ಸಾಂದರ್ಭಿಕ ಚಿತ್ರ
ನಮ್ಮ ದೈನಂದಿನ ಜೀವನದಲ್ಲಿ ಅನೇಕ ಜನರನ್ನು ಭೇಟಿಯಾಗುತ್ತೇವೆ. ಈ ಜನರಲ್ಲಿ ಕೆಲವರು ಇಷ್ಟವಾದರೆ, ಇನ್ನು ಕೆಲವರ ನಡವಳಿಕೆ ಹಾಗೂ ವರ್ತನೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಇದು ಅವರವರ ವ್ಯಕ್ತಿತ್ವ (Personality) ವನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯ ಸ್ವಭಾವ, ವರ್ತನೆ ಹೊರತಾಗಿ ದೇಹದ ಅಂಗಗಳು ಕೂಡ ವ್ಯಕ್ತಿತ್ವ ಬಹಿರಂಗ ಪಡಿಸುತ್ತದೆ. ವ್ಯಕ್ತಿಗಳ ಕೈ ಬೆರಳುಗಳ ಆಕಾರ ನಿಗೂಢ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತೆ. ಉಂಗುರ ಬೆರಳಿನ ಉದ್ದದ ಆಧಾರದ ಮೇಲೆ ವ್ಯಕ್ತಿಯ ಗುಣಸ್ವಭಾವ ಹೇಗೆ ಎನ್ನುವುದನ್ನು ತಿಳಿಯಬಹುದು. ಹಾಗಾದ್ರೆ ನೀವು ಉಂಗುರ ತೊಡುವ ಬೆರಳು ತೋರುಬೆರಳಿಗಿಂತ ಚಿಕ್ಕದಾಗಿದ್ದರೆ ನಿಮ್ಮ ಗುಣಸ್ವಭಾವ ಹೇಗೆಂದು ತಿಳಿದುಕೊಳ್ಳಿ.
- ಉಂಗುರ ಬೆರಳು ತೋರು ಬೆರಳಿಗಿಂತ ಉದ್ದವಾಗಿದ್ದರೆ : ಕೆಲವರ ಉಂಗುರ ಬೆರಳು ತೋರು ಬೆರಳಿಗಿಂತ ಉದ್ದವಾಗಿರುತ್ತದೆ. ಈ ರೀತಿಯಿದ್ದವರು ಪ್ರೀತಿ ಹಾಗೂ ಸದಾ ಉತ್ಸಾಹದಿಂದ ತುಂಬಿರುತ್ತಾರೆ. ಅತಿಯಾದ ಆತ್ಮವಿಶ್ವಾಸವು ಇವರಲ್ಲಿ ಕಾಣಬಹುದು. ಈ ಗುಣವೇ ಎಲ್ಲರನ್ನು ಸೆಳೆಯುವಂತೆ ಮಾಡುತ್ತದೆ. ಈ ಜನರು ಸಾಹಸಮಯ ಪ್ರವೃತ್ತಿಯವರು, ಒತ್ತಡದ ಸಂದರ್ಭದಲ್ಲಿಯೂ ಶಾಂತ ರೀತಿಯಲ್ಲಿ ವರ್ತಿಸುತ್ತಾರೆ. ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ನಾಯಕತ್ವ ಗುಣ ಇವರಲ್ಲಿರುತ್ತದೆ. ಸಂತೋಷದ ಜೀವನವನ್ನು ನಡೆಸುವುದರೊಂದಿಗೆ ಕುಟುಂಬ ಮತ್ತು ಸಂಗಾತಿಯನ್ನು ಸಂತೋಷವಾಗಿಡುತ್ತಾರೆ. ತನ್ನ ಸಂಗಾತಿಯನ್ನು ಮೆಚ್ಚಿಸಲು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಆದರೆ ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವು ಹಠಾತ್ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ.
- ತೋರು ಬೆರಳಿಗಿಂತ ಉಂಗುರ ಬೆರಳು ಚಿಕ್ಕದಾಗಿದ್ದರೆ : ಕೆಲವರ ಉಂಗುರ ಬೆರಳು ತುಂಬಾನೇ ಚಿಕ್ಕದಾಗಿರುತ್ತದೆ. ಅಂತಹ ಜನರು ಸ್ವಭಾವತಃ ಒಳ್ಳೆಯವರಾಗಿದ್ದು, ವಿಶ್ವಾಸಾರ್ಹರು. ಆದರೆ ಹೆಚ್ಚಾಗಿ ಕೆಟ್ಟ ಸಹವಾಸಕ್ಕೆ ಬೀಳುತ್ತಾರೆ. ಹೆಚ್ಚು ಸಂಯಮ ಹೊಂದಿದ್ದು, ಆತ್ಮಾವಲೋಕನ ಮಾಡಿಕೊಳ್ಳುವವರಾಗಿರಬಹುದು. ಎಲ್ಲರೊಂದಿಗೆ ಗೌರವಕ್ಕೆ ಪಾತ್ರರಾಗುತ್ತಾರೆಯಾದರೂ ಕೆಲವೊಮ್ಮೆ ಯೋಚಿಸದೆ ಮಾಡುವ ಕೆಲಸಗಳಿಂದ ಸಂಕಷ್ಟಕ್ಕೆ ಬೀಳುವ ಸಂಭವವೇ ಹೆಚ್ಚು. ಆದರೆ ಈ ವ್ಯಕ್ತಿಗಳಿಂದ ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
- ತೋರುಬೆರಳು ಹಾಗೂ ಉಂಗುರ ಬೆರಳು ಒಂದೇ ನೇರದಲ್ಲಿದ್ದರೆ : ಉಂಗುರ ಬೆರಳು ಮತ್ತು ತೋರು ಬೆರಳು ಒಂದೇ ನೇರಕ್ಕೆ ಇದ್ದರೆ ಇದು ಸಮತೋಲನದ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಹೊಂದಿದ್ದು ಸಾಮರಸ್ಯದ ಜೀವನ ನಡೆಸುತ್ತಾರೆ. ಈ ಗುಣವು ಸಾಮಾಜಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಹೊಂದಿಕೊಳ್ಳುವಂತೆ ಮಾಡುತ್ತದೆ. ಗುಂಪಿನಲ್ಲಿದ್ದಾಗ ಈ ವ್ಯಕ್ತಿಗಳ ಮಾತಿಗೆ ಬೆಲೆ ಹೆಚ್ಚು, ತನ್ನ ಸುತ್ತಲಿನವರಿಗೆ ಆಗಾಗ ಸಲಹೆಗಳನ್ನು ನೀಡುತ್ತಿರುತ್ತಾರೆ. ಜೀವನದಲ್ಲಿ ಕೆಲವು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಕಠಿಣ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಚಂಚಲ ಮನಸ್ಥಿತಿಯಿಂದ ಸರಿಯಾದ ನಿರ್ಣಯಕ್ಕೆ ಬರಲು ಆಗದೇ ಇರಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ