AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಕಿರುಬೆರಳು ವ್ಯಕ್ತಿತ್ವ ಹೇಳುತ್ತೆ

ಕೈಯಲ್ಲಿರುವ ಎಲ್ಲಾ ಬೆರಳುಗಳು ಒಂದೇ ತರಹ ಇರಲು ಸಾಧ್ಯವಿಲ್ಲ. ಅದರಲ್ಲಿಯೂ ಈ ಬೆರಳುಗಳಲ್ಲಿಯೇ ನಾಜೂಕಾದ ಸಣ್ಣದಾದ ಬೆರಳೆಂದರೆ ಈ ಕಿರುಬೆರಳು. ಹೆಬ್ಬೆಟ್ಟಿಗಿಂತ ಉದ್ದ ಮತ್ತು ಉಳಿದ ಬೆರಳುಗಳಿಗಿಂತ ಪುಟ್ಟದಾದ ಈ ಬೆರಳಿನಲ್ಲಿಯೇ ಅಡಗಿದೆ ವ್ಯಕ್ತಿತ್ವ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ಕಿರುಬೆರಳಿನ ಉದ್ದವು ವ್ಯಕ್ತಿಯj ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ನಿಮ್ಮ ಕಿರುಬೆರಳು ಎಷ್ಟು ಉದ್ದವಿದೆ ಎನ್ನುವ ಆಧಾರದ ಮೇಲೆ ನಿಮ್ಮ ಗುಣಸ್ವಭಾವ ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test: ನಿಮ್ಮ ಕಿರುಬೆರಳು ವ್ಯಕ್ತಿತ್ವ ಹೇಳುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 14, 2025 | 12:50 PM

Share

ನೀವು ಎಂದಾದರೂ ನಿಮ್ಮ ಕೈಬೆರಳುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ. ಹೌದು,ಕೈಯಲ್ಲಿರುವ ಐದು ಬೆರಳುಗಳ ಉದ್ದವು ಬೇರೆ ಬೇರೆಯಾಗಿರುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಕೈ ಬೆರಳಿನ ಉದ್ದದಲ್ಲಿ ಭಿನ್ನತೆ ಕಾಣಬಹುದು. ಆದರೆ ಕಿರುಬೆರಳು ಉಂಗುರ ಬೆರಳಿಗಿಂತ ಎಷ್ಟು ಉದ್ದವಿದೆ ಎನ್ನುವ ಆಧಾರದ ಮೇಲೆ ವ್ಯಕ್ತಿಯ ಗುಣಸ್ವಭಾವವೇನೆಂದು ಸುಲಭವಾಗಿ ತಿಳಿದುಕೊಳ್ಳಬಹುದು. ಹೀಗಾಗಿ ನಿಮ್ಮ ಕಿರು ಬೆರಳು ಉಂಗುರ ಬೆರಳಿಗೆ ಸಮವಾಗಿದೆಯೇ, ಚಿಕ್ಕದಿದೆಯೇ ಎಂದು ಒಮ್ಮೆ ಗಮನಿಸಿ. ಇದು ನಿಮ್ಮ ನಿಗೂಢ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

  • ಕಿರುಬೆರಳು ನಿಮ್ಮ ಉಂಗುರದ ಬೆರಳಿಗಿಂತ ಉದ್ದವಾಗಿದ್ದರೆ : ಕಿರುಬೆರಳಿನ ಉದ್ದವು ಹೀಗಿದ್ದರೆ ಈ ವ್ಯಕ್ತಿಗಳು ಉದಾರ ಸ್ವಭಾವವುಳ್ಳವರು. ಸಹಾಯ ಎಂದ ಕೂಡಲೇ ತನ್ನ ಬಳಿ ಇರುವ ಎಲ್ಲದ್ದನ್ನು ಕೊಟ್ಟು ಬಿಡುತ್ತಾರೆ. ಅದಲ್ಲದೇ, ಯಾರಿಗಾದರೂ ಏನನ್ನೂ ಕೊಡುವ ಮೊದಲು ತನ್ನ ಬಗ್ಗೆ ಸ್ವಲ್ಪ ಕೂಡ ಯೋಚನೆ ಮಾಡುವುದಿಲ್ಲ. ನಿಸ್ವಾರ್ಥ ಗುಣ ಹೊಂದಿದ್ದು, ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ಬಯಸುತ್ತಾರೆ. ಬುದ್ಧಿವಂತರಾಗಿದ್ದು, ಎಲ್ಲರ ಮಾತನ್ನು ಕೇಳುತ್ತೀರಿ. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ನೂರು ಬಾರಿ ಯೋಚಿಸುತ್ತಾರೆ. ಈ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ತಮ್ಮದೇ ಇರಲು ಇಷ್ಟಪಡುತ್ತಾರೆ. ಈ ಜನರಿಗೆ ಒಳಗೊಂದು ಹೊರಗೊಂದು ಸ್ವಭಾವ ತೋರ್ಪಡಿಸುವ ಜನರೆಂದರೆ ಆಗುವುದಿಲ್ಲ.
  • ಕಿರುಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿದ್ದರೆ : ಉಂಗುರ ಬೆರಳಿಗಿಂತ ಚಿಕ್ಕದಾದ ಕಿರುಬೆರಳನ್ನು ಹೊಂದಿರುವ ಜನರು ಕರುಣಾಮಯಿಗಳಾಗಿದ್ದು, ಯಾರಿಗಾದರೂ ಕಷ್ಟ ಎಂದರೆ ಸಹಾಯ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ತಮ್ಮ ಆದ್ಯತೆ ಹಾಗೂ ಆಸೆಗಳಿಗೆ ಬೆಲೆ ಕೊಡುವುದರ ಬದಲು ಇತರರ ಆಸೆ ಆಕಾಂಕ್ಷೆಗಳಿಗೆ ಈಡೇರಿಸಲು ಮುಂದಾಗುತ್ತಾರೆ. ನಿಸ್ವಾರ್ಥ ಸ್ವಭಾವ ಹೊಂದಿದ್ದು ಸಮಾಜದಲ್ಲಿ ಒಂದೊಳ್ಳೆ ಸ್ಥಾನಮಾನ ಹಾಗೂ ಗೌರವ ಸಂಪಾದಿಸಿಕೊಳ್ಳುತ್ತಾರೆ. ತನ್ನವರು ಎಷ್ಟೇ ಬೇಜಾರು ನೋವು ಮಾಡಿದರೂ ಇವರ ಕಾಳಜಿ ಮಾಡುವ ರೀತಿ ಬದಲಾಗುವುದಿಲ್ಲ. ಎಲ್ಲರನ್ನು ಕ್ಷಮಿಸುತ್ತಾರೆ. ಆದರೆ ಮೋಸ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ಈ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ.
  • ಉಂಗುರದ ಬೆರಳು ಮತ್ತು ಕಿರುಬೆರಳು ಸಮಾನವಾಗಿದ್ದರೆ : ಉಂಗುರದ ಬೆರಳು ಮತ್ತು ಕಿರುಬೆರಳು ಒಂದೇ ನೇರಕ್ಕೆ ಇದ್ದರೆ ಈ ವ್ಯಕ್ತಿಗಳು ಸಮತೋಲಿತ ವ್ಯಕ್ತಿಗಳಾಗಿರುತ್ತಾರೆ. ಎಲ್ಲರೊಂದಿಗೆ ಬೆರೆಯುವ ಹಾಗೂ ತನ್ನವರನ್ನು ಮುನ್ನಡೆಸಿಕೊಂಡು ಹೋಗುವ ಗುಣ ಈ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ. ಶಾಂತ ಸ್ವಭಾವವನ್ನು ಹೊಂದಿದ್ದು, ಜಗಳಗಳಿಂದ ದೂರವಿರಲು ಬಯಸುತ್ತಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಎಲ್ಲದಕ್ಕೂ ಸುಲಭ ಪರಿಹಾರ ಕಂಡುಕೊಳ್ಳುತ್ತಾರೆ. ಶ್ರಮ ಜೀವಿಗಳಾಗಿದ್ದು, ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ