Breast Cancer : ಸ್ತನ ಕ್ಯಾನ್ಸರ್ಗೆ ಮಹಿಳೆಯರು ಈ ವರ್ಷದಲ್ಲಿ ಮಿಲಿಯನ್‌ಗಟ್ಟಲೆ ಬಲಿಯಾಗುವ ಸಾಧ್ಯತೆ
ಕಳೆದ ಕೆಲವು ವರ್ಷಗಳಿಂದ ಮಾರಕ ರೋಗ ಗಳಲ್ಲಿ ಒಂದಾದ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಪ್ರಮಾಣವು ಹೆಚ್ಚಾಗುತ್ತಿದೆ. ಅದಲ್ಲದೇ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಸಾವನಪ್ಪುತ್ತಿದ್ದಾರೆ. ಲ್ಯಾನ್ಸೆಟ್ ಆಯೋಗದ ಪ್ರಕಾರ, 2040 ರ ವೇಳೆಗೆ ಸ್ತನ ಕ್ಯಾನ್ಸರ್ ಗೆ ಒಳಗಾಗಿ ವರ್ಷಕ್ಕೆ ಒಂದು ಮಿಲಿಯನ್ ಸಾವುಗಳು ಸಂಭವಿಸಬಹುದು ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.
ಇತ್ತೀಚೆಗಿನ ಭಾರತದಲ್ಲಿ ಸ್ತನ ಕ್ಯಾನ್ಸರ್ (Breast Cancer) ಎನ್ನುವ ಮಾರಕ ಕಾಯಿಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಲಿಯಾಗುತ್ತಿದ್ದಾರೆ. ಎದೆಹಾಲಿನ ನಾಳಗಳು ಮತ್ತು ಸ್ತನದ ಹಾಲು ಉತ್ಪಾದಿಸುವ ಲೋಬ್ಲುಗಳಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್ ಇದಾಗಿದೆ. ಪ್ರಾರಂಭದಲ್ಲಿ ರೋಗ ಲಕ್ಷಣವನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಪಡೆದುಕೊಂಡರೆ ಅಪಾಯದಿಂದ ಪಾರಾಗಬಹುದು. ಆದರೆ 2040ರ ವೇಳೆ ಸ್ತನ ಕ್ಯಾನ್ಸರ್ ಮಿಲಿಯನ್‌ಗಟ್ಟಲೆ ಜನರು ಸಾವನ್ನಪ್ಪಲಿದ್ದಾರೆ ಎಂದು ಆಯೋಗವೊಂದು ಕಂಡುಕೊಂಡಿದೆ. ಲ್ಯಾನ್ಸೆಟ್ ಆಯೋಗದ ಪ್ರಕಾರ, 2020ರಲ್ಲಿ ಸುಮಾರು 7.8 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ, ಸುಮಾರು 685000 ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅದಲ್ಲದೇ, ಈ ಸ್ತನ ಕ್ಯಾನ್ಸರ್ ಪ್ರಕರಣಗಳು 2020 ರಲ್ಲಿ 2.3 ಮಿಲಿಯನ್ ನಿಂದ 2040ರ ವೇಳೆಗೆ 3 ಮಿಲಿಯನ್ ಗಿಂತಲೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನೇನೂ ಕೆಲವೇ ವರ್ಷಗಳಲ್ಲಿ ಅಂದರೆ, 2040ರ ವೇಳೆಗೆ ಸ್ತನ ಕ್ಯಾನ್ಸರ್ ನಿಂದ ಸಾವನ್ನಪ್ಪುವವರ ಸಂಖ್ಯೆ ವರ್ಷಕ್ಕೆ 1 ಮಿಲಿಯನ್ ಆಗುತ್ತದೆ. ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಭಿವೃದ್ಧಿ ಹೊಂದದ ದೇಶದ ಮಹಿಳೆಯರು ಕೂಡ ಈ ಮಾರಕ ಕಾಯಿಲೆಗೆ ಬಲಿಯಾಗಲಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ.
ಸ್ತನ ಕ್ಯಾನ್ಸರ್ ನಿಂದ ಸಾವನ್ನಪ್ಪುವ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಆಯೋಗವು ಹೊಂದಿದೆ. ಈ ನಿಟ್ಟಿನಲ್ಲಿ ರೋಗಿಗಳು ಮತ್ತು ಆರೋಗ್ಯ ಸಲಹೆಗಾರರ ನಡುವೆ ಉತ್ತಮ ಸಂವಹನ ನಡೆಸಲು ನಿರ್ಧಾರ ಮಾಡಿದೆ ಆ ಮೂಲಕ ಪ್ರಾರಂಭದಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡರೆ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಮೂಲಕ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ರಾಮನಿಗಾಗಿ ಪಾನಕ, ದೂದ್ ಪೇಡ ರೂಪದಲ್ಲಿ ನೈವೇದ್ಯ ಅರ್ಪಿಸಿ
ಹೀಗಾಗಿ ಪ್ರತಿಯೊಬ್ಬ ಆರೋಗ್ಯ ಸಲಹೆಗಾರರು ಕೆಲವು ರೀತಿಯ ಸಂವಹನ ಕೌಶಲ್ಯಗಳ ತರಬೇತಿಯನ್ನು ಪಡೆಯಬೇಕು. ಅದಲ್ಲದೇ ರೋಗಿಗಳು ಹಾಗೂ ಆರೋಗ್ಯ ಸಲಹೆಗಾರರ ಜೊತೆಗೆ ಸಂವಹನ ನಡೆಸಿದಾಗ, ರೋಗಿಗಳ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಲು ಸಾಧ್ಯ. ಹೆಚ್ಚಿನ ಮಹಿಳೆಯರನ್ನು ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸುವುದು. ಗುಣ ಮಟ್ಟದ ಜೀವನ ಶೈಲಿಯನ್ನು ರೂಪಿಸುವಂತೆ ಮಾಡಬೇಕು ಎಂದು ತಿಳಿಸಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ