ಚಲನಚಿತ್ರ ವೀಕ್ಷಣೆ ಅಥವಾ ಪಾರ್ಟಿಗಳಲ್ಲಿ ತಿಂಡಿಗಳು ಅಂತ ಬಂದಾಗ ಪಾಪ್‌ಕಾರ್ನ್ ಅಗ್ರಸ್ಥಾನದಲ್ಲಿರುತ್ತದೆ. ಈ ಕುರುಕುಲಾದ ತಿಂಡಿಯು ತುಂಬಾ ರುಚಿಕರವಾಗಿರುತ್ತದೆ. ಪಾಪ್‌ಕಾನ್ ಸಾಮಾನ್ಯವಾಗಿ ಆರೋಗ್ಯ ಉತ್ಸಾಹಿಗಳಿಂದ ಪರಿಶೀಲನೆಗೆ ಒಳಗಾಗುತ್ತದೆ. ಇದು ಅಂತಹ ಆರೋಗ್ಯಕರ ತಿಂಡಿ ಅಲ್ಲ ಮತ್ತು ತೂಕ ಇಳಿಸುವ ಆಹಾರ ಕ್ರಮದಲ್ಲಿ ಇದನ್ನು ತಿನ್ನಬಾರದು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಪಾಪ್‌ಕಾರ್ನ್ ಲಘು ತಿಂಡಿ ಎಂದು ಹೇಳುತ್ತಾರೆ, ಇದನ್ನು ತೂಕನಷ್ಟ ಮಾಡಿಕೊಳ್ಳಲು ಬಯಸುವವರೂ ಕೂಡಾ ತಿನ್ನಬಹುದು ಎಂದು ಹೇಳುತ್ತಾರೆ. ಹಾಗಾದರೆ ಈ ವಾದದ ಯಾವ ಭಾಗವು ನಿಜವಾಗಿದೆ? ನೀವು ತಿಳಿದುಕೊಳ್ಳಬೇಕಾದ ವಿಚಾರಗಳು ಇಲ್ಲಿವೆ.
ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ಜನರು ಸಾಮಾನ್ಯವಾಗಿ ಡಯೆಟ್ ಪದ್ಧತಿಯನ್ನು ಪ್ರಾರಂಭಿಸುತ್ತಾರೆ. ಅವರು ಕ್ಯಾಲೋರಿ ನಿರ್ಬಂಧಗಳನ್ನು ಒಳಗೊಂಡಿರುವ ವಿವಿಧ ತೂಕನಷ್ಟ ಡಯೆಟ್ ಕ್ರಮಗಳನ್ನು ಪಾಲಿಸುತ್ತಾರೆ. ಮತ್ತು ಫೈಬರ್ ಹಾಗೂ ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಹೆಚ್ಚಿನ ಆಹಾರಗಳನ್ನು ಸೇವಿಸುತ್ತಾರೆ. ಅದೃಷ್ಟವಶಾತ್ ತೂಕನಷ್ಟದ ಆಹಾರದಲ್ಲಿ ಪಾಕ್‌ಕಾರ್ನ್ನ್ನು ಸೇವಿಸಬಹುದು. ಏಕೆಂದರೆ ಇದು ಫೈಬರ್‌ನಿಂದ ಸಮೃದ್ಧವಾಗಿದೆ.
ಪಾಪ್‌ಕಾನ್‌ನ್ನು ಸಂಪೂರ್ಣವಾಗಿ ಜೋಳದ ಧಾನ್ಯದಿಂದ ತಯಾರಿಸಲಾಗುತ್ತದೆ. ಇದು ಫೈಬರ್‌ನಿಂದ ಸಮೃದ್ಧವಾಗಿದೆ. ಅವುಗಳು ಕೇವಲ ಪಾಪ್‌ಕಾರ್ನ್ನ್ನು ಒಳಗೊಂಡಿರುವುದರಿಂದ ಅವುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ದೆಹಲಿ ಮೂಲದ ಪೌಷ್ಟಿಕ ತಜ್ಞೆ ಮತ್ತು ಆರೋಗ್ಯ ತರಬೇತುದಾರರಾದ ಶಿಲ್ಪಾ ಅರೋರಾ ಅವರು ಪಾಪ್ಕಾರ್ನ್ನಲ್ಲಿರುವ ಫೈಬರ್ ಅಂಶವು ಕಾರ್ಬೋಹೈಡ್ರೇಟ್ ಚಯಾಪಚಯವನ್ನು ಸಕ್ಕರೆಯಾಗಿ ನಿಧಾನಗೊಳಿಸುತ್ತದೆ, ಆದ್ದರಿಂದ ಇನ್ಸುಲಿನ್ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಪಾಪ್‌ಕಾರ್ನ್ ಮದುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ತಿಂಡಿಯಾಗಿದೆ ಎಂದು ಹೇಳುತ್ತಾರೆ.
ಪಾಪ್‌ಕಾರ್ನ್ ಸ್ವತಃ ಕೊಬ್ಬಿಸುವ ತಿಂಡಿ ಅಲ್ಲ ಮತ್ತು ತೂಕ ನಷ್ಟಕ್ಕೆ ಸಾಕಷ್ಟು ಆರೋಗ್ಯಕರವಾಗಿದೆ. ತಾವರೆ ಬೀಜದ ಮಖಾನದಂತೆಯೇ, ಪಾಪ್‌ಕಾರ್ನ್ ಕೂಡ ಪೌಷ್ಟಿಕವಾಗಿದೆ. ಮತ್ತು ಆರೋಗ್ಯಕರ ಆಹಾರದ ಮೂಲಕ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವವರು ಇದನ್ನು ಸೇವಿಸಬಹುದು. ಹಾಗೂ ಹೆಚ್ಚು ಬೆಣ್ಣೆ ಅಥವಾ ಚೀಸ್ ಹೊಂದಿರುವ ಪಾಪ್‌ಕಾರ್ನ್ನ್ನು ತಿನ್ನದಂತೆ ಪೌಷ್ಟಿಕ ತಜ್ಞರು ಎಚ್ಚರಿಸುತ್ತಾರೆ. ಫಿಲ್ಮ್ ಥೀಯೆಟರ್‌ನಲ್ಲಿ ಸಿಗುವ ಪಾಪ್‌ಕಾರ್ನ್ ಅಥವಾ ಬೆಣ್ಣೆ ಸುವಾಸನೆಯ ಪಾಪ್‌ಕಾರ್ನ್ಗಳು ಟ್ರಾನ್ಸ್ ಕೊಬ್ಬುಗಳು, ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ಕೃತಕ ಸುವಾಸನೆ ಮತ್ತು ದೇಹಕ್ಕೆ ಹಾನಿಕಾರಕವಾದ ಇತರ ಘಟಕಗಳನ್ನು ಹೊಂದಿರುತ್ತವೆ. ಎಂದು ಅರೋರಾ ಹೇಳುತ್ತಾರೆ.
ಮುಂಬೈ ಮೂಲದ ಪೌಷ್ಟಿಕ ತಜ್ಞೆ ಮತ್ತು ಜೀವನಶೈಲಿ ತಜ್ಞೆ ಕರಿಷ್ಮಾ ಚಾವ್ಲಾ ಕೂಡಾ ಪಾಪ್‌ಕಾರ್ನ್ ತಿನ್ನುವಾಗ ಭಾಗ ನಿಯಂತ್ರಣವು ಮುಖ್ಯ ಎಂದು ಒಪ್ಪಿಕೊಳ್ಳುತ್ತಾರೆ. ಪಾಪ್‌ಕಾರ್ನ್ನ್ನು ಉತ್ತಮ ಪ್ರಮಾಣದ ಫೈಬರ್‌ನೊಂದಿಗೆ ಸಂಪೂರ್ಣ ಧಾನ್ಯವೆಮದು ಪರಿಗಣಿಸಲಾಗುತ್ತದೆ, ಆದ್ದರಿಂದ ಇದು ಕಡಿಮೆ ಜಿ.ಐ(ಗೈಕೆಮಿಕ್ ಇಂಡೆಕ್ಸ್) ಆಹಾರವಾಗಿದೆ. ಆಧರೆ ಅದನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಇನ್ಸುಲಿನ್ ಸ್ಪೆಕ್‌ಗೆ ಕಾರಣವಾಗುತ್ತದೆ. ಅಲ್ಲದೆ ಉಪ್ಪು ಮತ್ತು ಕ್ಯಾರೆಮಲ್ ಫ್ಲೇವರ್ ಪಾಪ್‌ಕಾರ್ನ್ ಕೂಡಾ ತಪ್ಪಿಸಿ ಎಂದು ಚಾವ್ಲಾ ಹೇಳಿದ್ದಾರೆ. ಪಾಪ್‌ಕಾರ್ನ್ ಸಾಮಾನ್ಯ ಕರುಳಿನ ಕಿರಿಕಿರಿಯುಂಟುಮಾಡುತ್ತದೆ ಮತ್ತು ಇದು ಉರಿಯೂತಕ್ಕೆ ಕಾರಣವಾಗಬಹದು ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಸೇವಿಸಬಾರದು ಎಂದು ಚಾವ್ಲಾ ಹೇಳಿದ್ದಾರೆ.
ಪಾಪ್ಕಾರ್ನ್ನಲ್ಲಿ ಉಪ್ಪು, ಬೆಣ್ಣೆ ಅಥವಾ ಕ್ಯಾರಮೆಲ್ ಅಂಶ ಇಲ್ಲದಿದ್ದಲ್ಲಿ ತೂಕ ಇಳಿಸುವ ಆಹಾರದಲ್ಲಿ ಇದನ್ನು ಖಂಡಿತವಾಗಿಯೂ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು. ಆರೋಗ್ಯಕರವಾಗಿರಲು ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ತೂಕನಷ್ಟಕ್ಕೆ ಕೆಲಸ ಮಾಡಲು ನಿಯಮಿತವಾದ ವ್ಯಾಯಾಮಗಳನ್ನು ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:01 pm, Thu, 2 February 23