ಮನೆಯಲ್ಲಿ ಈ ಒಂದು ಸಸಿ ನೆಟ್ಟರೆ ಹಲ್ಲಿಗಳ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು
ಬೇಸಿಗೆಯ ಶಾಖಕ್ಕೆ ಮನೆಯೊಳಗಡೆ ಹಲ್ಲಿಗಳ ಹಾವಳಿಯೂ ತೀರಾ ಹೆಚ್ಚಿರುತ್ತದೆ. ಈ ಹಲ್ಲಿಗಳು ನಾವು ತಿನ್ನೋ ಆಹಾರಕ್ಕೆ ಬಿದ್ದರೆ, ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಇವುಗಳ ಕಾಟದಿಂದ ಮುಕ್ತಿ ಪಡೆಯಲು ರಾಸಾಯನಿಕಯುಕ್ತ ಉತ್ಪನ್ನಗಳ ಮೊರೆ ಹೋಗ್ತೆವೆ. ಆದ್ರೆ ಅವುಗಳ ಫಲಿತಾಂಶ ಅಷ್ಟೇನು ಪರಿಣಾಮಕಾರಿಯಾಗಿರುವುದಿಲ್ಲ. ಹೀಗಿರುವಾಗ ಈ ಒಂದೇ ಒಂದು ಗಿಡವನ್ನು ಮನೆಯಲ್ಲಿ ನೆಟ್ಟರೆ, ಯಾವುದೇ ಖರ್ಚಿಲ್ಲದೆ ಹಲ್ಲಿಗಳನ್ನು ಓಡಿಸಬಹುದು. ಜೊತೆಗೆ ಸೊಳ್ಳೆ, ಕೀಟಗಳ ಕಾಟದಿಂದಲೂ ಮುಕ್ತಿ ಪಡೆಯಬಹುದು.

ಬೇಸಿಗೆಯ ಸಮಯದಲ್ಲಿ ಮನೆಯ ಹೊರಗಡೆ ಹಾವುಗಳ ಕಾಟ ತೀರಾ ಹೆಚ್ಚಾಗುವಂತೆ, ಮನೆಯೊಳಗಡೆ ಹಲ್ಲಿಗಳ (lizards) ಕಾಟ ಹೆಚ್ಚಾಗುತ್ತದೆ. ಈ ಹಲ್ಲಿಗಳು ಮನುಷ್ಯರಿಗೆ ತೊಂದರೆ ನೀಡುವುದಿಲ್ಲ ನಿಜ, ಆದರೆ ಅವುಗಳು ನಾವು ತಿನ್ನುವ ಆಹಾರಕ್ಕೆ ಬಿದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಮನೆಯಲ್ಲಿ ಹಲ್ಲಿಗಳಿದ್ದರೆ ಹೆಚ್ಚಿನವರು ಭಯ ಪಡುತ್ತಾರೆ. ಮತ್ತು ಅವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವು ಹಲ್ಲಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಿರುವಾಗ ಮನೆಯೊಳಗಡೆ ಕಿಟಕಿ, ಬಾಗಿಲಿನ ಪಕ್ಕ ತುಳಸಿ ಗಿಡವನ್ನು ಇಡುವ ಮೂಲಕ ಬಲು ಸುಲಭವಾಗಿ ಮನೆಯಿಂದ ಓಡಿಸಬಹುದು. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ನೆಡಿ ತುಳಸಿ ಗಿಡ:
ಧಾರ್ಮಿಕ ಮಹತ್ವವನ್ನು ಹೊಂದಿರುವ ತುಳಸಿ ಗಿಡ, ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಹಲ್ಲಿ, ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ. ಹೌದು ತುಳಸಿ ಗಿಡಗಳು ಹಲ್ಲಿಗಳು ಇಷ್ಟಪಡದ ಆಹ್ಲಾದಕರ ವಾಸನೆಯನ್ನು ಹೊರಸೂಸುತ್ತವೆ. ಈ ವಾಸನೆ ಹೊಸ ಸೂಸುವ ಜಾಗದಲ್ಲಿ ಹಲ್ಲಿಗಳು ಇರಲು ಇಷ್ಟಪಡುವುದಿಲ್ಲ, ಅಲ್ಲಿಂದ ಓಡಿ ಹೋಗುತ್ತವೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಹಲ್ಲಿಗಳ ಹಾವಳಿಯೂ ಇರುವುದಿಲ್ಲ, ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ನೆಲೆಸುತ್ತದೆ.
ಇದನ್ನೂ ಓದಿ: ಬೆಳಗ್ಗೆ ಅಥವಾ ಸಂಜೆ; ಬೇಸಿಗೆಯಲ್ಲಿ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕಬೇಕು?
ತುಳಸಿ ಗಿಡಗಳ ಇತರ ಪ್ರಯೋಜನಗಳು:
- ಹಲ್ಲಿಗಳ ಹೊರತಾಗಿ, ಬೇಸಿಗೆಯಲ್ಲಿ ಸೊಳ್ಳೆಗಳು, ನೊಣಗಳು ಮತ್ತು ಕೀಟಗಳ ಕಾಟವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಅಲ್ಲಲ್ಲಿ ಪಾಟ್‌ಗಳಲ್ಲಿ ತುಳಸಿ ಗಿಡಗಳನ್ನು ಇಡುವ ಮೂಲಕ ಕೀಟ ನೊಣಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.
- ನೀವು ನಿಮ್ಮ ಬಾಲ್ಕನಿ, ಕಿಟಕಿ ಅಥವಾ ಬಾಗಿಲಿನ ಬಳಿ ನೀವು ತುಳಸಿ ಗಿಡವನ್ನು ಇಡಬಹುದು. ಇದು ಹಲ್ಲಿಗಳನ್ನು ದೂರವಿಡುವುದಲ್ಲದೆ, ಸೊಳ್ಳೆಗಳು ಮತ್ತು ಕೀಟಗಳ ಕಾಟದಿಂದಲೂ ಪರಿಹಾರವನ್ನು ನೀಡುತ್ತದೆ.
- ನೀವು ಪಾಟ್‌ನಲ್ಲಿ ತುಳಸಿ ಗಿಡವನ್ನು ಇಡಲು ಬಯಸದಿದ್ದರೆ, ನಿಮ್ಮ ಮನೆಯ ಪ್ರತಿ ಮೂಲೆಯಲ್ಲೂ ತುಳಸಿ ಎಲೆಗಳನ್ನು ಇಡಬಹುದು. ಇದಲ್ಲದೆ ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದರ ರಸವನ್ನು ಬಾಟಲಿಯಲ್ಲಿ ತುಂಬಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಿಂಪಡಿಸುವ ಮೂಲಕವೂ ಹಲ್ಲಿ, ಸೊಳ್ಳೆ, ನೊಣಗಳು ಮನೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




