ಬೆಳಿಗ್ಗೆ ನಿದ್ರಾ ಭಾವನೆ ಹೊಂದಿರುತ್ತೀರಾ? ದೇಹವು ಸಾಕಷ್ಟು ಶಕ್ತಿಯನ್ನು ಹೊಂದಲು ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
ಬೆಳಗ್ಗಿನ ಸಮಯದಲ್ಲಿ ನಿದ್ರೆಯ ಭಾವನೆ ಹೊಂದಿದ್ದರೆ ಕಾಫಿಗೂ ಮುನ್ನ ನೀರನ್ನು ಕುಡಿಯಬೇಕು, ಸ್ವಲ್ಪ ಹೊತ್ತು ಬೆಳಗ್ಗಿನ ಬಿಸಿಲಿನಲ್ಲಿ ನಿಲ್ಲಬೇಕು. ದೇಹವು ಹೆಚ್ಚು ಆಕ್ಟಿವ್ ಆಗಿರಲು ಪೌಷ್ಟಿಕತಜ್ಞೆ ಮಿನಾಚಿ ಪೆಟ್ಟುಕೋಲಾ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಅವುಗಳು ಹೀಗಿವೆ.

ಸಾಂಕೇತಿಕ ಚಿತ್ರ
ಬೆಳಗ್ಗಿನ ಸಮಯದಲ್ಲಿ ನಿದ್ರೆಯ ಭಾವನೆ ಹೊಂದಿರುತ್ತಾರೆ. ಈ ನಿದ್ರಾ ಜಡತ್ವವು ದೇಹಕ್ಕೆ ಶಕ್ತಿ ಇಲ್ಲದಂತೆ ಮಾಡುತ್ತದೆ. ಇದರಿಂದ ನಿಮ್ಮ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಹಗಲಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿರಲು ನೀವು ಬೆಳಗ್ಗೆ ಮೊದಲು ಆರಂಭಿಸುವ ದಿನಚರಿ ಸಹಾಯಕವಾಗಿದೆ. ಯಾವ ರಿತಿಯ ದಿನಚರಿ ಎಂದು ನೀವು ಕೇಳುತ್ತಿದ್ದೀರಾ? ದಿನಚರಿ ಹೇಗಿರಬೇಕು ಎಂದು ಪ್ರಶ್ನಿಸುತ್ತಿದ್ದೀರಾ ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಪೌಷ್ಟಿಕತಜ್ಞೆ ಮಿನಾಚಿ ಪೆಟ್ಟುಕೋಲಾ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.
- ಬೆಳಿಗ್ಗೆ ನೀರನ್ನು ಕುಡಿಯುವುದರಿಂದ ನಿಮ್ಮ ಬಾಯಾರಿಕೆಯನ್ನು ಮೊದಲು ನೀಗಿಸುತ್ತದೆ. ಅಷ್ಟೇ ಅಲ್ಲ ನೀರು ಕುಡಿಯುವುದರಿಂದ ದುಗ್ಧರಸ ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ. ಸ್ಥಿರವಾದ ದುಗ್ಧರಸ ವ್ಯವಸ್ಥೆಯು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯಕವಾಗಿದೆ. ನೀವು ಕಾಫಿ ಸೇವನೆಗೂ ಮುನ್ನ ನೀರು ಕುಡಿಯಿರಿ. ಅಂದರೆ ಖಾಲಿ ಹೊಟ್ಟೆಗೆ ಬಿಸಿ ನೀರನ್ನು ಕುಡಿಯಿರಿ.
- ನಿಮ್ಮ ಸಿರ್ಕಾಡಿಯನ್ ರಿದಮ್ ಸೂರ್ಯನೊಂದಿಗೆ ಸಂಪರ್ಕ ಹೊಂದಿದ್ದು, ನೈಸರ್ಗಿಕ ಸೂರ್ಯನ ಬೆಳಕಿಗೆ ನಿಮ್ಮನ್ನು ಒಡ್ಡಿಕೊಂಡಾಗ ನಿದ್ರೆಯಿಂದ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ದಿನವಿಡೀ ಶಕ್ತಿಯುತವಾಗಿರುವಂತೆ ಸಹಾಯ ಮಾಡುತ್ತದೆ.
- ದೈಹಿಕ ಚಟುವಟಿಕೆಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ನಿಮ್ಮ ಎಂಡಾರ್ಫಿನ್‌ಗಳನ್ನು ಹೆಚ್ಚಿಸಬಹುದು. ಅದು ತಕ್ಷಣವೇ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಮನೆಯ ಟೆರೇಸ್‌ನಲ್ಲಿ ಕನಿಷ್ಠ 15 ನಿಮಿಷಗಳ ವೇಗದ ನಡಿಗೆ ಅಥವಾ ಸ್ಕಿಪ್ಪಿಂಗ್ ಮಾಡಬಹುದು.
- ಕೆಲವು ಉಸಿರಾಟದ ವ್ಯಾಯಾಮಗಳನ್ನು ಕಲಿಯಿರಿ ಅಥವಾ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವ ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಗಮನವನ್ನು ಸುಧಾರಿಸಬಹುದು. ಧ್ಯಾನ, ವ್ಯಾಯಾಮಗಳನ್ನು ಹಾಸಿಗೆಯಲ್ಲೇ ಮಾಡಬಹುದು ಅಥವಾ ನೆಲದ ಮೇಲೂ ಮಾಡಬಹುದು.
- ಹೆಚ್ಚಿನ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಬೆಳಗಿನ ಉಪಾಹಾರವನ್ನು ಸೇವಿಸಿದರೆ ದೀರ್ಘಕಾಲೀನ ಶಕ್ತಿಯನ್ನು ನೀಡುತ್ತದೆ.