AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day Gift Ideas: ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಸಂಗಾತಿಗೆ ಈ ರೀತಿಯ ಉಡುಗೊರೆ ನೀಡಿ

Valentine’s Week 2025: ವ್ಯಾಲೆಂಟೈನ್ಸ್ ದಿನ ನಿಮ್ಮ ಸಂಗಾತಿ ಯಾವ ರೀತಿಯ ವಸ್ತುಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮ್ಮ ಬಳಿ ಇರುವ ಹಣದಲ್ಲಿ ಆ ಉಡುಗೊರೆಯನ್ನು ಕೊಂಡುಕೊಳ್ಳಬಹುದಾ ಎಂದು ಲೆಕ್ಕಾಚಾರ ಹಾಕಿಕೊಳ್ಳಿ. ಸಾಮಾನ್ಯವಾಗಿ ಹುಡುಗಿಯರಿಗೆ ಬಟ್ಟೆ, ಮೇಕಪ್ ಕಿಟ್, ವಿವಿಧ ರೀತಿಯ ಅಲಂಕಾರಿಕ ವಸ್ತುಗಳು ಇಷ್ಟವಾಗುತ್ತದೆ. ಅದೇ ರೀತಿ ಹುಡುಗರಿಗೆ ವಾಚ್, ಬಟ್ಟೆ, ಎಲೆಕ್ಟ್ರಾನಿಕ್ ಸಾಮಗ್ರಿಗಳು ಇಷ್ಟವಾಗುತ್ತದೆ. ಹಾಗಾಗಿ ನಿಮ್ಮ ಸಂಗಾತಿ ಯಾವ ರೀತಿಯ ವಸ್ತುಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇದರ ಹೊರತಾಗಿ ಕೆಲವು ಗಿಫ್ಟ್ ಐಡಿಯಾಗಳು ಇಲ್ಲಿವೆ.

Valentine’s Day Gift Ideas: ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಸಂಗಾತಿಗೆ ಈ ರೀತಿಯ ಉಡುಗೊರೆ ನೀಡಿ
Valentine’s Day Gift ideas
ಪ್ರೀತಿ ಭಟ್​, ಗುಣವಂತೆ
| Edited By: |

Updated on:Feb 14, 2025 | 8:13 AM

Share

ವ್ಯಾಲೆಂಟೈನ್ಸ್ ಡೇ ದಿನ ತಮ್ಮ ಪ್ರೀತಿ ಪಾತ್ರರಿಗೆ ಏನಾದರೂ ಉಡುಗೊರೆ ನೀಡಬೇಕು ಎಂದುಕೊಳ್ಳುವುದು ಸಹಜ. ಆದರೆ ಯಾವ ರೀತಿಯ ಗಿಫ್ಟ್ ನೀಡಬೇಕು ಎಂಬುದು ಸಹಜವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿ ಯಾವ ರೀತಿಯ ವಸ್ತುಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಬಳಿ ಇರುವ ಹಣದಲ್ಲಿ ಆ ಉಡುಗೊರೆಯನ್ನು ಕೊಂಡುಕೊಳ್ಳಬಹುದಾ ಎಂದು ಲೆಕ್ಕಾಚಾರ ಹಾಕಿಕೊಳ್ಳಿ. ಇದರ ಹೊರತಾಗಿ ನಿಮ್ಮ ಸಂಗಾತಿ ಬಳಿ ಈ ವಸ್ತು ಇರಲೇ ಬೇಕು ಅಥವಾ ಅವರಿಗೆ ಇದರ ಅಗತ್ಯವಿದೆ ಎನಿಸಿದರೆ ಅಂತಹ ಗಿಫ್ಟ್ ಗಳನ್ನು ನೀಡಿ. ಇಂತಹದ್ದೇ ಉಡುಗೊರೆ ನೀಡಬೇಕು ಎಂಬುದು ಎಲ್ಲಿಯೂ ಇಲ್ಲ. ಸಾಮಾನ್ಯವಾಗಿ ಹುಡುಗಿಯರಿಗೆ ಬಟ್ಟೆ, ಮೇಕಪ್ ಕಿಟ್, ವಿವಿಧ ರೀತಿಯ ಅಲಂಕಾರಿಕ ವಸ್ತುಗಳು ಇಷ್ಟವಾಗುತ್ತದೆ. ಅದೇ ರೀತಿ ಹುಡುಗರಿಗೆ ವಾಚ್, ಬಟ್ಟೆ, ಎಲೆಕ್ಟ್ರಾನಿಕ್ ಸಾಮಗ್ರಿಗಳು ಇಷ್ಟವಾಗುತ್ತದೆ. ಹಾಗಾಗಿ ನಿಮ್ಮ ಸಂಗಾತಿ ಯಾವ ರೀತಿಯ ವಸ್ತುಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇದರ ಹೊರತಾಗಿ ಕೆಲವು ಗಿಫ್ಟ್ ಐಡಿಯಾಗಳು ಇಲ್ಲಿವೆ.

ಫಿಟ್​ನೆಸ್​ ಬ್ಯಾಂಡ್​ಗಳು:

ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನೀವು ಅವರಿಗೆ ಫಿಟ್‌ನೆಸ್ ಟ್ರ್ಯಾಕರ್ ಅನ್ನು ಉಡುಗೊರೆಯಾಗಿ ನೀಡಬಹುದು. ಹಲವಾರು ಕಂಪನಿಗಳ ನಾನಾ ರೀತಿಯ ವಾಚ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪ್ರೇಮಿಗಳ ದಿನದಂದು ಉಡುಗೊರೆಯಾಗಿ ನೀಡಬಹುದು. ಇದು ಇತ್ತೀಚಿನ ಯುವಜನತೆಗೆ ಬಹಳ ಉಪಯೋಗಕ್ಕೆ ಬರುವ ವಸ್ತುವಾಗಿದೆ.

ಬ್ಲೂಟೂತ್​ ಸ್ಪೀಕರ್​​​:

ನಿಮ್ಮ ಸಂಗಾತಿ ಸಂಗೀತ ಕೇಳಲು ಇಷ್ಟಪಡುತ್ತಿದ್ದರೆ, ಸ್ಮಾರ್ಟ್ ಸ್ಪೀಕರ್ ಅನ್ನು ಅವರಿಗೆ ಈ ಬಾರಿಯ ವ್ಯಾಲೆಂಟೈನ್ ದಿನದಂದು ಉಡುಗೊರೆಯಾಗಿ ನೀಡಬಹುದು.

ಸ್ಮಾರ್ಟ್​​​ಫೋನ್​:

ನಿಮ್ಮ ಸಂಗಾತಿಗೆ ಸ್ಮಾರ್ಟ್​​ಫೋನ್​ ನೀಡಬಹುದು. ಇದೊಂದು ಉತ್ತಮ ಉಡುಗೊರೆಯಾಗಿದೆ. ಪ್ರೇಮಿಗಳ ದಿನದಂದು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿವೆ. ಹಾಗಾಗಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ನೀವು ನಿಮ್ಮ ಸಂಗಾತಿಗೆ ಸ್ಮಾರ್ಟ್​​​ಫೋನ್​ ಖರೀದಿಸಿ ಉಡುಗೊರೆಯಾಗಿ ನೀಡಬಹುದು.

ಕೈಯಿಂದ ತಯಾರಿಸಿದ ಉಡುಗೊರೆ:

ನೀವೇ ನಿಮ್ಮ ಕೈಯಿಂದ ತಯಾರಿಸಿದ ಏನನ್ನಾದರೂ ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಬಹುದು. ಕಾರ್ಡ್, ಕಸ್ಟಮೈಸ್ ಪೇಂಟಿಂಗ್ ಅಥವಾ ನಿಮ್ಮ ಆಲೋಚನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಪತ್ರ ಅಥವಾ ಡೈರಿ ರೂಪದಲ್ಲಿ ನೀಡಬಹುದು ಅಥವಾ ಕೈಗಳಿಂದ ಏನನ್ನಾದರೂ ರಚಿಸಿ ಕೊಡಬಹುದು. ಇಂತಹ ಉಡುಗೊರೆಗಳಲ್ಲಿ ಪ್ರೀತಿಯ ಜೊತೆಗೆ ಪ್ರಯತ್ನವೂ ಇರುತ್ತದೆ. ಇಂತಹ ಉಡುಗೊರೆಗಳು ನಿಮ್ಮ ಸಂಗಾತಿಗೆ ಖುಷಿ ನೀಡಬಹುದು.

ಇದನ್ನೂ ಓದಿ: ಈ ರೀತಿ ಗಿಫ್ಟ್ ನೀಡಿ ಸಂಗಾತಿ ಜೊತೆಗೆ ಕಿಸ್ ಡೇ ಆಚರಿಸಿ

ಒಟ್ಟಿಗೆ ಸಮಯ ಕಳೆಯುವುದು:

ಪ್ರತಿಯೊಬ್ಬ ಪ್ರೇಮಿಗೂ ಅವರ ಸಂಗಾತಿಯ ಜೊತೆಗೆ ಸಮಯ ಕಳೆಯಬೇಕು ಎಂಬ ಆಸೆ ಇದ್ದೆ ಇರುತ್ತದೆ. ಹಾಗಾಗಿ ಪ್ರೇಮಿಗಳ ದಿನದಂದು, ಇಡೀ ದಿನವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಿರಿ. ಯಾವುದಾದರೂ ಸುಂದರವಾದ ಸ್ಥಳಕ್ಕೆ ಭೇಟಿ ನೀಡಬಹುದು ಅಥವಾ ಸಂಗೀತ ಕಚೇರಿ ಅಥವಾ ಚಲನಚಿತ್ರಗಳನ್ನು ಒಟ್ಟಿಗೆ ಕುಳಿತು ಆನಂದಿಸಬಹುದು. ನೀವು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದಲ್ಲಿ ನಿಮ್ಮ ಸಂಗಾತಿಯನ್ನು ರೊಮ್ಯಾಂಟಿಕ್ ಪಿಕ್ನಿಕ್ ಗೆ ಕರೆದುಕೊಂಡು ಹೋಗಬಹುದು. ಅಲ್ಲಿ ಒಟ್ಟಿಗೆ ಸಮಯ ಕಳೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 am, Fri, 14 February 25

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ