
ನಮಗೆ ಸುಂದರ ಹೆಸರು (name) ಇದ್ದರೆ ಸಾಲದು ನಮ್ಮ ವ್ಯಕ್ತಿತ್ವ (personality) ನಾಲ್ಕು ಜನರನ್ನು ಸೆಳೆಯುವಂತೆ ಇರಬೇಕು. ನಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವ ನಾವು ಏನೆಂಬುದನ್ನು ಪ್ರತಿನಿಧಿಸುತ್ತದೆ ಎನ್ನುವುದು ತಿಳಿದಿರುವ ವಿಚಾರ. ಸಾಮಾನ್ಯವಾಗಿ ಕಣ್ಣು, ಕಿವಿ, ಮೂಗು, ಬಾಯಿ, ಕೈ ಬೆರಳು, ಹಣೆ, ಹುಬ್ಬುಗಳ ಆಕಾರದಿಂದಲೇ ವ್ಯಕ್ತಿತ್ವವನ್ನು ತಿಳಿಯಬಹುದು. ಅದೇ ರೀತಿ ಕೆಲವು ಪ್ರಶ್ನೆಗಳಿಗೆ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ಕೂಡ ನಮ್ಮ ನಿಜವಾದ ವ್ಯಕ್ತಿತ್ವ ಹಾಗೂ ಗುಣ ಸ್ವಭಾವವನ್ನು ಬಿಚ್ಚಿಡುತ್ತದೆ. ಇದೀಗ ಈ ಕೆಳಗೆ ಹನ್ನೊಂದು ಪ್ರಶ್ನೆ (question) ಗಳಿದ್ದು, ಅದರಲ್ಲಿ ನೀವು ನೀಡುವ ಉತ್ತರ ಹೌದು ಹಾಗೂ ಇಲ್ಲ ಎನ್ನುವುದರ ಆಧಾರದ ಮೇಲೆ ನೀವು ಬಹಿರ್ಮುಖಿಗಳೇ ಅಥವಾ ಅಂತರ್ಮುಖಿಗಳೇ ಎನ್ನುವುದನ್ನು ತಿಳಿಯಬಹುದಂತೆ.
ಈ ಹನ್ನೊಂದು ಪ್ರಶ್ನೆಗಳಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಇಲ್ಲ ಎನ್ನುವ ಉತ್ತರ ನೀಡುವ ಜನರು ಅಂತರ್ಮುಖಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಯಾರೊಂದಿಗೂ ಬೇರೆಯಲು ಇಷ್ಟ ಪಡುವುದಿಲ್ಲ. ತಮ್ಮ ಹೆಚ್ಚಿನ ಸಮಯವನ್ನು ಏಕಾಂಗಿಯಾಗಿ ಕಳೆಯಲು ಇಷ್ಟ ಪಡುತ್ತಾರೆ. ಒಂಟಿಯಾಗಿದ್ದರೂ ಸಂತೋಷವಾಗಿರುವ ವ್ಯಕ್ತಿಗಳಾಗಿದ್ದು ,ಇವರದ್ದು ಬಹಳ ಸೂಕ್ಷ್ಮ ಸ್ವಭಾವ. ಭಾವನಾತ್ಮಕ ಜನರಾಗಿದ್ದು, ಆದರೆ ಈ ವ್ಯಕ್ತಿಗಳು ಭಾವನೆಗಳನ್ನು ಮರೆಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪರಿಸ್ಥಿತಿ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಭಾವನೆಗಳನ್ನು ಪ್ರಕಟಿಸುತ್ತಾರೆ.
ಇದನ್ನೂ ಓದಿ : Buddha Purnima 2025: ಬುದ್ಧ ಪೂರ್ಣಿಮೆಯ ದಿನಾಂಕ, ಮಹತ್ವ ಮತ್ತು ಮಂತ್ರ ಪಠಣೆಯ ಮಾಹಿತಿ ಇಲ್ಲಿದೆ
ಈ ಎಲ್ಲಾ ಪ್ರಶ್ನೆಗಳಲ್ಲಿ ಶೇಕಡಾ ಒಂಬತ್ತರಷ್ಟು ಉತ್ತರವು ಹೌದು ಹೇಳುವ ಜನರು ಬಹಿರ್ಮುಖಿಗಳು. ಇವರು ತನ್ನ ಸುತ್ತಮುತ್ತಲಿನ ಜನರೊಂದಿಗೆ ಸ್ನೇಹಮಯವಾಗಿರಲು ಇಷ್ಟ ಪಡುತ್ತಾರೆ. ಎಲ್ಲರ ಜೊತೆಗೆ ಹೆಚ್ಚು ಬೆರೆಯುವ ಮೂಲಕ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಸದಾ ಉತ್ಸಾಹಿಗಳಾಗಿದ್ದು, ಎಲ್ಲರನ್ನು ಹುರಿದುಂಬಿಸುತ್ತ ಕೆಲಸವನ್ನು ಮಾಡುತ್ತಾರೆ. ಈ ವ್ಯಕ್ತಿಗಳು ತಾರ್ಕಿಕ ಸ್ವಭಾವದವರು. ಜೀವನದ ಪ್ರಮುಖ ನಿರ್ಧಾರಗಳು ಹಾಗೂ ಇನ್ನಿತರ ಕಾಲಘಟ್ಟದಲ್ಲಿ ಹೆಚ್ಚು ಯೋಚಿಸಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಬದುಕಿನಲ್ಲಿ ಏನೇ ಎದುರಾದರೂ, ಎಷ್ಟೇ ಒತ್ತಡವಿದ್ದರೂ ಎಲ್ಲವನ್ನು ಸಲೀಸಾಗಿ ಎದುರಿಸುವ ಗುಣ ಇವರದ್ದು. ಯಾರ ಮಾತಿಗೂ ಮರಳು ಆಗದೇ ತಮ್ಮ ಇಚ್ಛೆಯಂತೆ ಬದುಕುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ