಾನೇ ಸೂಕ್ಷ್ಮ ವ್ಯಕ್ತಿಗಳು. ಇವರು ಯಾರ ಬಗ್ಗೆಯೂ ಹೆಚ್ಚು ಯೋಚಿಸುವುದಿಲ್ಲ. ಬದಲಾಗಿ ತಾವು ಸುರಕ್ಷಿತವಾಗಿರಲು ಬಯಸುವವರು. ಅಲ್ಲದೆ ಇವರು ಹೊಸ ವಾತಾವರಣದಲ್ಲಿರಲು ನಾಚಿಕೆಪಡುತ್ತಾರೆ. ಜೊತೆಗೆ ಇವರು ಹೆಚ್ಚಾಗಿ ಚಿತ್ರಕಲೆ, ಬರವಣಿಗೆ, ನೃತ್ಯ ಇತ್ಯಾದಿಗಳಲ್ಲಿ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ.
ಇದನ್ನೂ ಓದಿ: ನೀವೆಂತಾ ವ್ಯಕ್ತಿ ಎಂಬುದನ್ನು ನಿಮ್ಮ ಹುಬ್ಬಿನ ಆಕಾರವೇ ತಿಳಿಸುತ್ತದೆ
ಹೊಟ್ಟೆಯ ಮೇಲೆ ಮಲಗುವವರು: ಬೆನ್ನು ಮೇಲೆ ಹೊಟ್ಟೆ ಕೆಳಗೆ ಮಾಡಿ ಮಲಗುವ ಜನರು ಹರ್ಷಚಿತ್ತ ಹಾಗೂ ಶಾಂತ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಮುಕ್ತ ಮನಸ್ಸಿನವರಾದ ಇವರು ಸಾಮಾಜಿಕವಾಗಿ ಬೆರೆಯಲು ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೆ ಸ್ವತಂತ್ರರಾಗಿರಲು ಬಯಸುವ ಇವರು ಯಾವುದೇ ಸವಾಲುಗಳನ್ನು ಎದುರಿಸಲು ಹೆದರುವುದೇ ಇಲ್ಲ. ಇನ್ನೊಂದೇನೆಂದರೆ ಇವರು ಚೈತನ್ಯಶೀಲರಾಗಿರಲು ನೀವು ಶಕ್ತಿಯುತವಾಗಿ ಮತ್ತು ಚೈತನ್ಯದಿಂದಿರಲು 8 ಗಂಟೆಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿದ್ರೆ ಮಾಡಲು ಬಯಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ