Personality Test: ನಿಮ್ಮ ಫೇವರಿಟ್ ಸಂಖ್ಯೆ ಯಾವುದು? ನೆಚ್ಚಿನ ಸಂಖ್ಯೆಯೇ ರಿವೀಲ್ ಮಾಡುತ್ತೆ ವ್ಯಕ್ತಿತ್ವ
ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಯು ವಿಭಿನ್ನವಾಗಿರುತ್ತದೆ. ಹೀಗಾಗಿ ಎಲ್ಲರೂ ಕೂಡ ತಮ್ಮ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಬದುಕಲು ಇಷ್ಟಪಡುತ್ತಾರೆ. ಅದಲ್ಲದೇ ಇಷ್ಟ ಕಷ್ಟಗಳು ಭಿನ್ನವಾಗಿದ್ದು ಅದುವೇ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆಯಂತೆ. ವ್ಯಕ್ತಿಯೊಬ್ಬ ನೆಚ್ಚಿನ ಸಂಖ್ಯೆಯು ವ್ಯಕ್ತಿತ್ವ ರಿವೀಲ್ ಮಾಡುತ್ತದೆ ಎಂದು ತಿಳಿದಿದೆಯೇ? ನಿಮ್ಮ ಫೇವರಿಟ್ ಸಂಖ್ಯೆಯ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿತ್ವಕ್ಕೆ ಸಂಬಂಧ ಪಟ್ಟ ನೂರಾರು ಪರೀಕ್ಷೆಗಳನ್ನು ಗಮನಿಸಬಹುದು. ಒಬ್ಬ ವ್ಯಕ್ತಿಯ ಕಣ್ಣು, ಕಿವಿ ಬಾಯಿ, ಮೂಗು, ನಾಲಗೆ, ಕಿವಿ ಹಾಗೂ ದೇಹದ ಅಂಗಗಳ ಆಕಾರದಿಂದ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು. ಅದೇ ರೀತಿ ವ್ಯಕ್ತಿಯೊಬ್ಬನ ಇಷ್ಟ ಕಷ್ಟಗಳು ನಿಗೂಢ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಫೇವರಿಟ್ ಸಂಖ್ಯೆಯಿಂದ ವ್ಯಕ್ತಿಯ ನಿಜವಾದ ಗುಣಸ್ವಭಾವ ಹಾಗೂ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು.
- ನೆಚ್ಚಿನ ಸಂಖ್ಯೆ 1 : ನೆಚ್ಚಿನ ಸಂಖ್ಯೆ ಒಂದು ಆಗಿದ್ದರೆ ಈ ಜನರು ಸ್ವತಂತ್ರರಾಗಿ ಮತ್ತು ಅವಲಂಬಿತರಾಗದೇ ಇರಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿದ್ದು ಜೀವನದಲ್ಲಿ ಅಂದುಕೊಂಡದ್ದೆಲ್ಲವನ್ನು ಸಾಧಿಸುತ್ತಾರೆ. ಯಾವುದೇ ಕೆಲಸವನ್ನು ತಮ್ಮ ಮನಸ್ಸಿನಿಂದ ಮಾಡುತ್ತಾರೆ. ಜೀವನದಲ್ಲಿ ಮುಂದಿರಲು ಇಷ್ಟ ಪಡುವ ಗುಣವು ಇವರದ್ದಾಗಿದ್ದು, ಈ ಜನರು ಧೈರ್ಯಶಾಲಿ ಮತ್ತು ಸೃಜನಶೀಲ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.
- ನೆಚ್ಚಿನ ಸಂಖ್ಯೆ 2 : ಎರಡನೇ ಸಂಖ್ಯೆಯನ್ನು ಇಷ್ಟಪಡುವ ಜನರು ಭಾವನಾತ್ಮಕ ಜೀವಿಗಳು. ಜನರು ಸೃಜನಶೀಲರು, ಕಲ್ಪನಾಶೀಲರು ಹಾಗೂ ಸೂಕ್ಷ್ಮ ಸ್ವಭಾವದವರು. ಪ್ರಾಮಾಣಿಕವಾಗಿ ಹೃದಯದಿಂದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ನಕಾರಾತ್ಮಕ ಸಂದರ್ಭಗಳಲ್ಲಿ ಸುಲಭವಾಗಿ ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ.
- ನೆಚ್ಚಿನ ಸಂಖ್ಯೆ 3 : ಒಬ್ಬ ವ್ಯಕ್ತಿಯು ಮೂರನೇ ಸಂಖ್ಯೆಯನ್ನು ಈ ವ್ಯಕ್ತಿಗಳು ಸ್ನೇಹಮಯಿ ವ್ಯಕ್ತಿಗಳಾಗಿದ್ದು, ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಈ ಜನರು ಸಹಜವಾಗಿ ಎಲ್ಲಾ ವಿಷಯದಲ್ಲೂ ಕುತೂಹಲ ಸ್ವಭಾವವುಳ್ಳರಾಗಿದ್ದು, ಇತರರೊಂದಿಗೆ ಚರ್ಚಿಸುವುದೆಂದರೆ ಇವರಿಗೆ ತುಂಬಾನೇ ಇಷ್ಟ. ಈ ವ್ಯಕ್ತಿಗಳು ನಂಬಿಕೆ ಮೇಲೆಯೇ ಜೀವನ ನಡೆಸುತ್ತಾರೆ.
- ನೆಚ್ಚಿನ ಸಂಖ್ಯೆ 4 : ನಾಲ್ಕು ಸಂಖ್ಯೆಯನ್ನು ಇಷ್ಟಪಡುವ ಜನರು ವಿಶ್ವಾಸಾರ್ಹರು, ಪ್ರಾಮಾಣಿಕ ಗುಣ ಹೊಂದಿರುತ್ತಾರೆ. ತನ್ನವರಿಗಾಗಿ ಏನ್ನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅಪಾರವಾದ ಶ್ರದ್ಧೆಯಿಂದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಈ ವ್ಯಕ್ತಿಗಳ ಆಂತರಿಕ ಸೌಂದರ್ಯ ಮತ್ತು ವ್ಯಕ್ತಿತ್ವವು ಅವರ ಮುಖದಲ್ಲಿ ಪ್ರತಿಫಲಿಸುವುದರಿಂದ ಎಲ್ಲರನ್ನು ಸುಲಭವಾಗಿ ಸೆಳೆಯುತ್ತಾರೆ. ಅದಲ್ಲದೇ ಇಂತಹ ಜನರು ಹಠಮಾರಿ ಮತ್ತು ಮುಂಗೋಪಿಗಳು. ಸಿಟ್ಟು ಬಂದರೆ ಈ ವ್ಯಕ್ತಿಗಳನ್ನು ನಿಯಂತ್ರಿಸಲು ಆಗುವುದಿಲ್ಲ.
- ನೆಚ್ಚಿನ ಸಂಖ್ಯೆ 5 : ನೆಚ್ಚಿನ ಸಂಖ್ಯೆ ಐದು ಆಗಿದ್ದರೆ ಈ ಜನರು ಉತ್ಸಾಹದಿಂದ ಕೂಡಿರುತ್ತಾರೆ. ಸ್ವಭಾವತಃ ಧೈರ್ಯಶಾಲಿಗಳಾಗಿರುತ್ತಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರುವುದಿಲ್ಲ, ಎಲ್ಲವನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುವ ಇವರಲ್ಲಿ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರುವುದಿಲ್ಲ. ಸ್ವತಂತ್ರ ರಾಗಿ ಬದುಕಲು ಇಷ್ಟ ಪಡುತ್ತಾರೆ.
- ನೆಚ್ಚಿನ ಸಂಖ್ಯೆ 6 : ಯಾರ ನೆಚ್ಚಿನ ಸಂಖ್ಯೆ ಆರು ಆಗಿರುತ್ತದೆಯೋ ಆ ವ್ಯಕ್ತಿಗಳಲ್ಲಿ ಸಹಾಯ ಮಾಡುವ ಗುಣ ಈ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ. ಬೇಕಾದ್ದನು ಕೇಳಿ ಪಡೆದುಕೊಳ್ಳುತ್ತಾರೆ. ತಮ್ಮ ಕುಟುಂಬದವರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಾರೆ.
- ನೆಚ್ಚಿನ ಸಂಖ್ಯೆ 7 : ನೆಚ್ಚಿನ ಸಂಖ್ಯೆಯು ಏಳು ಸಂಖ್ಯೆಯಾಗಿದ್ದರೆ ಈ ವ್ಯಕ್ತಿಗಳು ಶಾಂತ ಸ್ವಭಾವದವರು. ಈ ವ್ಯಕ್ತಿಗಳಲ್ಲಿ ಕುತೂಹಲಕಾರಿ ಗುಣವು ಹೆಚ್ಚಿರುತ್ತದೆ. ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಪ್ರಾಮಾಣಿಕವಾಗಿ ಮಾಡಿ ಮುಗಿಸುತ್ತಾರೆ. ಅದಲ್ಲದೇ, ತಮ್ಮ ಪಾಲುದಾರರಿಗೆ ತುಂಬಾ ನಿಷ್ಠವಂತರಾಗಿದ್ದು, ಹೀಗಾಗಿ ಎಲ್ಲರ ನಂಬಿಕೆ ಗಳಿಸಿಕೊಳ್ಳುತ್ತಾರೆ. ಇನ್ನು ಸಂಬಂಧವನ್ನು ಉಳಿಸಿಕೊಳ್ಳಲು ನೀವು ಯಾವುದೇ ಹಂತಕ್ಕೆ ಹೋಗುವ ವ್ಯಕ್ತಿಗಳಾ ಗಿರುತ್ತಾರೆ.
- ನೆಚ್ಚಿನ ಸಂಖ್ಯೆ 8 : ಇಷ್ಟದ ಸಂಖ್ಯೆಯು ಎಂಟು ಆಗಿದ್ದರೆ ಈ ವ್ಯಕ್ತಿಗಳ ಭಾವನೆ ನಿಯಂತ್ರಿಸುವಲ್ಲಿ ನಿಪುಣರು. ಪ್ರೀತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. ಈ ವ್ಯಕ್ತಿತ್ವದಲ್ಲಿ ಶ್ರೀಮಂತರಾಗಿದ್ದು, ಬಲವಾದ ಇಚ್ಛಾಶಕ್ತಿ ಹಾಗೂ ತಮ್ಮ ಬಗ್ಗೆಯೇ ಹೆಮ್ಮೆ ಪಟ್ಟುಕೊಳ್ಳುವ ಗುಣ ಇವರದ್ದು. ಆದರೆ ಕೆಲವೊಮ್ಮೆ ಬೇಡದ ಆಲೋಚನೆಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ.
- ನೆಚ್ಚಿನ ಸಂಖ್ಯೆ 9 : ನೆಚ್ಚಿನ ಸಂಖ್ಯೆ ಒಂಬತ್ತು ಆಗಿದ್ದರೆ ತಮ್ಮ ವರ್ಚಸ್ಸಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ದಯೆ, ಆತ್ಮವಿಶ್ವಾಸ ಹಾಗೂ ಎಲ್ಲರೊಂದಿಗೆ ಬೆರೆಯುವ ಗುಣ ಹೆಚ್ಚಿರುತ್ತದೆ. ಜೀವನದ ಗುರಿಗಳ ಬಗ್ಗೆ ಸ್ಪಷ್ಟವಾಗಿದ್ದು ಹೀಗಾಗಿ ಅದರತ್ತ ಕೆಲಸ ಮಾಡುತ್ತಾರೆ. ಎಲ್ಲರ ಬಗ್ಗೆಯು ಅತೀವ ಕಾಳಜಿ, ಪ್ರೀತಿಯನ್ನು ಹೊಂದಿದ್ದು ಅದು ಇವರ ಮಾತಿನಿಂದಲೇ ತಿಳಿಯುತ್ತದೆ
- ನೆಚ್ಚಿನ ಸಂಖ್ಯೆ 0 : ಶೂನ್ಯವು ಇಷ್ಟದ ಸಂಖ್ಯೆಯಾಗಿದ್ದರೆ ಆ ವ್ಯಕ್ತಿಗಳು ಸಂಪೂರ್ಣತೆ ಮತ್ತು ಪರಿಪೂರ್ಣತೆಯನ್ನು ಸಾಕಾರಗೊಳಿಸುವ ಸ್ವಭಾವದವರು. ಜನರು ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳುವುದರ ಜೊತೆಗೆ ಇತರರನ್ನು ಉತ್ತಮಗೊಳಿಸಲು ಪ್ರಯತ್ನ ಪಡುತ್ತಾರೆ. ಇತರರಿಗೆ ಸಲಹೆ ನೀಡುವ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಬಯಸುವ ಗುಣ ಇವರದ್ದಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




