Pillow Cleaning: ಕೊಳೆಯಾದ ದಿಂಬನ್ನು ತೊಳೆಯದೇ ಚಿಟಿಕೆಯಲ್ಲಿ ಸ್ವಚ್ಛಗೊಳಿಸುವುದು ಹೇಗೆ?

| Updated By: ನಯನಾ ರಾಜೀವ್

Updated on: Oct 21, 2022 | 2:20 PM

ಹಾಸಿಗೆ ಮೇಲಿರುವ ದಿಂಬುಗಳನ್ನು ಹಾಸಿಗೆಯ ವಸ್ತ್ರಗಳನ್ನು ತೊಳೆದಷ್ಟು ಬಾರಿ ತೊಳೆಯುವುದಿಲ್ಲ. ನಿರಂತರ ಬಳಕೆಯಿಂದಾಗಿ ದಿಂಬುಗಳು ಕೊಳಕಾಗಿರುತ್ತದೆ.

Pillow Cleaning: ಕೊಳೆಯಾದ ದಿಂಬನ್ನು ತೊಳೆಯದೇ ಚಿಟಿಕೆಯಲ್ಲಿ ಸ್ವಚ್ಛಗೊಳಿಸುವುದು ಹೇಗೆ?
Pillow Cleaning
Follow us on

ಹಾಸಿಗೆ ಮೇಲಿರುವ ದಿಂಬುಗಳನ್ನು ಹಾಸಿಗೆಯ ವಸ್ತ್ರಗಳನ್ನು ತೊಳೆದಷ್ಟು ಬಾರಿ ತೊಳೆಯುವುದಿಲ್ಲ. ನಿರಂತರ ಬಳಕೆಯಿಂದಾಗಿ ದಿಂಬುಗಳು ಕೊಳಕಾಗಿರುತ್ತದೆ. ನಿಮ್ಮ ಮನೆಯಲ್ಲಿ ಇಟ್ಟಿರುವ ದಿಂಬುಗಳು ಕೊಳೆಯಾಗಿ ದುರ್ವಾಸನೆ ಬೀರುತ್ತಿದ್ದರೆ ಇಂದು ನಾವು ನಿಮಗೆ ಕೆಲವು ಸುಲಭ ಸಲಹೆಗಳನ್ನು ಹೇಳುತ್ತಿದ್ದೇವೆ, ಇದನ್ನು ಅನುಸರಿಸಿ ನೀವು ಸುಲಭವಾಗಿ ದಿಂಬುಗಳನ್ನು ಸ್ವಚ್ಛಗೊಳಿಸಬಹುದು.

ವ್ಯಾಕ್ಯೂಮ್ ಕ್ಲೀನರ್​ನೊಂದಿಗೆ ದಿಂಬುಗಳನ್ನು ಸ್ವಚ್ಛಗೊಳಿಸಿ

ಮನೆಯಲ್ಲಿ ಇಟ್ಟಿರುವ ದಿಂಬನ್ನು ತೊಳೆಯದೇ ಸ್ವಚ್ಛಗೊಳಿಸಲು ವ್ಯಾಕ್ಯೂಮ್ ಕ್ಲೀನರ್ ಬಳಸಬಹುದು. ಇದರಿಂದ ದಿಂಬುಗಳ ಮೇಲಿರುವ ಕೊಳೆ ಸುಲಭವಾಗಿ ಹೊರಬರುತ್ತದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದಕ್ಕಾಗಿ, ದಿಂಬಿನ ಕವರ್ ತೆಗೆದುಹಾಕಿ ಮತ್ತು ನಂತರ ಅದನ್ನು ವ್ಯಾಕ್ಯೂಮ್ ಕ್ಲೀನರ್ನಿಂದ ಸ್ವಚ್ಛಗೊಳಿಸಿ.

ನಿಮ್ಮ ಬಳಿ ವ್ಯಾಕ್ಯೂಮ್ ಕ್ಲೀನರ್ ಇಲ್ಲದಿದ್ದರೆ, ಈ ರೀತಿ ಸ್ವಚ್ಛಗೊಳಿಸಿ

ನೀವು ವ್ಯಾಕ್ಯೂಮ್ ಕ್ಲೀನರ್ ಹೊಂದಿಲ್ಲದಿದ್ದರೆ, ನೀವು ದಿಂಬನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ, ಕೊಳಕು ಅಥವಾ ಕಲೆಗಳಿರುವ ದಿಂಬಿನ ಮೇಲೆ ಒಂದು ಚಮಚ ಅಡಿಗೆ ಸೋಡಾವನ್ನು ಹಾಕಿ. ನಂತರ ಅದನ್ನು ಬ್ರಷ್‌ನಿಂದ ಉಜ್ಜುವ ಮೂಲಕ ಸ್ವಚ್ಛಗೊಳಿಸಿ ಮತ್ತು ಸುಮಾರು 10-15 ನಿಮಿಷಗಳ ಕಾಲ ಬಿಡಿ. ಅದರ ನಂತರ ಅಡಿಗೆ ಸೋಡಾವನ್ನು ತೆಗೆದುಹಾಕಿ. ಹೀಗೆ ಮಾಡುವುದರಿಂದ ದಿಂಬಿನ ಕೊಳೆ ಹೋಗುವುದಲ್ಲದೆ ವಾಸನೆಯೂ ಬರುವುದಿಲ್ಲ.

ಟೂಥ್​ಪೇಸ್ಟ್​ನೊಂದಿಗೆ ಸ್ವಚ್ಛಗೊಳಿಸಬಹುದು
ದಿಂಬುಗಳನ್ನು ಸ್ವಚ್ಛಗೊಳಿಸಲು ಟೂಥ್​ಪೇಸ್ಟ್​ ಅನ್ನು ಸಹ ಬಳಸಬಹುದು. ಇದಕ್ಕಾಗಿ ಬ್ರಶ್ ಮೇಲೆ ಟೂತ್ ಪೇಸ್ಟ್ ಹಚ್ಚಿ ಮತ್ತು ದಿಂಬಿನ ಮೇಲೆ ಕೊಳೆ ಇರುವ ಕಡೆ ಹಚ್ಚಿಕೊಳ್ಳಿ. ಇದರ ನಂತರ, ಬ್ರಷ್​ನಿಂದ ಉಜ್ಜುವ ಮೂಲಕ ಕೊಳೆಯನ್ನು ಸ್ವಚ್ಛಗೊಳಿಸಿ ಮತ್ತು ನಂತರ ಅದನ್ನು 10 ನಿಮಿಷಗಳ ಕಾಲ ಬಿಡಿ. ಟೂಥ್​ಪೇಸ್ಟ್​ ಒಣಗಿದಾಗ, ಅದನ್ನು ನಿಮ್ಮ ಕೈಯಿಂದ ಅಳಿಸಿಬಿಡಿ ಮತ್ತು ದಿಂಬು ಸಂಪೂರ್ಣವಾಗಿ ಸ್ವಚ್ಛವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ