Safer Internet Day 2025: ಸುರಕ್ಷಿತ ಅಂತರ್ಜಾಲ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಇತ್ತೀಚೆಗಿನ ದಿನಗಳಲ್ಲಿ ಯುವಜನತೆಯಂತೂ ಅಂತರ್ಜಾಲದಲ್ಲಿ ಜಾಲಾಡುವುದನ್ನು ನೋಡಬಹುದು. ಈ ಮಾಯಾಜಾಲದಲ್ಲಿ ಒಮ್ಮೆ ಬಿದ್ದರೆ ಹೊರಬರುವುದು ಕಷ್ಟಕರ. ಆರೋಗ್ಯಕರ ಮತ್ತು ಹೆಚ್ಚು ಸುರಕ್ಷಿತ ಆನ್‌ಲೈನ್ ಅನುಭವವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಸುರಕ್ಷಿತ ಅಂತರ್ಜಾಲ ದಿನವನ್ನು ಮೀಸಲಿಡಲಾಗಿದೆ. ಪ್ರತಿ ವರ್ಷವು ಫೆಬ್ರವರಿ ತಿಂಗಳ ಎರಡನೇ ವಾರದ ಮಂಗಳವಾರದಂದು ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 11 ರಂದು ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಇಂಟರ್ನೆಟ್ ಇಲ್ಲದ ಜಗತ್ತನ್ನು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಒಂದು ಕ್ಷಣ ಇಂಟರ್ನೆಟ್ ಸ್ಥಗಿತಗೊಂಡರೆ ಎಲ್ಲಾ ಕೆಲಸಗಳಿಗೂ ಬ್ರೇಕ್ ಬೀಳುತ್ತದೆ. ಹೀಗಾಗಿ ಪ್ರಸ್ತುತ ಜಗತ್ತು ನಡೆಯುತ್ತಿರುವುದೇ ಇಂಟರ್ನೆಟ್ ಮೂಲಕ ಎನ್ನಬಹುದು. ಜಗತ್ತಿನ ಮೂಲೆ ಮೂಲೆಯ ವಿದ್ಯಾಮಾನಗಳಿಂದ ಹಿಡಿದು, ಎಲ್ಲಾ ಸಂಗತಿಗಳು ನಿಮಿಷಾರ್ಧದಲ್ಲಿ ಸಿಗುವುದಕ್ಕೆ ಮೂಲ ಕಾರಣವೇ ಈ ಇಂಟರ್ನೆಟ್. ಆದರೆ ಸ್ಮಾರ್ಟ್ ಫೋನ್ ಎಲ್ಲರ ಕೈಗೆ ಬಂದ ಮೇಲಂತೂ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿದೆ. ಆದರೆ ಇದನ್ನು ಎಷ್ಟು ಬೇಕೋ ಅಷ್ಟೇ ಬಳಸಿಕೊಂಡರೆ, ಇದರ ಬಳಕೆಯು ಅತಿಯಾದರೆ ಆರೋಗ್ಯಕ್ಕೆಕ್ಕೆ ಮಾತ್ರವಲ್ಲ ಜೀವಕ್ಕೂ ಕುತ್ತಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಖಾಸಗಿ ಮಾಹಿತಿ, ಬ್ಯಾಂಕ್ ಹಣವೆಲ್ಲವು ಸೈಬರ್ ಹ್ಯಾಕರ್ಸ್ ದೋಚುತ್ತಾರೆ. ಆನ್‌ಲೈನ್ ಸಮಸ್ಯೆಗಳು ಸೇರಿದಂತೆ ಇದರ ಸ್ವಲ್ಪ ಎಚ್ಚರ ತಪ್ಪಿದರೆ ಬಳಕೆದಾರರು ಎದುರಿಸುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತದೆ.
ಸುರಕ್ಷಿತ ಅಂತರ್ಜಾಲ ದಿನದ ಇತಿಹಾಸ
2004 ರಲ್ಲಿ ಇಯು ಸೇಫ್‌ಬಾರ್ಡರ್ಸ್ ಪ್ರಾಜೆಕ್ಟ್‌ನ ಉಪಕ್ರಮವಾಗಿ ಈ ದಿನವನ್ನು ಪ್ರಾರಂಭಿಸಲಾಯಿತು. ಇದನ್ನು ಇನ್‌ಸೇಫ್ ನೆಟ್‌ವರ್ಕ್ ತನ್ನ ಆರಂಭಿಕ ಕ್ರಮಗಳಲ್ಲಿ ಒಂದಾಗಿ 2005 ರಲ್ಲಿ ತೆಗೆದುಕೊಂಡಿತು. ಈ ದಿನವನ್ನು ಜಗತ್ತಿನಾದ್ಯಂತ ಸುಮಾರು 180 ಕ್ಕೂ ಅಧಿಕ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತಿದೆ. ಈ ದಿನದಂದು ಆನ್‌ಲೈನ್ ಸಮಸ್ಯೆಗಳು ಸೇರಿದಂತೆ ಇದರ ಅತಿಯಾದ ಬಳಕೆಯಿಂದ ಬಳಕೆದಾರರ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ವರ್ಷ ಫೆಬ್ರವರಿ 11 ರಂದು ಅಂತರ್ಜಾಲ ಸುರಕ್ಷಿತ ದಿನವನ್ನು ಆಚರಿಸಲಾಗುತ್ತಿದೆ.
ಸುರಕ್ಷಿತ ಅಂತರ್ಜಾಲ ದಿನದ ಮಹತ್ವ
ಪ್ರತಿ ವರ್ಷವು ಫೆಬ್ರವರಿ ತಿಂಗಳ ಎರಡನೇ ವಾರದ ಮಂಗಳವಾರದಂದು ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಇಂಟರ್ನೆಟ್ ಬಳಕೆಯಿಂದ ಪ್ರಯೋಜನಗಳು ಎಷ್ಟಿದೆಯೋ, ಅಷ್ಟೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ವಲ್ಪ ಯಾಮಾರಿದ್ರೂ ಖಾಸಗಿ ಮಾಹಿತಿ, ಬ್ಯಾಂಕ್ ಹಣ, ಅಗತ್ಯ ಮಾಹಿತಿಗಳನ್ನು ಸೈಬರ್ ಹ್ಯಾಕರ್ಸ್ ದೋಚುತ್ತಾರೆ. ಹೀಗಾಗಿ ಆನ್‌ಲೈನ್ ಸಮಸ್ಯೆಗಳು ಸೇರಿದಂತೆ ಇದರ ಸ್ವಲ್ಪ ಎಚ್ಚರ ತಪ್ಪಿದರೆ ಬಳಕೆದಾರರು ಎದುರಿಸುವ ತೊಂದರೆಗಳ ಬಗ್ಗೆ ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಸುರಕ್ಷಿತ ಅಂತರ್ಜಾಲ ದಿನದ ಪ್ರಯುಕ್ತ ಶಾಲಾ ಕಾಲೇಜುಗಳಲ್ಲಿ ಸೆಮಿನಾರ್, ಜಾಗೃತಿ ಅಭಿಯಾನಗಳು ಹಾಗೂ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಪ್ರೇಮಿಗಳ ದಿನಕ್ಕೂ ಪ್ರಾಮಿಸ್ ಡೇಗೂ ಏನು ಸಂಬಂಧ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಸುರಕ್ಷಿತ ಆನ್ಲೈನ್ ವ್ಯವಹಾರಕ್ಕಾಗಿ ಇಲ್ಲಿದೆ ಟಿಪ್ಸ್
* ನಿಮ್ಮ ಮನೆಯ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಗಳನ್ನೇ ಬಳಸಿ. ಆಗಾಗ ಸರ್ವಿಸ್ ಮಾಡಿಸುವ ಮೂಲಕ ಸದಾ ಅಪ್ಡೇಟ್ ಆಗಿರಿಸಿಕೊಳ್ಳಿ.
* ಯಾವುದೇ ಕಾರಣkkuಸೈಬರ್ ಕೆಫೆಯಲ್ಲಿ ಆನ್ಲೈನ್ ವ್ಯವಹಾರ ಹಾಗೂ ವಹಿವಾಟನ್ನು ನಡೆಸಲೇಬೇಡಿ.
* ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಬಹುದೇನ್ನುವ ಕಾರಣಕ್ಕೆ ನಿಮ್ಮ ಪಾಸ್ ವರ್ಡ್ ಗಳಲ್ಲಿ ಹುಟ್ಟಿದ ದಿನಾಂಕ, ಆತ್ಮೀಯ ವ್ಯಕ್ತಿಗಳ ಹೆಸರು, ಮೊಬೈಲ್ ಸಂಖ್ಯೆಗಳನ್ನು ಬಳಸಬೇಡಿ. ಈ ಪಾಸ್ ವರ್ಡ್ ಗಳು ಸುಲಭವಾಗಿ ಹ್ಯಾಕರ್ಸ್ ಗಳ ಕೈ ಸೇರಬಹುದು.
* ಪಾನ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್ ಹಾಗೂ ಬ್ಯಾಂಕ್ ಮಾಹಿತಿಗಳನ್ನು ಕೇಳುವ ಇ – ಮೇಲ್ ಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬೇಡಿ.
* ನಿಮ್ಮ ಮೇಲ್ ಅಥವಾ ವಾಟ್ಸಪ್ಪ್ ಗೆ ಬರುವ ಯಾವುದೇ ಅನಗತ್ಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.
* ನಿಮ್ಮ ಪಾಸ್ ವರ್ಡ್ ಗಳನ್ನು ಎಷ್ಟೇ ಆತ್ಮೀಯರಿದ್ದರೂ ಸರಿಯೇ, ಅಪ್ಪಿ ತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳದಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




