Ramadan 2023: ರಂಜಾನ್ ಉಪವಾಸ ಮಾಡುವ ಮಧುಮೇಹಿಗಳು ಎಚ್ಚರ, ಈ ಸಲಹೆ ಪಾಲಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2023 | 3:25 PM

ರಂಜಾನ್ ಸಮಯದಲ್ಲಿ, ತಿಂಗಳ ಉಪವಾಸವನ್ನು ಆಚರಿಸುವ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಏನನ್ನೂ ತಿನ್ನುವುದಿಲ್ಲ ಹಾಗೂ ಕುಡಿಯುವುದಿಲ್ಲ. ಮಧುಮೇಹ ರೋಗಿಗಳು ದೀರ್ಘಕಾಲದ ಉಪವಾಸ ಮಾಡುವಾಗ ಜಾಗರೂಕಾರಾಗಿರಬೇಕು. ಮಧುಮೇಹಿಗಳು ಉಪವಾಸದ ಮೊದಲು ಹಾಗೂ ನಂತರ ತಿನ್ನಬೇಕಾದ ತಿನ್ನಬಾರದ ಆಹಾರ ಸಲಹೆಗಳು ಇಲ್ಲಿವೆ.

Ramadan 2023: ರಂಜಾನ್ ಉಪವಾಸ ಮಾಡುವ ಮಧುಮೇಹಿಗಳು ಎಚ್ಚರ, ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Follow us on

ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರವಾಗಿದ್ದು, ಈ ಸಮಯದಲ್ಲಿ ಉಪವಾಸವನ್ನು ಮಾಡುತ್ತಾರೆ. ಈ ಉಪವಾಸದ ಸಮಯದಲ್ಲಿ ಅವರು ಮುಂಜಾನೆಯಿಂದ ಸಂಜೆಯವರೆಗೆ ಏನನ್ನೂ ತಿನ್ನುವುದಿಲ್ಲ ಹಾಗೂ ಕುಡಿಯುವುದಿಲ್ಲ. ಮತ್ತು ಸಾಂಪ್ರದಾಯಿಕವಾಗಿ ಖರ್ಜೂರವನ್ನು ತಿನ್ನುವ ಮೂಲಕ ಉಪವಾಸವನ್ನು ಬಿಡುತ್ತಾರೆ. ಆದರೆ ಮಧುಮೇಹ ಇರುವವರು ದೀರ್ಘ ಗಂಟೆಗಳ ಕಾಲ ಉಪವಾಸ ಮಾಡುವಾಗ ಜಾಗರೂಕರಾಗಿರಬೇಕು. ಮತ್ತು ಅವರ ಇನ್ಸುಲಿನ್ ಡೋಸೆಜ್ ಹೊಂದಾಣಿಕೆ ಅಥವಾ ಮಧುಮೇಹ ಔಷಧಿಗಳಲ್ಲಿನ ಬದಲಾವಣೆಗಳ ಬಗ್ಗೆ ಅವರ ಆರೋಗ್ಯ ತಜ್ಞರಿಂದ ಸಲಹೆಯನ್ನು ಪಡೆಯಬೆಕಾಗುತ್ತದೆ. ಮಧುಮೇಹದಿಂದ ಹೈಪೊಗ್ಲಿಸಿಮಿಯಾ ಅಪಾಯವಿರುವುದರಿಂದ ಮಧುಮೇಹಿಗಳಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕು. ಹಾಗೂ ಪೋಷಕಾಂಶಯುಕ್ತವಾದ ಆಹಾರಗಳನ್ನು ಸೇವನೆ ಮಾಡುವುದು. ಸಕ್ಕರೆ ಮತ್ತು ಕ್ಯಾಲೋರಿಯುಕ್ತ ಆಹಾರವನ್ನು ತಪ್ಪಿಸುವುದು ಈ ರೀತಿಯ ಆಹಾರ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ರಂಜಾನ್‌ನನ್ನು ಹಗಲಿನಲ್ಲಿ ಉಪವಾಸ ಮತ್ತು ಮುಂಜಾನೆ ಮತ್ತು ರಾತ್ರಿಯಲ್ಲಿ ರುಚಿಕರವಾದ ಭಕ್ಷ್ಯವನ್ನು ಸೇವಿಸುವುದರೊಂದಿಗೆ ಆಚರಿಸಲಾಗುತ್ತದೆ. ಜನರು ಪ್ರತಿದಿನ ಹಲವು ಗಂಟೆಗಳ ಕಾಲ ಉಪವಾಸ ಮಾಡುವುದರಿಂದ, ಅವು ಬೆಳಗ್ಗೆ ಮತ್ತು ರಾತ್ರಿಯ ಊಟದ ಸಮಯದಲ್ಲಿ ಅತಿಯಾಗಿ ತಿನ್ನುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದು ಮಧುಮೇಹಕ್ಕೆ ಅಪಾಯಕಾರಿಯಾಗಿದೆ. ಮಧುಮೇಹ ರೋಗಿಗಳು ರಂಜಾನ್ ಸಮಯದಲ್ಲಿ ಸೇವಿಸುವ ಆಹಾರವು ಕರಿದ, ಎಣ್ಣೆಯುಕ್ತ ಹಾಗೂ ಸಿಹಿಯಾಗಿರಬಹುದು.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಅಪಾಯವನ್ನು ಉಂಟುಮಾಡುತ್ತದೆ ಎಂದು ಹೆಚ್‌ ಸಿಎಮ್‌ ಸಿಟಿ ಮಣಿಪಾಲ್ ಆಸ್ಪತ್ರೆಯ ನ್ಯೂಟ್ರೀಷ್ಯನಿಸ್ಟ್ ಮತ್ತು ಡಯೆಟೀಷಿಯನ್ ಸಲಹೆಗಾರದಾರ ಡಾ. ವೈಶಾಲಿ ವರ್ಮಾ ಹೇಳುತ್ತಾರೆ.

ಉಪವಾಸ ಸಮಯದಲ್ಲಿ ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು:

ಸಾಕಷ್ಟು ನಿದ್ರೆ ಪಡೆಯಿರಿ: ನಿಮ್ಮ ಒಟ್ಟಾರೆ ಕ್ಷೇಮಕ್ಕಾಗಿ, ವಿಶೇಷವಾಗಿ ಉಪವಾಸದ ಸಮಯದಲ್ಲಿ ಸಾಕಷ್ಟು ಪ್ರಮಾಣದ ನಿದ್ರೆ ಪಡೆಯಬೇಕು. ನೀವು ಮುಂಜಾನೆ ಬೇಗ ಎದ್ದು, ಶಾಂತಿಯುತವಾಗಿ ಊಟವನ್ನು ಮಾಡಬೇಕು ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ದಣಿದಾಗ ನಿದ್ದೆಯನ್ನು ಚೆನ್ನಾಗಿ ಮಾಡಬೇಕು ಎಂದು ಡಾ. ವರ್ಮ ಹೇಳುತ್ತಾರೆ.

ಉಪವಾಸದ ಮೊದಲು ಮತ್ತು ನಂತರ ನಿಮ್ಮನ್ನು ಚೆನ್ನಾಗಿ ಹೈಡ್ರೇಟ್ ಮಾಡಿಕೊಳ್ಳಿ: ನಿರ್ಜಲೀಕರಣವು ವಿಶೇಷವಾಗಿ ಮಧುಮೇಹಿಗಳು ಎದುರಿಸುವ ಸಾಮಾನ್ಯ ಮತ್ತು ಗಂಭೀರ ಅಪಾಯವಾಗಿರುವುದರಿಂದ ಉಪವಾಸ ಮಾಡುವವರ ದೇಹಕ್ಕೆ ಜಲಸಂಚಯನ ಪಾನೀಯಗಳು ಮುಖ್ಯವಾಗಿರುತ್ತದೆ. ನಿಂಬೆ ನೀರು, ಮಜ್ಜಿಗೆ, ಸೀಯಾಳ, ಕಲ್ಲಂಗಡಿ, ತಾಜಾ ಹಣ್ಣಿನ ರಸಗಳನ್ನು ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಬಹುದು.

ಪ್ರೋಬಯಾಟಿಕ್‌ಗಳನ್ನು ಸೇವಿಸಿ: ನಿಮ್ಮ ಊಟದ ನಂತರ ಒಂದು ಚಮಚ ಮೊಸರು ಸೇವಿಸುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಹೊಟ್ಟೆಯ ಆಮ್ಲೀಯತೆಯನ್ನು ಶಮನಗೊಳಿಸಿ, ನಿಮ್ಮನ್ನು ನಿರ್ಜಲೀಕರಣಗೊಳ್ಳದಂತೆ ರಕ್ಷಿಸುತ್ತದೆ. ಎಂದು ಡಾ. ವರ್ಮಾ ಹೇಳುತ್ತಾರೆ.

ಸಕ್ಕರೆ ಮುಕ್ತ ಪಾನೀಯಗಳನ್ನು ಸೇವಿಸುವ ಮೂಲಕ ಉಪವಾಸ ಆಚರಿಸಿ: ಇಫ್ತಾರ್‌ಗಾಗಿ ಸಕ್ಕರೆ ಮುಕ್ತ ಹೈಡ್ರೇಟಿಂಗ್ ಪಾನೀಯಗಳನ್ನು ಸೇವಿಸುವ ಮೂಲಕ ಉಪವಾಸವನ್ನು ಬಿಡಿ. ಕೊಬ್ಬಿನಾಂಶವಿರುವ ಆಹಾರಗಳು, ಕಾರ್ಬೋಹೈಡ್ರೇಟ್‌ಗಳು, ಸಮೋಸ, ಕಬಾಬ್‌ಗಳಂತಹ ಕರಿದ ಆಹಾರಗಳನ್ನು ಸೇವಿಸಬೇಡಿ. ತರಕಾರಿ ಹಣ್ಣುಗಳು ಹಾಗೂ ಡ್ರೆಫ್ರೂಟ್ಸ್​​ಗಳ ಸೇವನೆ ಮಾಡಿ.

ಇದನ್ನೂ ಓದಿ: Ramadan 2023: ರಂಜಾನ್ ಹಬ್ಬದ ವಿಶೇಷ ಪಾಕವಿಧಾನಗಳು ಇಲ್ಲಿವೆ

ಉಪ್ಪು ಹಾಗೂ ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ: ಮಸಾಲೆಯುಕ್ತ, ಉಪ್ಪು ಹಾಗೂ ಸಕ್ಕರೆಯ ಆಹಾರಗಳನ್ನು ಮಿತಿಗೊಳಿಸಿ. ಹೆಚ್ಚು ಉಪ್ಪಿನ ಆಹಾರಗಳನ್ನು ಸೇವಿಸುವುದರಿಂದ ಅದು ಜೀವಕೋಶಗಳಿಂದ ನೀರನ್ನು ಹೀರಿಕೊಳ್ಳುತ್ತದೆ ಇದರಿಂದ ನಂತರ ಬಾಯಾರಿಕೆ ಉಂಟಾಗಬಹುದು ಎಂದು ವರ್ಮಾ ಹೇಳುತ್ತಾರೆ. ಮತ್ತು ಹಣ್ಣು, ತರಕಾರಿ, ಧಾನ್ಯಗಳ ಬ್ರೆಡ್, ಪ್ರೋಟೀನ್, ಹಾಲು ಜ್ಯೂಸ್‌ಗಳಂಯಹ ಸಮತೋಲಿತ ಆಹಾರಗಳನ್ನು ಸೇವನೆ ಮಾಡಬೇಕು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸುತ್ತಿರಿ: ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಶೀಲಿಸುತ್ತಿರಿ. ಮತ್ತು ಇನ್ಸುಲಿನ್ ತೆಗೆದುಕೊಳ್ಳುವವರು ಉಪವಾಸದ ಮೊದಸಲು ವೈದ್ಯರನ್ನು ಸಂಕರ್ಕಿಸಿ. ವೈದ್ಯರು ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಅಥವಾ ಡೋಸ್ ಸಮಯವನ್ನು ಬದಲಾಯಿಸಲು ಸಲಹೆ ನೀಡಬಹುದು.

Published On - 3:24 pm, Wed, 22 March 23