ಸಾಂದರ್ಭಿಕ ಚಿತ್ರ
ಒಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇಡೀ ಜೀವಮಾನವೇ ಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಂದರ್ಭಕ್ಕೆ ಅನುಗುಣವಾಗಿ ತನ್ನ ಗುಣಸ್ವಭಾವವನ್ನು ಬದಲಾಯಿಸುತ್ತಾರೆ. ಆದರೆ ನಿಮ್ಮ ದೇಹದ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಕೈಗಳ ಆಕಾರದಿಂದ ಹಿಡಿದು, ನೀವು ಕುಳಿತುಕೊಳ್ಳುವ ಹಾಗೂ ಮಲಗುವ ಭಂಗಿಯೇ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಪಾದದ ಆಕಾರವು ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ, ನಿಮ್ಮ ಪಾದ ಯಾವ ಆಕಾರದಲ್ಲಿದೆ ಎನ್ನುವ ಆಧಾರದ ಮೇಲೆ ನಿಗೂಢ ಗುಣಸ್ವಭಾವವನ್ನು ಕಂಡುಕೊಳ್ಳಿ.
- ಚಪ್ಪಟ್ಟೆಯಾದ ಕಾಮಾನು ಆಕಾರದ ಪಾದ : ಚಪ್ಪಟೆ ಪಾದಗಳನ್ನು ಹೊಂದಿರುವ ಜನರು ತುಂಬಾ ಮುಕ್ತ ಮನಸ್ಸಿನವರಾಗಿದ್ದು, ಈ ವ್ಯಕ್ತಿಗಳು ಅವರು ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲರ ಜೊತೆಗೆ ಬೆರೆಯುವ ಮೂಲಕ ಏಕಾಂಗಿತನಕ್ಕಿಂತ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಬಹಿರ್ಮುಖ ಗುಣದಿಂದಲೇ ಇವರನ್ನು ಉತ್ತಮ ನಾಯಕರನ್ನಾಗಿ ಮಾಡುತ್ತದೆ. ಅದಲ್ಲದೇ, ಯಾವಾಗಲೂ ನಾಲ್ಕು ಜನರೊಂದಿಗೆ ಮಾತನಾಡಲು ಇಷ್ಟ ಪಡುತ್ತಾರೆ. ಜೊತೆಗೆ ಸ್ನೇಹಿತರ ದೊಡ್ಡ ವಲಯವನ್ನು ಹೊಂದಿರುತ್ತಾರೆ. ಸಹಾನುಭೂತಿ ಹಾಗೂ ಕಾಳಜಿಯುಳ್ಳ ವ್ಯಕ್ತಿಗಳಾಗಿದ್ದು, ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಇತರರ ಮಾತುಗಳಿಗೆ ಕಿವಿಯಾಗುತ್ತಾರೆ. ಈ ಜನರು ರಕ್ತಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ವಿಶ್ಲೇಷಿಸುವ ಬದಲು ಪ್ರತಿ ಸವಾಲನ್ನು ಆನಂದಿಸುತ್ತಾ ಮುನ್ನುಗ್ಗುವ ಪ್ರವೃತ್ತಿ ಇವರದ್ದಾಗಿರುತ್ತದೆ. ಶಾಂತ ಹಾಗೂ ಹೊಂದಿಕೊಳ್ಳುವ ಗುಣದಿಂದ ಎಲ್ಲರಿಗೂ ಹತ್ತಿರವಾಗುತ್ತಾರೆ.
- ಎತ್ತರವಾದ ಕಾಮಾನು ಆಕಾರದ ಪಾದ : ಪಾದವು ಎತ್ತರವಾದ ಕಾಮಾನು ಆಕಾರ ಹೊಂದಿದ್ದರೆ ಈ ಜನರು ಹೆಚ್ಚು ದೂರದೃಷ್ಟಿಯನ್ನು ಹೊಂದಿರುತ್ತಾರೆ. ಅತೀ ಬುದ್ಧಿವಂತಿಕೆ, ಸ್ವತಂತ್ರ ಸ್ವಭಾವ ಹಾಗೂ ಸಾಮಾಜಿಕ ಪ್ರಜ್ಞೆ ಇವರಲ್ಲಿ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಸ್ವತಂತ್ರರಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲವನ್ನೂ ಆಳವಾಗಿ ಯೋಚಿಸುವ ಗುಣ ಈ ಜನರಲ್ಲಿ ಅಧಿಕವಾಗಿರುತ್ತದೆ. ಹೆಚ್ಚು ಒಂಟಿಯಾಗಿರುವುದನ್ನು ಇಷ್ಟಪಡುತ್ತಾರೆ. ಹೊಸ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಆಸಕ್ತಿ ಹೆಚ್ಚಿರುತ್ತದೆ. ದೃಢವಾದ ನಿಶ್ಚಯ ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚತುರರು. ಜೀವನದಲ್ಲಿ ಸವಾಲುಗಳನ್ನು ಪ್ರೀತಿಸುತ್ತಾರೆ ಜೊತೆಗೆ ಏಕಾಂಗಿಯಾಗಿ ಸವಾಲುಗಳನ್ನು ಎದುರಿಸಲು ಇಷ್ಟ ಪಡುತ್ತಾರೆ. ಗುರಿ ಸಾಧಿಸುವಲ್ಲಿ ಶ್ರಮಿಸುವ ವ್ಯಕ್ತಿಗಳಾಗಿದ್ದು ಜೀವನದಲ್ಲಿ ಯಶಸ್ಸು ಕಾಣುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ