Kannada News Lifestyle Personality Test: Your sitting positions reveals these personality traits Kannada News
Personality Test: ನೀವು ಕುಳಿತುಕೊಳ್ಳುವ ಭಂಗಿಯೇ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತೆ
ಸಾಮಾನ್ಯವಾಗಿ ವ್ಯಕ್ತಿತ್ವವು ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗೆಂದು ತಿಳಿಯಲು ಅವರ ಜೊತೆಯಲ್ಲಿ ಬೆರೆಯಬೇಕು. ಆದರೆ ನಿಂತುಕೊಳ್ಳುವ ಭಂಗಿ, ಮೂಗಿನ ಆಕಾರ, ಕೂದಲಿನ ಬಣ್ಣ, ಕೈಬೆರಳಿನ ಆಕಾರದಿಂದ ವ್ಯಕ್ತಿಯು ಹೇಗೆಂದು ನಿರ್ಣಯಿಸಬಹುದು. ಅದಲ್ಲದೇ ಕುಳಿತುಕೊಳ್ಳುವ ಭಂಗಿಯಿಂದಲೇ ವ್ಯಕ್ತಿತ್ವ ಹೇಳಬಹುದೆಂದಂತೆ. ಹಾಗಾದ್ರೆ ನೀವು ಯಾವ ಭಂಗಿಯಲ್ಲಿ ಕುಳಿತುಕೊಳ್ಳುತ್ತೀರಿ ಎನ್ನುವ ಆಧಾರದ ಮೇಲೆ ನಿಮ್ಮ ಗುಣಸ್ವಭಾವವನ್ನು ತಿಳಿಯಿರಿ.
ಸಾಂದರ್ಭಿಕ ಚಿತ್ರ
Follow us on
ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವ ಎನ್ನುವುದು ಬಹಳ ಮುಖ್ಯ. ಎಷ್ಟೆಲ್ಲಾ ಪದವಿಗಳನ್ನು ಗಳಿಸಿದ್ದರೂ ಕೂಡ ವ್ಯಕ್ತಿತ್ವದ ಹೇಗಿದೆ ಎನ್ನುವುದರ ಮೇಲೆ ಸಮಾಜವು ನಿಮ್ಮನ್ನು ಗೌರವಿಸುತ್ತದೆ. ಸಾಮಾನ್ಯವಾಗಿ ಮಲಗುವ ಭಂಗಿ, ಮೂಗಿನ ಆಕಾರ, ನಡೆಯುವ ಶೈಲಿಯ ಆಧಾರದ ಮೇಲೆ ವ್ಯಕ್ತಿತ್ವ ಏನೆಂದು ತಿಳಿಯಬಹುದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ನೀವು ಹೇಗೆ ಕುಳಿತು ಕೊಳ್ಳುತ್ತೀರಿ ಆ ಶೈಲಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತದ್ದು ಎಂದು ನಿರ್ಣಯಿಸಬಹುದು. ಈ ಶೈಲಿಯು ನಿಮ್ಮ ರಹಸ್ಯಮಯ ಗುಣಗಳನ್ನು ಬಿಚ್ಚಿಡುತ್ತದೆಯಂತೆ.
ನೇರವಾಗಿ ಕುಳಿತುಕೊಳ್ಳುವವರು : ಮೊಣಕಾಲುಗಳನ್ನು ನೇರವಾಗಿಟ್ಟುಕೊಳ್ಳುವ ವ್ಯಕ್ತಿಗಳು ಸಾಮರ್ಥ್ಯ ಮತ್ತು ಕೌಶಲ್ಯದ ಬಗ್ಗೆ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಈ ವ್ಯಕ್ತಿಗಳಲ್ಲಿ ಅಭದ್ರತೆಯ ಭಾವನೆ ಕಡಿಮೆಯಿದ್ದು, ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಈ ರೀತಿಯ ಭಂಗಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳು ಬುದ್ಧಿವಂತರು, ತರ್ಕಬದ್ಧ ಯೋಚನೆಹಾಗೂ ಸಮಯಪ್ರಜ್ಞೆ ಹೊಂದಿರುವವರಾಗಿರುತ್ತಾರೆ. ತನ್ನ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಲ್ಲಿ ಇವರು ಒಂದು ಹೆಜ್ಜೆ ಮುಂದಿರುತ್ತಾರೆ. ಕಷ್ಟದ ಸಂದರ್ಭವನ್ನು ಕೂಲ್ ಆಗಿ ನಿಭಾಯಿಸುವ ಈ ವ್ಯಕ್ತಿಗಳಿಗೆ ತಾಳ್ಮೆ ಹೆಚ್ಚು. ಪ್ರಾಮಾಣಿಕರಾಗಿದ್ದು ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಲು ಇಷ್ಟ ಪಡುವುದಿಲ್ಲ.
ಮೊಣಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳುವವರು : ಮೊಣಕಾಲುಗಳನ್ನು ಅಗಲವಿರಿಸಿ ಕುಳಿತುಕೊಳ್ಳುವವರು ವ್ಯಕ್ತಿಗಳು ನಿಜಕ್ಕೂ ಸ್ವಾರ್ಥಿಗಳು. ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಅಹಂಕಾರದಿಂದಲೇ ಬೇರೆಯವರನ್ನು ಟೀಕಿಸುತ್ತಾರೆ. ಸಾಧಿಸುವ ಛಲವಿದ್ದರೂ ತಪ್ಪಾದರೆ ಎನ್ನುವ ಭಯ ಆತಂಕವೇ ಇವರಲ್ಲಿ ಹೆಚ್ಚಿರುತ್ತದೆ. ಏಕಾಗ್ರತೆ ಕಡಿಮೆಯಿದ್ದು ಯಾವುದೇ ಕೆಲಸವನ್ನು ಗಮನಕೊಟ್ಟು ಮಾಡಲು ಆಗುವುದಿಲ್ಲ. ಹೀಗಾಗಿ ಕೈಗೆತ್ತಿಕೊಂಡ ಕೆಲಸವು ಅರ್ಧಕ್ಕೆ ನಿಂತು ಬಿಡುತ್ತದೆ. ಬುದ್ಧಿವಂತರಾಗಿದ್ದರೂ ಆಲೋಚನೆಗಳು ಅಸಂಬದ್ಧವಾಗಿರುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಬೇಸರ ಪಟ್ಟು ಕೊಳ್ಳುವ ಕಾರಣ, ಇವರಿಗೆ ಸಮಾಧಾನ ಮಾಡುವವರ ಅವಶ್ಯಕತೆಯು ಹೆಚ್ಚಾಗಿರುತ್ತದೆ. ಈ ವ್ಯಕ್ತಿಗಳನ್ನು ಕೆಲಸದ ವಿಷಯದಲ್ಲಿ ಯಾರಾದರೂ ಹುರಿದುಂಬಿಸುತ್ತಿರಲೇಬೇಕು.
ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವವರು : ಹೆಚ್ಚಿನವರಿಗೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ಸೃಜನಾತ್ಮಕ ಆಲೋಚನೆಗಳಿರುತ್ತಾರೆ. ಆದರೆ ಕನಸು ಕಾಣುವುದರಲ್ಲಿ ಇವರನ್ನು ಮೀರಿಸುವವರಿಲ್ಲ. ಈ ವ್ಯಕ್ತಿಗಳು ಘನತೆಯುಳ್ಳವರು. ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆನ್ನುವುದು ಇವರಿಗೆ ಚೆನ್ನಾಗಿ ಗೊತ್ತಿರುತ್ತೆ. ಸಲಹೆ ಸೂಚನೆ ನೀಡುವ ಮೂಲಕ ಎಲ್ಲರಿಗೂ ಹತ್ತಿರವಾಗಿರುತ್ತಾರೆ.
ಒರಗಿ ಕುಳಿತುಕೊಳ್ಳುವವರು : ಯಾವುದಾದಕ್ಕಾದರೂ ಒರಗಿ ಕುಳಿತುಕೊಳ್ಳುವವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಹಾಗೂ ಪಾಲ್ಗೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿರ್ಣಯಿಸುತ್ತಾರೆ. ಈ ವ್ಯಕ್ತಿಗಳು ತಮ್ಮ ಆಲೋಚನೆಗೆ ತಕ್ಕಂತೆ ಪರಿಸ್ಥಿತಿಗಳನ್ನು ವಿಮರ್ಶೆ ಮಾಡುತ್ತಾರೆ ಕೂಡ. ಬೇರೆಯವರ ಭಾವನೆಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದು, ಈ ವ್ಯಕ್ತಿಗಳಿಗೆ ಇತರ ವ್ಯಕ್ತಿಗಳ ಬೆಂಬಲವು ಅಗತ್ಯವಾಗಿ ಬೇಕಾಗುತ್ತದೆ.
ಪಾದಗಳನ್ನು ಒಂದರ ಮೇಲೊಂದು ಹಾಕಿ ಕುಳಿತುಕೊಳ್ಳುವವರು : ಈ ರೀತಿಯ ಭಂಗಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಈ ಭಂಗಿಯು ಆರಾಮದಾಯಕತೆಯನ್ನು ಸೂಚಿಸುತ್ತದೆ. ಈ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಆತ್ಮವಿಶ್ವಾಸವನ್ನು ತುಂಬುತ್ತಾರೆ ಝೆಡ್ ಜೊತೆಗೆ ಎಲ್ಲರ ಮಾತಿಗೂ ಕಿವಿಯಾಗುತ್ತಾರೆ. ಸದಾ ಕೆಲಸ ಮಾಡುತ್ತಿದ್ದು ವಿಶ್ರಾಂತಿಯನ್ನೂ ಪಡೆಯುವುದಿಲ್ಲ. ಹೆಚ್ಚು ಮಹತ್ವಕಾಂಕ್ಷೆಯನ್ನು ಹೊಂದಿರುತ್ತಾರೆ.
ಮೊಣಕಾಲಿನ ಮೇಲೆ ಪಾದವನ್ನಿಟ್ಟು ಕುಳಿತುಕೊಳ್ಳುವವರು : ಈ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸವು ಹೆಚ್ಚಿರುತ್ತದೆ. ಅಧಿಕಾರಯುತವಾದ ನಡೆ ಹೊಂದಿದ್ದು ತೃಪ್ತಿ ಸುರಕ್ಷತಾ ಭಾವವು ಎದ್ದು ಕಾಣುತ್ತದೆ. ಏನಾದರೂ ಬೇಕು ಎಂದರೆ ಆ ಸಲುವಾಗಿ ಶಕ್ತಿಮೀರಿ ಪ್ರಯತ್ನ ಮಾಡುವ ಮನೋಭಾವ ಅವರಲ್ಲಿರುತ್ತದೆ. ಚುರುಕಾಗಿದ್ದು, ವೃತ್ತಿ ಜೀವನದ ಕಡೆಗೆ ಹೆಚ್ಚು ಒತ್ತು ಕೊಟ್ಟು ಶ್ರಮವಹಿಸಿ ದುಡಿ ಯುವ ವ್ಯಕ್ತಿಗಳಾಗಿರುತ್ತಾರೆ.