Ants Problem : ಮನೆಯಲ್ಲಿ ಇರುವೆ ಕಾಟವೇ? ಹೀಗೆ ಮಾಡಿ
ಹೆಚ್ಚಿನವರ ಮನೆಯಲ್ಲಿ ಈ ಇರುವೆಗಳ ಕಾಟ ಇದ್ದೆ ಇರುತ್ತದೆ. ತಿಂಡಿ ತಿನಿಸುಗಳನ್ನು ಇಟ್ಟರೆ ಸಾಕು ಇರುವೆಗಳು ಮುತ್ತಿಕೊಳ್ಳುತ್ತವೆ. ಅದಲ್ಲದೇ, ಈ ಕಾಪಟಿನಲ್ಲಿಟ್ಟಿರುವ ಬಟ್ಟೆಗಳನ್ನು ಈ ಇರುವೆಗಳು ಬಿಡುವುದಿಲ್ಲ. ಈ ಇರುವೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳನ್ನು ಬಳಕೆ ಮಾಡುವವರೇ ಹೆಚ್ಚು. ಆದರೆ ನಿಮ್ಮ ಮನೆಯಲ್ಲಿರುವ ಈ ಪದಾರ್ಥಗಳಿಂದ ಇರುವೆಗಳಿಗೆ ಗುಡ್ ಬಾಯ್ ಹೇಳಬಹುದು.
ಅಡುಗೆ ಮನೆಗೆ ಸದಾ ಬರುವ ಅತಿಥಿಗಳಲ್ಲಿ ಇರುವೆಗಳು ಕೂಡ ಒಂದು. ಸಿಹಿ ಪದಾರ್ಥಗಳು ಇದ್ದು ಬಿಟ್ಟರಂತೂ ಇರುವೆಗಳು ಮುತ್ತಿಕೊಂಡು ಬಿಡುತ್ತವೆ. ಗೊತ್ತಿಲ್ಲದೇ ಈ ಸಿಹಿತಿಂಡಿಗಳನ್ನು ಬಾಯಿಗೆ ಹಾಕಿಕೊಂಡರೆ ಮುಗಿದೇ ಹೋಯ್ತು, ಬಾಯಿ ನಾಲಿಗೆಲ್ಲಾ ಕಚ್ಚಿ ತನ್ನ ಕೋಪವನ್ನು ತೀರಿಸಿ ಕೊಳ್ಳುತ್ತವೆ. ಮನೆಯಲ್ಲಿ ಇರುವೆಗಳ ಕಾಟದಿಂದ ಬೇಸೆತ್ತು ಹೋಗಿದ್ದರೆ ಈ ಕೆಲವು ವಸ್ತುಗಳನ್ನು ಬಳಸಿದರೆ ಇರುವೆಗಳು ಓಡಿಹೋಗುವುದಲ್ಲದೆ, ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮಗಳಾವುದಿಲ್ಲ.
- ಮನೆಯ ಎಲ್ಲೆಂದರಲ್ಲಿ ಇರುವೆಗಳು ಕಾಣಿಸಿಕೊಂಡರೆ ಮೆಣಸಿನ ಪುಡಿ ಅಥವಾ ಕಾಳುಮೆಣಸಿನ ಪುಡಿ ಸಿಂಪಡಿಸಿದರೆ, ಇದರ ಘಾಟಿಗೆ ಮತ್ತೆ ಇರುವೆಗಳು ಅತ್ತ ಸುಳಿಯುವುದೇ ಇಲ್ಲ.
- ಇರುವೆಗಳ ರಾಶಿಯಿದ್ದರೆ ಬೇವಿನ ಎಣ್ಣೆಯನ್ನು ಆ ಜಾಗಕ್ಕೆ ಸ್ಪ್ರೇ ಮಾಡಿದರೆ ಇದರ ವಾಸನೆಗೆ ಇರುವೆಗಳು ಓಡಿಹೋಗುತ್ತವೆ.
- ಗೋಧಿ ಹಿಟ್ಟನ್ನು ಇರುವೆಗಳಿದ್ದಲ್ಲಿ ಹಾಕಿದರೆ ಇರುವೆಗಳು ಕ್ಷಣಾರ್ಧದಲ್ಲಿ ಇಲ್ಲವಾಗುತ್ತದೆ.
- ದಾಲ್ಚಿನ್ನಿಯ ವಾಸನೆಯನ್ನು ಕೀಟಗಳು ಇಷ್ಟ ಪಡುವುದಿಲ್ಲ. ಹೀಗಾಗಿ ಇರುವೆಗಳು ಕಂಡು ಬಂದಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿದರೆ ಇದರ ವಾಸನೆಗೆ ಇರುವೆಗಳು ದೂರ ಹೋಗುತ್ತವೆ.
- ಕಿತ್ತಳೆ, ನಿಂಬೆ ಹಣ್ಣುಗಳ ಸಿಪ್ಪೆಗಳನ್ನು ಇರುವೆಗಳು ಗೋಚರಿಸುವ ಸ್ಥಳದಲ್ಲಿ ಇಟ್ಟರೆ, ಇದರ ವಾಸನೆಗೆ ಇರುವೆಗಳು ಬರುವುದಿಲ್ಲ.
- ಇರುವೆಗಳು ಇರುವ ಜಾಗದಲ್ಲಿ ಲವಂಗವನ್ನು ಇಡಬಹುದು, ಇಲ್ಲವಾದರೆ ಲವಂಗವನ್ನು ನೀರಿಗೆ ಹಾಕಿ ಕುದಿಸಿ, ಈ ನೀರನ್ನು ಸ್ಪ್ರೇ ಮಾಡಿದರೆ ಇರುವೆಗಳು ಸಾಯುತ್ತವೆ.
- ಇರುವೆಗಳು ಇದ್ದ ಜಾಗಕ್ಕೆ ಉಪ್ಪನ್ನು ಹಾಕುವುದರಿಂದ ಇರುವೆಗಳ ಕಾಟದಿಂದ ಮುಕ್ತಿ ಹೊಂದಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ