AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಪ್ರೀತಿಯ ಭಾಷೆ ಹೇಗಿದೆ ಎಂಬುದನ್ನು ತಿಳಿಸುತ್ತೆ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ

ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವದ ರಹಸ್ಯಗಳ ಬಗ್ಗೆಯೂ ತಿಳಿಸುತ್ತದೆ. ಹೌವು ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಮ್ಮ ಭಾವನೆಗಳು, ನಿಗೂಢ ಗುಣಸ್ವಭಾವಗಳ ಬಗ್ಗೆ ತಿಳಿಯಬಹುದು. ಇಲ್ಲೊಂದು ಅದೇ ರೀತಿಯ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನಿಮ್ಮ ಲವ್‌ ಲ್ಯಾಂಗ್ವೇಜ್‌ ಹೇಗಿದೆ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಮ ಪ್ರೀತಿಯ ಭಾಷೆ ಹೇಗಿದೆ ಎಂಬುದನ್ನು ತಿಳಿಸುತ್ತೆ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on:Dec 16, 2025 | 6:21 PM

Share

ಎಲ್ಲಾ ಭಾವನೆಗಳಿಗೂ ಒಂದೊಂದು ಭಾಷೆ ಇರುವಂತೆ, ಪ್ರೀತಿಗೂ ಭಾಷೆಯಿದೆ (love language) ಎಂದು ಹೇಳಲಾಗುತ್ತದೆ. ಕೆಲವರು ತಮ್ಮ ಸಂಗಾತಿಗಳಿಗೆ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯ ಭಾಷೆಯನ್ನು ವ್ಯಕ್ತಪಡಿಸಿದರೆ, ಅತಿಯಾದ ಕಾಳಜಿ ಇನ್ನೂ ಕೆಲವರ ಲವ್‌ ಲ್ಯಾಂಗ್ವೇಜ್‌ ಆಗಿರುತ್ತದೆ. ಈ ಪ್ರೀತಿಯ ಭಾಷೆಗಳು ಸಂಬಂಧವನ್ನು ಬಲಪಡಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ನಿಮ್ಮ ಲವ್‌ ಲ್ಯಾಂಗ್ವೇಜ್‌ ಹೇಗಿದೆ, ನಿಮ್ಮ ಪ್ರೀತಿಯ ಭಾಷೆಯನ್ನು ಯಾವ ರೀತಿ ವ್ಯಕ್ತಪಡಿಸುತ್ತೀರಿ ಎಂಬುದನ್ನು ತಿಳಿಯಬೇಕಾ? ಹಾಗಿದ್ರೆ ಈ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ನಿಮಗೆ ಸಹಾಯ ಮಾಡಲಿದೆ.

ನಿಮ್ಮ ಲವ್‌ ಲ್ಯಾಂಗ್ವೇಜ್‌ ಹೇಗಿದೆ ಎಂಬುದನ್ನು ತಿಳಿಸುತ್ತೆ ಈ ಚಿತ್ರ:

ಈ ಮೇಲಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಪರ್ವತ, ಕುದುರೆ ಸವಾರರು ಹಾಗೂ ಹದ್ದಿನ ಚಿತ್ರವಿದ್ದು, ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡ ಅಂಶ ಯಾವುದು ಅನ್ನೋದರ ಆಧಾರದ ಮೇಲೆ ನಿಮ್ಮ ಪ್ರೀತಿಯ ಭಾಷೆ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಪರ್ವತಗಳು ಮತ್ತು ಕುದುರೆ ಸವಾರರು: ನೀವು ಹಿಮದಿಂದ ಆವೃತವಾದ ಪರ್ವತಗಳನ್ನು ಮತ್ತು ಕುದುರೆ ಸವಾರಿ ಮಾಡುವ ಪುರುಷರನ್ನು ನೋಡಿದರೆ, ನಿಮ್ಮ ಪ್ರೀತಿಯ ಭಾಷೆ ಬೆಂಬಲ ನೀಡುವುದು ಮತ್ತು ಸಂಗಾತಿಯಿಂದ  ಪಡೆಯುವುದು. ನೀವು ಒಬ್ಬ ವ್ಯಕ್ತಿಯಾಗಿ ತುಂಬಾ ಕಾಳಜಿ ವಹಿಸುತ್ತೀರಿ. ನೀವು ನಿಮ್ಮ ಜೀವನದಲ್ಲಿ ಸರಿಯಾದ ವ್ಯಕ್ತಿಯನ್ನು ಕಂಡುಕೊಳ್ಳುವ ಕನಸು ಕಾಣುತ್ತೀರುತ್ತೀರಿ. ನಿಮ್ಮ ಜೀವನದಲ್ಲಿ ಸರಿಯಾದ ವ್ಯಕ್ತಿ ಸಿಕ್ಕಾಗ, ನೀವು ಅವರ ಮುಂದೆ ನಿಮ್ಮ ಎಲ್ಲಾ ರಹಸ್ಯವನ್ನು ಬಹಿರಂಗಪಡಿಸುತ್ತೀರಿ. ನೀವು ಸಂಬಂಧದಲ್ಲಿ ನಿಮ್ಮ ಸಂಗಾತಿಗೆ  ಉತ್ತಮ ಮತ್ತು ಸುರಕ್ಷಿತ ಭಾವನೆ ಮೂಡಿಸಲು ನೀವು ಏನು ಬೇಕಾದರೂ ಮಾಡುತ್ತೀರಿ. ನೀವು ದಯಾಳು ಮತ್ತು ಸಹಾನುಭೂತಿಯುಳ್ಳವರು. ಆದರೆ, ದಯವಿಟ್ಟು ನಿಮ್ಮ ಕಾಳಜಿ ಮತ್ತು ದಯೆಯನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳಲು ಬಿಡಬೇಡಿ.

ಇದನ್ನೂ ಓದಿ: ನಿಮ್ಮ ಹಣೆಯ ಆಕಾರವೂ ತಿಳಿಸುತ್ತದೆ ವ್ಯಕ್ತಿತ್ವದ ರಹಸ್ಯ

ಹಾರುವ ಹದ್ದು: ನೀವು ಹಾರುವ ಹದ್ದನ್ನು ಗಮನಿಸಿದರೆ, ನಿಮ್ಮ ಪ್ರೀತಿಯ ಭಾಷೆ ಸಂಕೀರ್ಣವಾಗಿದೆ. ಅದಕ್ಕೆ ಕಾರಣ ಕುಟುಂಬ ಸದಸ್ಯರು ಮತ್ತು ನಿಮ್ಮ ಮಾಜಿಯಿಂದ ನೀವು ಬಯಸುತ್ತಿದ್ದ ಅಗತ್ಯ ಗಮನ, ವಾತ್ಸಲ್ಯ ಅಥವಾ ಭಾವನಾತ್ಮಕ ಉಪಸ್ಥಿತಿ ನಿಮಗೆ ಸಿಗದಿರುವುದು. ನಿಮ್ಮ ಜೀವನದಲ್ಲಿ ಯಾರನ್ನಾದರೂ ಬೇಗನೆ ಒಪ್ಪಿಕೊಳ್ಳಲು ನೀವು ಹೆಚ್ಚು ಹಿಂಜರಿಯುತ್ತೀರಿ, ಏಕೆಂದರೆ ಹಿಂದೆ ಕೆಟ್ಟ ಅನುಭವಗಳು ಆಗಿರುತ್ತವೆ. ನೀವು ಭಾವನಾತ್ಮಕವಾಗಿ ಅವಲಂಬಿತವಾಗಿರುವ ವ್ಯಕ್ತಿ. ಆದರೆ ಅಗತ್ಯವಿದ್ದಾಗ ನಿಮಗೆ ಭಾವನಾತ್ಮಕ ಬೆಂಬಲವು ಸಿಗುವುದಿಲ್ಲ. ನಿಮ್ಮನ್ನು ಸಂತೋಷಪಡಿಸಲು ಸಂಬಂಧದ ಅಗತ್ಯವಿಲ್ಲ ಹಾಗಾಗಿ ನೀವು ನಿಮ್ಮ ಸ್ವಂತ ಕಂಪನಿಯನ್ನು ಪ್ರೀತಿಸುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 16 December 25

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!