Promise Day 2025 : ಪ್ರೇಮಿಗಳ ದಿನಕ್ಕೂ ಪ್ರಾಮಿಸ್ ಡೇಗೂ ಏನು ಸಂಬಂಧ? ಇಲ್ಲಿದೆ ಕುತೂಹಲಕಾರಿ ಮಾಹಿತಿ
Valentine's Week 2025 : ಪ್ರೇಮಿಗಳ ವಾರ ಶುರುವಾಗಿದ್ದು, ಒಂದೊಂದು ದಿನವು ಒಂದೊಂದು ವಿಶೇಷತೆಯನ್ನು ಹೊಂದಿದೆ. ಪ್ರೇಮಿಗಳ ವಾರದಲ್ಲಿ ಐದನೇ ದಿನ ಪ್ರಾಮಿಸ್ ಡೇ ಆಚರಿಸಲಾಗುತ್ತದೆ. ಸಂಗಾತಿ ಅಥವಾ ಪ್ರೇಮಿಗಳಿಬ್ಬರೂ ಜೀವನ ಪರ್ಯಂತ ಜೊತೆಗೆ ಇರುತ್ತೇವೆ ಎಂದು ಮಾತು ಕೊಡುತ್ತಾರೆ. ಸಂಗಾತಿಗೆ ಭರವಸೆ ನೀಡುವ ಈ ಪ್ರಾಮಿಸ್ ಡೇ ಇತಿಹಾಸ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದ್ರೆ ಈ ದಿನದ ಇತಿಹಾಸವೇನು? ಮಹತ್ವವೇನು? ಎಂಬ ಮಾಹಿತಿ ಇಲ್ಲಿದೆ.

ಫೆಬ್ರವರಿ ತಿಂಗಳು ಪ್ರೇಮಿಗಳ ತಿಂಗಳು. ಫೆಬ್ರವರಿ ಆರಂಭವಾಗುತ್ತಿದ್ದಂತೆ ಪ್ರೀತಿಸುತ್ತಿರುವವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ ವಿಶೇಷವಾಗಿರುತ್ತದೆ. ಅದರಲ್ಲಿ ಈ ಪ್ರೇಮಿಗಳ ದಿನ ಬರುವ ಮುಂಚಿತವಾಗಿ ಆಚರಿಸಲಾಗುವ ಆಚರಣೆಗಳು ಅರ್ಥಪೂರ್ಣವಾಗಿರುತ್ತದೆ. ಈಗಾಗಲೇ ‘ವ್ಯಾಲೆಂಟೈನ್ಸ್ ವೀಕ್’ ಆರಂಭವಾಗಿದೆ. ಈ ಪ್ರೇಮಿಗಳ ವಾರದ ಐದನೇಯ ದಿನವೇ ಪ್ರಾಮಿಸ್ ಡೇ. ಎಲ್ಲ ಮನಸ್ಸುಗಳಿಗೂ ಭರವಸೆ ತುಂಬುವ ದಿನ ದಿನ. ಸದಾ ಕಾಲ ಇರುತ್ತೇನೆ ಎಂಬ ಭರವಸೆಯೊಂದಿಗೆ ಪ್ರೀತಿ ಮತ್ತು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ.
ಪ್ರಾಮಿಸ್ ಡೇ ಇತಿಹಾಸ
ಪ್ರೇಮಿಗಳ ವಾರದಲ್ಲಿ ಐದನೇ ದಿನ (ಫೆಬ್ರವರಿ 11)ವನ್ನು ಪ್ರಾಮಿಸ್ ಡೇಯನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ದಿನದ ಆಚರಣೆಯು ಯಾವಾಗ ಆರಂಭವಾಯಿತು ಎನ್ನುವ ಬಗ್ಗೆ ಯಾವುದೇ ನಿಖರವಾದ ಮಾಹಿತಿಯಿಲ್ಲ. ಆದರೆ ಪ್ರೇಮಿಗಳಿಗೆ ಪಾಲಿಗೆ ಈ ದಿನ ಅತ್ಯಂತ ಮಹತ್ವ ಪೂರ್ಣವಾಗಿದೆ. ಈ ವಿಶೇಷ ದಿನವನ್ನು ಮಾತು ಕೊಡುವ ಮುನ್ನ ಪರಸ್ಪರರು ಗಿಫ್ಟ್ ವಿನಿಮಯ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ನಿಮ್ಮ ಮನದರಸಿಗೆ ಪ್ರಾಮಿಸ್ ಮಾಡುವಾಗ ತಪ್ಪದೇ ಈ ಉಡುಗೊರೆ ನೀಡಿ
ಪ್ರಾಮಿಸ್ ಡೇ ಮಹತ್ವ ಹಾಗೂ ಆಚರಣೆ
ಪ್ರೇಮಿಗಳ ವಾರದಲ್ಲಿ ಪ್ರಾಮಿಸ್ ಡೇ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. . ಹೌದು, ಈ ದಿನ ಆಚರಿಸುವುದರ ಹಿಂದೆ ಒಂದು ಆಳವಾದ ಅರ್ಥ ಅಡಗಿದೆ. ಯಾವುದೇ ಸಂಬಂಧದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಂಬಿಕೆ ಮತ್ತು ಬದ್ಧತೆ. ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸಿದಾಗ ಅಥವಾ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಪರಸ್ಪರ ನಂಬಿಕೆ ಮತ್ತು ಸಮರ್ಪಣೆ ಅಗತ್ಯ. ಸಂಬಂಧಗಳು ಗಟ್ಟಿಯಾಗಿ ಉಳಿದುಕೊಳ್ಳಲು ಸಂಗತಿ ನೀಡುವ ಭರವಸೆಯೇ ಕಾರಣವಾಗಿದೆ. ಈ ವಿಶೇಷ ದಿನದಂದು ಸಂಗಾತಿ ಅಥವಾ ಪ್ರೇಮಿಗೆ ನೀಡುವ ಭರವಸೆಗಳು ಬಂಧವನ್ನು ಗಟ್ಟಿಗೊಳಿಸಿ ಪ್ರೀತಿ ಹೆಚ್ಚಾಗಳು ಕಾರಣವಾಗುತ್ತದೆ. ಹೀಗಾಗಿ ಪ್ರೇಮಿಗಳ ವಾರದಲ್ಲಿ ಬರುವ ಪ್ರಾಮಿಸ್ ಡೇ ಆಚರಣೆ ಮಹತ್ವದ್ದಾಗಿದೆ. ಹೀಗಾಗಿ ಫೆಬ್ರವರಿ 11 ರ ಪ್ರಾಮಿಸ್ ಡೇಯಂದು ಸಂಗಾತಿ ಹಾಗೂ ಪ್ರೇಮಿಗಳು ಸದಾ ಜೊತೆಗೆ ಇರುವೆ ಎಂದು ಮಾತು ಕೊಡುವ ಮೂಲಕ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ