Pineapple: ಅನಾನಸ್​ ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದಾ? ತಜ್ಞರು ಹೇಳುವುದು ಏನು?

ಖ್ಯಾತ ಪೌಷ್ಟಿಕತಜ್ಞ ಲವ್ನೀತ್ ಬಾತ್ರಾ ಹೇಳುವುದೆನೆಂದರೇ ಅನಾನಸ್ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಪ್ರತಿದಿನ ಸೇವಿಸುವುದರಿಂದ ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎನ್ನುತ್ತಾರೆ.

Pineapple: ಅನಾನಸ್​ ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದಾ? ತಜ್ಞರು ಹೇಳುವುದು ಏನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2022 | 7:00 AM

ಇಂದಿನ ನಮ್ಮ ಆಧುನಿಕ ಜೀವನಶೈಲಿ (Lifestyle) ಯಿಂದ ಅಧಿಕ ತೂಕ (Weight Loss) ಸಾಮಾನ್ಯ ಸಮಸ್ಯೆಯಾಗಿದೆ. ವಾಸ್ತವವಾಗಿ, ಬೊಜ್ಜಿನ ಸಮಸ್ಯೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಅಧಿಕ ತೂಕದಿಂದ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳಂತಹ ಸಮಸ್ಯೆಗಳು ಉಂಟಾಗುತ್ತವೆ. ತೂಕ ಹೆಚ್ಚುತ್ತಲೇ ಹೋದರೆ ದೇಹ ಬೇಗ ಸುಸ್ತಾಗತೊಡಗುತ್ತದೆ. ಯಾವುದೇ ದೈಹಿಕ ಕಸರತ್ತು ಮಾಡದಿರುವುದು, ಒಂದೇ ಸ್ಥಳದಲ್ಲಿ ಕುಳಿತು ತಿನ್ನುವುದು, ಕುಡಿಯುವುದು ಮತ್ತು ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಬೊಜ್ಜು ಬೇಗನೆ ಬರಬಹುದು. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಕೆಲವು ನಿಯಮಗಳು ಮತ್ತು ವಿಶೇಷ ಡಯಟ್​ನ್ನು ಅನುಸರಿಸಬೇಕು. ವಯಸ್ಸು, ಲಿಂಗ ಮತ್ತು ದೇಹದ ಪ್ರಕಾರದಂತಹ ಅಂಶಗಳಿಗೆ ಅನುಗುಣವಾಗಿ ಆಹಾರದ ನಿಯಮಗಳನ್ನು ಅನುಸರಿಸಬೇಕು.

ಇದನ್ನೂ ಓದಿ: Eye Bleeding: ಕಣ್ಣಿನಲ್ಲಿ ರಕ್ತಸ್ರಾವ: ಕಾರಣ, ವಿಧಗಳು, ಲಕ್ಷಣಗಳು ಮತ್ತು ಚಿಕಿತ್ಸೆಗಳೇನು?

ಆದರೆ ಕೆಲವರು ಇಂಟರ್​ನೆಟ್​​ನಲ್ಲಿ ಸಿಗುವ ಮಾಹಿತಿಯ ಸತ್ಯತೆಯನ್ನು ಅರಿಯದೆ ಹೊಸ ಟ್ರಿಕ್ಸ್ ಪಡೆಯುತ್ತಾರೆ. ಪ್ರತಿನಿತ್ಯ ತಿನ್ನದಿದ್ದರೆ ಅಧಿಕ ಕೊಬ್ಬು ಕರಗಿ ಹೋಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಅಲ್ಲದೆ, ಕೆಲವರು ತಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ತೆಗೆದುಹಾಕಿದರೆ, ಅವರು ತೂಕವನ್ನು ಕಳೆದುಕೊಳ್ಳಬಹುದು ಎಂದು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ಅದೇ ರೀತಿಯಾಗಿ ಅನಾನಸ್ ಕೂಡ. ಪ್ರತಿದಿನ 2 ಕಪ್ ಅನಾನಸ್ ಚೂರುಗಳನ್ನು ತಿಂದರೆ 5 ದಿನಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಬಹುದು ಎಂದು ಅನೇಕರು ನಂಬುತ್ತಾರೆ.

ತಜ್ಞರು ಹೇಳುವುದು ಏನು?

ಖ್ಯಾತ ಪೌಷ್ಟಿಕತಜ್ಞ ಲವ್ನೀತ್ ಬಾತ್ರಾ ಹೇಳುವುದೆನೆಂದರೇ ಅನಾನಸ್ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಪ್ರತಿದಿನ ಸೇವಿಸುವುದರಿಂದ ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎನ್ನುತ್ತಾರೆ. 1970 ರಲ್ಲಿ, ಡ್ಯಾನಿಶ್ ಮನಶ್ಶಾಸ್ತ್ರಜ್ಞ ಸ್ಟಾನ್ ಹೆಗ್ಲರ್ ಅವರು ನಿಮ್ಮ ದೈನಂದಿನ ಆಹಾರದೊಂದಿಗೆ 5 ದಿನಗಳವರೆಗೆ ಅನಾನಸ್​ನ್ನು ಸೇವಿಸಿದರೆ, ನೀವು ಖಂಡಿತವಾಗಿಯೂ 2 ಕೆಜಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಹೇಳಿದರು. ಆದರೆ ಇದರೊಂದಿಗೆ ದೇಹದಲ್ಲಿರುವ ಹಾನಿಕಾರಕ ಟಾಕ್ಸಿನ್​ಗಳೂ ಹೊರಬರುತ್ತವೆ.

ಹೆಚ್ಚು ಅನಾನಸ್​ ತಿನ್ನುವುದರಿಂದ ಏನಾಗುತ್ತದೆ?

ಅನಾನಸ್ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಹೊಟ್ಟೆಯಲ್ಲಿ ಜೀರ್ಣಕಾರಿ ಆಮ್ಲಗಳನ್ನು ಉತ್ಪಾದಿಸುತ್ತದೆ. ಈ ಆಸಿಡ್ ನಿಂದಾಗಿ ಮನಸ್ಸೆಲ್ಲ ಕೆರಳುತ್ತದೆ. ಹಸಿವು, ಆಯಾಸ, ವಾಕರಿಕೆ, ಹೊಟ್ಟೆ ನೋವು, ಅತಿಸಾರ ಸಂಭವಿಸಬಹುದು.

ಅನಾನಸ್​ನ್ನು ಹೆಚ್ಚು ಸೇವಿಸುವುದರಿಂದ ತಲೆತಿರುಗುವಿಕೆ, ತಲೆನೋವು ಮತ್ತು ನಿದ್ರಾಹೀನತೆ ಉಂಟಾಗುತ್ತದೆ. ಅನಾನಸ್​ನಲ್ಲಿ ಪ್ರೋಟೀನ್ ತುಂಬಾ ಕಡಿಮೆ. ಈ ಕಾರಣದಿಂದಾಗಿ ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯ ಅಪಾಯವಿದೆ.

ಅನಾನಸ್​ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಚರ್ಮದ ಸೋಂಕಿನ ಅಪಾಯವೂ ಉಂಟಾಗಬಹುದು. ಈ ಹಣ್ಣಿನಲ್ಲಿರುವ ಬ್ರೊಮೆಲಿನ್ ಚರ್ಮದ ಸಮಸ್ಯೆಗಳು, ದದ್ದುಗಳು ಮತ್ತು ವಾಂತಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.

ಮತ್ತಷ್ಟು ಲೈಫ್​ಸ್ಟೈಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್