Personality Test : ನಿಮ್ಮ ಫೇವರಿಟ್ ಟೀ ಯಾವುದು?ಇಷ್ಟಪಟ್ಟು ಸವಿಯುವ ಟೀ ಹೇಳುತ್ತೆ ನಿಗೂಢ ವ್ಯಕ್ತಿತ್ವ
ಜಗತ್ತಿನಲ್ಲಿರುವ ಜನರ ಫೇವರಿಟ್ ಪಾನೀಯಗಳಲ್ಲಿ ಒಂದು ಟೀ. ಅದರಲ್ಲಿಯೂ ಭಾರತೀಯರಿಗೆ ಟೀ ಇಲ್ಲದೇ ಹೋದರೆ ದಿನ ಆರಂಭವಾಗುವುದೇ ಇಲ್ಲ. ಬೆಳಗೆದ್ದು ಒಂದು ಕಪ್ ಬಿಸಿ ಬಿಸಿ ಟೀ ಹೀರಿದ ಮೇಲೆಯೇ ಮುಂದಿನ ಕೆಲಸ ಆರಂಭ. ಬೆಳ್ಳಂಬೆಳಗ್ಗೆ ಒಂದು ಕಪ್ ಚಹಾ ಎನರ್ಜಿ ಬೂಸ್ಟರ್ ಇದ್ದಂತೆ. ಆದರೆ ನಿಮ್ಮ ಫೇವರಿಟ್ ಚಹಾ ಯಾವುದು ಎನ್ನುವುದರ ಮೇಲೆ ವ್ಯಕ್ತಿತ್ವ ನಿರ್ಣಯಿಸಬಹುದು. ಕೆಲವರಿಗೆ ಕೆನೆಭರಿತ ಹಾಲು ಮಿಶ್ರಿತ ಭಾರತೀಯ ಚಹಾ ಎಂದರೆ ಅಚ್ಚು ಮೆಚ್ಚು, ಇನ್ನು ಕೆಲವರು ಬ್ಲ್ಯಾಕ್ ಟೀಯನ್ನು ಇಷ್ಟ ಪಟ್ಟು ಸವಿಯುತ್ತಾರೆ. ಹಾಗಾದ್ರೆ ನಿಮ್ಮ ಫೇವರಿಟ್ ಚಹಾ ಯಾವುದು ಎನ್ನುವುದರ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಬಹುತೇಕರ ಫೇವರಿಟ್ ಪಾನೀಯಗಳಲ್ಲಿ ಒಂದು ಈ ಟೀ (Tea). ಬೆಳಗ್ಗೆ ಟೀ ಕುಡಿಯದಿದ್ದರೆ ಹಲವರ ದಿನವೇ ಆರಂಭವಾಗುವುದಿಲ್ಲ. ಎಷ್ಟೇ ಬ್ಯುಸಿ ವರ್ಕ್ ಇರಲಿ, ಏನೇ ಟೆನ್ಶನ್ ಇರಲಿ ಒಂದು ಕಪ್ ಟೀ ಹೀರಿದರೆ ಅದರಷ್ಟು ಖುಷಿ ಮತ್ತೊಂದಿಲ್ಲ. ಆದರೆ ಈ ಚಹಾಗಳಲ್ಲಿ ಗ್ರೀನ್ ಟೀ (Green tea), ಮಸಾಲೆ ಟೀ (Masala tea), ಬ್ಲ್ಯಾಕ್ ಟೀ (Black tea), ಲೆಮನ್ ಟೀ (Lemon tea) ಹೀಗೆ ನಾನಾ ರೀತಿಯ ವಿಧಗಳಿವೆ. ಆದರೆ ಅತಿಯಾದ ಟೀ ಸೇವನೆಯಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳೇ ಹೆಚ್ಚು. ಕೆಲವು ವಿಧದ ಟೀ ಸೇವನೆಯಿಂದ ಆರೋಗ್ಯ ಪ್ರಯೋಜನ (Health benefits) ಗಳು ಇವೆ. ಆದರೆ ನೀವು ಯಾವ ವಿಧದ ಟೀ ಕುಡಿಯುತ್ತೀರಿ ಎನ್ನುವುದು ನಿಮ್ಮ ವ್ಯಕ್ತಿತ್ವ (Personality) ಬಿಚ್ಚಿಡುತ್ತೆ. ನಿಮ್ಮ ಫೇವರಿಟ್ ಟೀ ಇದರಲ್ಲಿದೆಯೇ ಎಂದು ಒಮ್ಮೆ. ಇದರ ಅನುಗುಣವಾಗಿ ನಿಮ್ಮ ವ್ಯಕ್ತಿತ್ವ ಹಾಗೂ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು.
- ಬ್ಲ್ಯಾಕ್ ಟೀ : ಬಹುತೇಕರ ನೆಚ್ಚಿನ ಟೀಗಳಲ್ಲಿ ಒಂದು ಬ್ಲ್ಯಾಕ್ ಟೀ. ಇದರಲ್ಲಿ ಅತ್ಯಧಿಕ ಪ್ರಮಾಣದ ಕೆಫೀನ್ ಅಂಶವಿದ್ದು, ಇದು ಪ್ರಬಲ ಮತ್ತು ಶಕ್ತಿಯುತ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ. ಈ ಟೀಯನ್ನು ಇಷ್ಟ ಪಟ್ಟು ಸವಿಯುವವರು ನೇರ ಸ್ವಭಾವದವರು, ಇದ್ದ ವಿಷಯವನ್ನು ನೇರವಾಗಿಯೇ ಹೇಳುತ್ತಾರೆ.ತಮಗೆ ಬೇಕೇನಿಸಿದ್ದನ್ನು ಪಡೆಯಲು ಹಿಂದೆ ಮುಂದೆ ನೋಡುವುದಿಲ್ಲ. ತನ್ನ ಜೊತೆಗಿರುವರೊಂದಿಗೆ ಗುದ್ದಾಡಿಯಾದರೂ ಪಡೆದುಕೊಳ್ಳುತ್ತಾರೆ. ಬೇರೆಯವರ ಟೀಕೆಗಳಿಗೆ ಕಿವಿಗೊಡುವುದಿಲ್ಲ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಈ ವ್ಯಕ್ತಿಗಳು ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಹಾಗೂ ಅದನ್ನು ಅಷ್ಟೇ ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುತ್ತಾರೆ. ತಮ್ಮ ಗುರಿಗಳನ್ನು ಸಾಧಿಸುವತ್ತ ಕೆಲಸ ಮಾಡುತ್ತಾರೆ. ಆತ್ಮೀಯರಿಗೆ ಹಾಗೂ ಸಂಗಾತಿಗಳಿಗೆ ಕೆಲಸದ ನಡುವೆ ಬಿಡುವು ಮಾಡಿಕೊಂಡು ಸಮಯ ಕೊಡುತ್ತಾರೆ.
- ಭಾರತೀಯ ಚಹಾ : ಹಾಲು, ಸಕ್ಕರೆ ಮಿಶ್ರಿತ ಭಾರತೀಯ ಚಹಾ ಎಂದರೆ ಹೆಚ್ಚಿನವರಿಗೆ ಅಚ್ಚು ಮೆಚ್ಚು. ಕೆಲವರು ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬಳಸಿ ಚಹಾ ತಯಾರಿಸುತ್ತಾರೆ. ಭಾರತೀಯ ಚಹಾ ಇಷ್ಟ ಪಡುವ ವ್ಯಕ್ತಿಗಳು ಉತ್ಸಾಹಭರಿತ ಮತ್ತು ಹರ್ಷಚಿತ್ತವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ದೊಡ್ಡ ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡು ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತಾರೆ. ಈ ಜನರು ಜೀವನದಲ್ಲಿ ತೃಪ್ತರಾಗುವುದೇ ಇಲ್ಲ. ಹೀಗಾಗಿ ಎಲ್ಲಾ ವಿಷಯದಲ್ಲಿ ವಿಪರೀತ ಆಸೆಯಿರುತ್ತದೆ. ತನ್ನ ಸುತ್ತಮುತ್ತಲಿನ ಜನರೊಂದಿಗೆ ಹೆಚ್ಚು ಬೆರೆಯುತ್ತಾರೆ. ಈ ವ್ಯಕ್ತಿಗಳ ಸ್ನೇಹ ಬಳಗ ದೊಡ್ಡದಿದ್ದು, ನಿಷ್ಠಾವಂತ ಸ್ನೇಹಿತರನ್ನು ಹೊಂದಿರುತ್ತಾರೆ. ಇವರು ಸಕಾರಾತ್ಮಕ ಮತ್ತು ಆಶಾವಾದಿಗಳಾಗಿರುತ್ತಾರೆ.
- ಗ್ರೀನ್ ಟೀ : ಗ್ರೀನ್ ಟೀ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಈ ಚಹಾ ಇಷ್ಟಪಡುವ ವ್ಯಕ್ತಿಗಳು ತಮ್ಮ ಯೋಗಕ್ಷೇಮಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಈ ಜನರಿಗೆ ಪಾರ್ಟಿ ಮಾಡುವುದೆಂದರೆ ತುಂಬಾ ಇಷ್ಟ. ಸದಾ ಉತ್ಸಾಹದಿಂದ ಇರಲು ಬಯಸುವ ಈ ಜನರು ಸೋಮಾರಿತನವನ್ನು ಹೆಚ್ಚು ಇಷ್ಟಪಡುವುದಿಲ್ಲ. ಒತ್ತಡದ ಸನ್ನಿವೇಶದಲ್ಲಿಯೂ ಶಾಂತವಾಗಿ ಮತ್ತು ಸಂಯಮದಿಂದ ಇರುತ್ತಾರೆ. ಸೃಜನಶೀಲ ಮತ್ತು ಆಶಾವಾದಿಗಳಾಗಿದ್ದು, ಇವರು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
- ಕ್ಯಾಮೊಮೈಲ್ ಚಹಾ : ಗ್ರೀನ್ ಟೀಗಿಂತ ಹೆಚ್ಚು ಆರೋಗ್ಯಕರವಾದ ಗಿಡಮೂಲಿಕೆ ಚಹಾ ಇದಾಗಿದೆ. ಕ್ಯಾಮೊಮೈಲ್ ಚಹಾ ಇಷ್ಟ ಪಡುವ ವ್ಯಕ್ತಿಗಳು ಒತ್ತಡದ ಜೀವನವನ್ನು ನಡೆಸುತ್ತಾರೆ. ಆದರೆ ಇವರು ಅತೀ ಬುದ್ಧಿವಂತರು. ಈ ವ್ಯಕ್ತಿಗಳಿಗೆ ಎಷ್ಟು ಸಮಯವಿದ್ದರೂ ಸಾಕಾಗುವುದಿಲ್ಲ. ಈ ಜನರು ಅಂದುಕೊಂಡಂತೆ ಎಲ್ಲವು ನಡೆಯಬೇಕು, ಇಲ್ಲದಿದ್ದರೆ ಆತಂಕಕ್ಕೆ ಒಳಗಾಗುವ ಸಂಭವವೇ ಹೆಚ್ಚು. ಶಾಂತ ಸ್ವಭಾವದವರಾದ ಈ ವ್ಯಕ್ತಿಗಳು ತನ್ನ ಸುತ್ತ ಮುತ್ತಲಿನ ಜನರಿಗೆ ಉತ್ಸಾಹಭರಿತ ಮತ್ತು ಆಹ್ಲಾದಕರ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ. ಇವರಲ್ಲಿ ಆಳವಾಗಿ ಸಹಾನುಭೂತಿ, ಕಲ್ಪನಾಶೀಲ ಗುಣಗಳಿರುತ್ತದೆ. ಹೀಗಾಗಿ ಕಲ್ಪನೆಯಲ್ಲಿಯೇ ಮುಳುಗುವುದೇ ಹೆಚ್ಚು.
- ಐಸ್ಡ್ ಟೀ :ಕೆಲವರಿಗೆ ತಣ್ಣನೆಯ ಚಹಾ ಎಂದರೆ ತುಂಬಾನೇ ಇಷ್ಟ . ಐಸ್ಡ್ ಟೀ ಹೆಚ್ಚು ಸವಿಯುವ ವ್ಯಕ್ತಿಗಳು ಶಾಂತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಬಲವಾದ ಇಚ್ಛಾಶಕ್ತಿ ಇರುವುದಿಲ್ಲ. ಈ ವ್ಯಕ್ತಿಗಳಲ್ಲಿ ನಿಸ್ವಾರ್ಥ ಗುಣವಿದ್ದು ಎಲ್ಲರ ಹಿತವನ್ನೇ ಬಯಸುತ್ತಾರೆ. ಈ ಜನರು ಬುದ್ಧಿವಂತರಾಗಿದ್ದು ಯಾವ ಸಂದರ್ಭದಲ್ಲಿ ಏನು ಮಾತಾಡಬೇಕು, ಮಾತಾಡಬಾರದು ಎನ್ನುವುದು ಇವರಿಗೆ ಚೆನ್ನಾಗಿ ತಿಳಿದಿದೆ. ಒಬ್ಬಂಟಿಯಾಗಿರಲು ಬಯಸುತ್ತಾರೆ. ಇವರ ಮನಸ್ಸು ಸ್ಥಿರವಾಗಿರದು. ತಮ್ಮ ಆಸೆಗಳು ಕ್ಷಣಾರ್ಧದಲ್ಲಿ ಬದಲಾಗುತ್ತಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ