Kannada News Lifestyle Ram Navami 2024: Wishes, Quotes, Messages, Greetings, WhatsApp and Facebook Status in Kannada to share with your Loved ones Lifestyle News in Kannada
Ram Navami Wishes : ರಾಮನವಮಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಶುಭಕೋರಿ
ಹಿಂದೂ ಧರ್ಮದಲ್ಲಿ ರಾಮ ನವಮಿ ಆಚರಣೆಯೂ ಬಹಳ ವಿಶೇಷವಾದದ್ದು. ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ರಾಮನವಮಿ ಆಚರಿಸಲಾಗುತ್ತದೆ. ಇದು ಆದರ್ಶ ಪುರುಷ ಶ್ರೀರಾಮಚಂದ್ರನ ಜನ್ಮದಿನವಾಗಿದೆ. ಈ ಬಾರಿ ಏಪ್ರಿಲ್ 17 ರಂದು ಆಚರಿಸಲಾಗುವ ರಾಮನವಮಿಯಂದು ನಿಮ್ಮ ಪ್ರೀತಿಪಾತ್ರರಿಗೆ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಈ ರೀತಿಯಾಗಿ ತಿಳಿಸಿದರೆ ನಿಮ್ಮವರು ಖುಷಿಪಡುತ್ತಾರೆ.
ಸಾಂದರ್ಭಿಕ ಚಿತ್ರ
Follow us on
ಪ್ರತಿ ವರ್ಷ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನವಮಿಯನ್ನು (Ram Navami )ಆಚರಿಸಲಾಗುತ್ತದೆ. ಈ ದಿನ ಭಗವಾನ್ ಶ್ರೀ ರಾಮಚ೦ದ್ರನ ಜನ್ಮದಿನವನ್ನು ಆಚರಿಸುವುದಲ್ಲದೇ, ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಈ ಬಾರಿ ದೇಶದಾದಂತ್ಯ ರಾಮ ನವಮಿ ಹಬ್ಬವನ್ನು ಏಪ್ರಿಲ್ 17 ರಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹಾಗಾದ್ರೆ ಈ ಹಬ್ಬದಂದು ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷವಾಗಿ ಶುಭಾಶಯವನ್ನು ತಿಳಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಬಹುದು.
ರಾಮನವಮಿಗೆ ಶುಭಾಶಯಗಳನ್ನು ಹೀಗೆ ತಿಳಿಸಿ:
ಭಗವಾನ್ ರಾಮನು ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಶಾಂತಿಯನ್ನು ನೀಡಲಿ, ರಾಮ ನವಮಿಯ ಶುಭಾಶಯಗಳು.
ಆದರ್ಶ ಪುರುಷ ಶ್ರೀರಾಮ ನಿಮ್ಮ ಜೀವನದಲ್ಲಿ ಐಶ್ವರ್ಯ, ಆರೋಗ್ಯ, ನೆಮ್ಮದಿ ಕರುಣಿಸಲು, ಜೈ ಶ್ರೀ ರಾಮ್ ರಾಮ ನವಮಿ ಹಬ್ಬದ ಶುಭಾಶಯಗಳು.
ಜೀವನದಲ್ಲಿ ಕಷ್ಟಗಳು ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುವುದಕ್ಕೆ ರಾಮನೇ ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾನೆ. ಈ ರಾಮನ ವ್ಯಕ್ತಿತ್ವ ನೋಡಿ ಕಲಿತರೆ ಎಂತಹ ಕಷ್ಟಗಳಿಂದಲೂ ಪಾರಾಗಬಹುದು. ಶ್ರೀ ರಾಮ ನವಮಿಯ ಶುಭಾಶಯಗಳು.
ಭಗವಂತ ರಾಮನ ದೈವಿಕ ಅನುಗ್ರಹವು ನಿಮ್ಮೊಂದಿಗೆ ಸದಾ ಇರಲಿ. ಜೀವನದಲ್ಲಿ ಸದಾ ಸಂತೋಷ, ಸಮೃದ್ಧಿ ಸಿಗಲಿ. ರಾಮ ನವಮಿಯ ಶುಭಾಶಯಗಳು.
ರಾಮನವಮಿಯ ಪವಿತ್ರ ಸಂದರ್ಭವು ನಿಮ್ಮ ಜೀವನಕ್ಕೆ ಭರವಸೆ, ಶಾಂತಿಯನ್ನು ನೀಡಲಿ.. ರಾಮ ನವಮಿಯ ಶುಭಾಶಯಗಳು.
ಈ ವರ್ಷದ ರಾಮನವಮಿಯ ವಿಶೇಷವಾಗಿ ಶ್ರೀ ರಾಮನ ಆಶೀರ್ವಾದ ನಿಮ್ಮ ಮೇಲಿರಲಿ. ನಿಮ್ಮ ಕುಟುಂಬದ ಶಾಂತಿ ಹೆಚ್ಚಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿಯ ಶುಭಾಶಯಗಳು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ