White Tea: ಬಿಳಿ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ಮಾಹಿತಿ

White Tea:ಚಳಿಗಾಲ, ಮಳೆಗಾಲ, ಬೇಸಿಗೆಕಾಲವೆನ್ನದೇ ಎಲ್ಲಾ ಕಾಲದಲ್ಲಿಯೂ ಚಹಾ ಕುಡಿಯಬೇಕೆನಿಸುತ್ತದೆ. ಏನೋ ಒಂದು ಕೆಲಸ ಮಾಡುತ್ತಿದ್ದಾಗ ನಿದ್ರೆ ಬಂದರೂ, ಪುಸ್ತಕ ಓದುತ್ತಿರುವಾಗಲೂ, ಟಿವಿ ನೋಡುತ್ತಿರುವಾಗಲೂ, ಸುಸ್ತು ಅನ್ನಿಸಿದರೂ, ಸ್ವಲ್ಪ ತಲೆ ನೋವಿದ್ದರೂ ಮತ್ತು ದಿನದ ಕೆಲಸ ಮುಗಿಸಿ ಮನೆಗೆ ಸಂಜೆ ಬಂದಾಗಲೂ ಹೀಗೆ ನಮಗೆ ಚಹಾ ಬೇಕೇ ಬೇಕು.

White Tea: ಬಿಳಿ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ಮಾಹಿತಿ
White Tea
Follow us
TV9 Web
| Updated By: ನಯನಾ ರಾಜೀವ್

Updated on: Jul 21, 2022 | 8:30 AM

ಚಳಿಗಾಲ, ಮಳೆಗಾಲ, ಬೇಸಿಗೆಕಾಲವೆನ್ನದೇ ಎಲ್ಲಾ ಕಾಲದಲ್ಲಿಯೂ ಚಹಾ ಕುಡಿಯಬೇಕೆನಿಸುತ್ತದೆ. ಏನೋ ಒಂದು ಕೆಲಸ ಮಾಡುತ್ತಿದ್ದಾಗ ನಿದ್ರೆ ಬಂದರೂ, ಪುಸ್ತಕ ಓದುತ್ತಿರುವಾಗಲೂ, ಟಿವಿ ನೋಡುತ್ತಿರುವಾಗಲೂ, ಸುಸ್ತು ಅನ್ನಿಸಿದರೂ, ಸ್ವಲ್ಪ ತಲೆ ನೋವಿದ್ದರೂ ಮತ್ತು ದಿನದ ಕೆಲಸ ಮುಗಿಸಿ ಮನೆಗೆ ಸಂಜೆ ಬಂದಾಗಲೂ ಹೀಗೆ ನಮಗೆ ಚಹಾ ಬೇಕೇ ಬೇಕು.

ಭಾರತದಲ್ಲಿ ಚಹಾವು ಕೇವಲ ಪಾನೀಯವಲ್ಲ ಆದರೆ ನಮ್ಮ ಆತ್ಮದ ಒಂದು ಭಾಗವಾಗಿದೆ. ಬಿಳಿ ಚಹಾವನ್ನು ಕ್ಯಾಮೆಲಿಯಾ ಗಿಡದ ಎಲೆಗಳಿಂದ ಬಿಳಿ ತಯಾರಿಸಲಾಗುತ್ತದೆ. ಬಿಳಿ ಎಲೆಗಳು ಮತ್ತು ಅದರ ಸುತ್ತಲಿನ ಬಿಳಿ ನಾರುಗಳಿಂದ ಈ ಚಹಾ ಮಾಡುವುದರಿಂದ ಇದು ತಿಳಿ ಕಂದು ಅಥವಾ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಇದನ್ನು ವೈಟ್ ಟೀ ಅಥವಾ ಬಿಳಿ ಚಹಾ ಎಂದು ಕರೆಯುತ್ತಾರೆ.

ಫ್ಲೇವನಾಯ್ಡ್​ಗಳು, ಟ್ಯಾನಿನ್ಸ್​, ಫ್ಲೋರೈಡ್ಗಳು ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತವೆ. ಬಿಳಿ ಚಹಾವು ಹಸಿರು ಚಹಾಕ್ಕಿಂತ ಕಡಿಮೆ ಕೆಫೀನ್ ಅನ್ನು ಹೊಂದಿರುವುದು ಇದರ ವಿಶೇಷತೆ ಬಗ್ಗೆ ತಿಳಿಯೋಣ.

ಇಮ್ಯುನಿಟಿ ಬೂಸ್ಟರ್ : ಬಿಳಿ ಚಹಾವು ಇಮ್ಯುನಿಟಿ ಬೂಸ್ಟರ್​ನಂತೆ ಕೆಲಸ ಮಾಡುತ್ತದೆ. ಅದನ್ನು ರೋಗ ನಿರೋಧಕ ವರ್ಧಕ ಎಂದು ಪರಿಗಣಿಸಲಾಗಿದೆ. ಶೀತ, ಶ್ಔಆಸಕೋಶದ ಸೋಂಕು ಇನ್ನಿತರೆ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಉತ್ಕರ್ಷಣ ನಿರೋಧಕಗಳು: ಉತ್ಕರ್ಷಣ ನಿರೋಧಕಗಳು ಆಕ್ಸಿಡೀಕರಣದಿಂದ ದೇಹಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಉತ್ತಮ ಜ್ಞಾಪಕ ವರ್ಧಕಗಳು ಎಂದು ಕರೆಯಲಾಗುತ್ತದೆ. ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಜೀರ್ಣಕ್ರಿಯೆ: ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಮ್ಮ ದೇಹವು ನಮ್ಮ ಹೊಟ್ಟೆಗೆ ಹಾನಿಯನ್ನುಂಟುಮಾಡುವ ಅನಗತ್ಯ ಬ್ಯಾಕ್ಟೀರಿಯಾದ ಜತೆ ಹೋರಾಡಲು ಸಹಾಯ ಮಾಡುತ್ತದೆ.

ತೂಕ ನಷ್ಟ: ನೀವು ತೂಕವನ್ನು ಕಡಿಮೆಮಾಡಿಕೊಳ್ಳಲು ಬಯಸಿದರೆ ಸಿಹಿ ತಿನಿಸುಗಳನ್ನು ಬಿಟ್ಟು, ಬಿಳಿ ಚಹಾವನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಅತ್ಯಂತ ಕಡಿಮೆ ಕ್ಯಾಲೋರಿ ಪಾನೀಯ ಮಾತ್ರವಲ್ಲ, ತೂಕ ಇಳಿಕೆಗೂ ಸಹಾಯ ಮಾಡುತ್ತದೆ.

ಈ ಲೇಖನವು ಟಿವಿ 9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.