ಸೀತೆಯನ್ನು ರಕ್ಷಿಸಲು ಹೋಗಿ ರಾವಣನಿಂದ ರೆಕ್ಕೆ ಕತ್ತರಿಸಿಕೊಂಡು ಜಟಾಯು ಬಿದ್ದಿದ್ದು ಎಲ್ಲಿ ಗೊತ್ತಾ?
ರಾಮಾಯಣದಲ್ಲಿ ರಾವಣ ಸೀತಾ ಮಾತೆಯನ್ನು ಅಪರಹರಿಸಿಕೊಂಡು ಹೋಗುವಾಗ, ಸೀತೆಯ ಸಹಾಯಕ್ಕೆ ಧಾವಿಸಿದ್ದು, ಜಟಾಯು.
ರಾಮಾಯಣದಲ್ಲಿ (Ramayan) ರಾವಣ (Ravan) ಸೀತಾ ಮಾತೆಯನ್ನು (Seeta) ಅಪರಹರಿಸಿಕೊಂಡು ಹೋಗುವಾಗ, ಸೀತೆಯ ಸಹಾಯಕ್ಕೆ ಧಾವಿಸಿದ್ದು, ಜಟಾಯು (Jatayu). ಈ ಜಟಾಯು ಪಕ್ಷಿ ಬಗ್ಗೆ ನಿಮಗೆ ತಿಳದೆ ಇದೆ. ಆದರೆ ಇಲ್ಲಿ ನಿಮಗೆ ತಿಳಿಯದ ಒಂದು ಸಂಗತಿ ಇದೆ. ರಾವಣನು ಸೀತಾ ಮಾತೆಯನ್ನು ಅಪಹರಿಸಿಕೊಂಡು ಹೋಗುವಾಗ, ರಾವಣನೊಂದಿಗೆ ಮೊದಲು ಹೋರಾಡಿ ಸೀತೆಯನ್ನು ಬಿಡಿಸಲು ಯತ್ನಿಸಿದವನು ಜಟಾಯು. ಆಗ ರಾವಣ ಜಟಾಯುವಿನ ಎರಡು ರೆಕ್ಕೆಗಳನ್ನು ಕತ್ತಿರಿಸುತ್ತಾನೆ. ಆಗ ಜಟಾಯುವಿಗೆ ಹಾರಲು ಆಗದೆ ಭೂಮಿಗೆ ಬಿಳ್ಳುತ್ತದೆ. ಆಗ ಜಟಾಯು ಬಿದ್ದಿದ್ದು ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲಂ ಗ್ರಾಮದಲ್ಲಿ. ಪ್ರಸ್ತುತ ಈ ಸ್ಥಳ ಪ್ರವಾಸಿ ತಾಣವಾಗಿದೆ.
ಜಟಾಯು ಉದ್ಯಾನವನ
ಚಡಯಮಂಗಲಂ ಗ್ರಾಮದಲ್ಲಿ ಸಮುದ್ರ ಮಟ್ಟದಿಂದ 1200 ಅಡಿ ಎತ್ತರದಲ್ಲಿ ಸಂಪೂರ್ಣ ಕಲ್ಲಿನಿಂದ ಜಟಾಯು ಮೂರ್ತಿಯನ್ನು ಕೆತ್ತಲಾಗಿದೆ. ಈ ಸ್ಥಳವನ್ನು ಜಟಾಯು ಭೂಮಿಯ ಕೇಂದ್ರ ಅಥವಾ ಜಟಾಯು ರಾಕ್ ಎಂದು ಕರೆಯುತ್ತಾರೆ. ಈ ಉದ್ಯಾನವನ್ನು ಆಗಸ್ಟ್ 17, 2018 ರಂದು ಉದ್ಘಾಟಿಸಲಾಯಿತು. ಅಂದಿನಿಂದ ಇದು ಉತ್ತಮ ಪ್ರವಾಸಿ ಆಕರ್ಷಣೆಯಾಗಿದೆ. ಕೇರಳ ರಾಜ್ಯದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿದೆ. ಉದ್ಯಾನವನದ ಪ್ರಮುಖ ಆಕರ್ಷಣೆಯೆಂದರೆ ಜಟಾಯುವಿನ ಶಿಲಾ ಶಿಲ್ಪವು ವಿಶ್ವದ ಅತಿದೊಡ್ಡ ಪಕ್ಷಿ ಶಿಲ್ಪವಾಗಿದೆ.
ಜಟಾಯು ಶಿಲ್ಪದ ಕುರಿತು ಮಾಹಿತಿ
ಈ ಶಿಲ್ಪವನ್ನು ಕಲಾವಿದ ರಾಜೀವ್ ಅಂಚಲ್ ಎಂಬ ಶಿಲ್ಪಿ ಕೆತ್ತಿಸಿದ್ದಾರೆ. ಈ ಶಿಲೆಯು ಒಟ್ಟು 200 ಅಡಿ ಉದ್ದ, 150 ಅಡಿ ಅಗಲ, 70 ಅಡಿ ಎತ್ತರವಿದೆ. ಒಟ್ಟು 15,000 ಚದರ ಅಡಿ ನೆಲೆದ ಮೇಲೆ ಹರಡಿಕೊಂಡಿದೆ. ಇದರ ಸೃಷ್ಟಿಕರ್ತ ರಾಜೀವ್ ಆಂಚಲ್ ಪ್ರಕಾರ, ಜಟಾಯು ರಾಕ್, ಜಟಾಯು ದಂತಕಥೆಯ ಪ್ರಾತಿನಿಧ್ಯವಾಗಿದೆ. ಮಹಿಳೆಯ ಗೌರವ ಮತ್ತು ಮಹಿಳೆಯನ್ನು ರಕ್ಷಣೆ ಮಾಡುವ ಸಂಕೇತವಾಗಿದೆ.
ಜಟಾಯು ರಾಕ್
ಸ್ಥಳೀಯರು ಮತ್ತು ಪ್ರವಾಸಿಗರು ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಬರುತ್ತಾರೆ. ನಗರದ ಗದ್ದಲ, ದಟ್ಟಣೆ ಮತ್ತು ಬಿಡುವಿಲ್ಲದ ಜೀವನದಿಂದ ಒಂದು ದಿನ ವಿಶ್ರಾಂತಿ ಪಡೆಯಲು, ಜಟಾಯು ರಾಕ್ ಉತ್ತಮ ಸ್ಥಳವಾಗಿದೆ. ಇಲ್ಲಿ ಶಿಲ್ಪದ ಒಳಗೆ ವಸ್ತುಸಂಗ್ರಹಾಲಯ ಮತ್ತು 6D ಥಿಯೇಟರ್ ಇದೆ. ಇಲ್ಲಿ ನೀವು ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್ ಕೂಡ ಹೋಗಬಹುದು.
ಮತ್ತಷ್ಟು ಆಸಕ್ತಿದಾಯಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Sun, 9 October 22