ವರ್ಕೌಟ್​​ ಮಾಡುವುದರಿಂದ ತೂಕ ನಷ್ಟದ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು

|

Updated on: Feb 05, 2023 | 10:47 AM

ಯೋಗ ಹಾಗೂ ವ್ಯಾಯಾಮದಂತಹ ಅಭ್ಯಾಸಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

ವರ್ಕೌಟ್​​ ಮಾಡುವುದರಿಂದ ತೂಕ ನಷ್ಟದ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ನೀವು ನಿಮ್ಮ ಹೆಚ್ಚಿನ ತೂಕವನ್ನು ಕಳೆದು ಕೊಳ್ಳಲು ವರ್ಕೌಟ್​​ ಮಾಡುವುದರಿಂದ, ನೀವು ತೂಕ ಕಳೆದುಕೊಳ್ಳುವ ಹೊರತಾಗಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಯೋಗ ಹಾಗೂ ವ್ಯಾಯಾಮದಂತಹ ಅಭ್ಯಾಸಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ತೂಕ ನಷ್ಟವನ್ನು ಹೊರತುಪಡಿಸಿ ನಿಯಮಿತ ವ್ಯಾಯಾಮವು ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಸಹಾಯಕವಾಗಿದೆ.

ತೂಕ ನಷ್ಟವನ್ನು ಹೊರತಾಗಿ ನಿಯಮಿತ ವ್ಯಾಯಾಮದಿಂದಾಗುವ ಪ್ರಯೋಜನಗಳು:

1. ಒತ್ತಡವನ್ನು ಕಡಿಮೆ ಮಾಡುತ್ತದೆ:

ಇತ್ತೀಚಿನ ಅಧ್ಯಯನಗಳ ಪ್ರಕಾರ ವ್ಯಾಯಾಮವು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೀವು ವ್ಯಾಯಾಮ ಮಾಡುವುದರಿಂದ ಹಾರ್ಮೋನ್ ರಕ್ತದ ಹರಿವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ಸಾಗಿಸುತ್ತದೆ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ.

2. ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ:

ವರ್ಕೌಟ್​​ ನಿಮ್ಮ ಸ್ನಾಯುಗಳನ್ನು ತಲುಪುವ ರಕ್ತ ಮತ್ತು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಸಹಾಯಕವಾಗಿದೆ. ಉದಾಹರಣೆಗೆ, ಬೆಳಿಗ್ಗೆ ಅಥವಾ ಮಧ್ಯಾಹ್ನ ವ್ಯಾಯಾಮ ಮಾಡುವುದರಿಂದ ನೀವು ಇಡೀ ದಿನ ಶಕ್ತಿಯುತವಾಗಿರುತ್ತೀರಿ. ನೀವು ದಿನ ಪೂರ್ತಿ ಉಲ್ಲಾಸದಿಂದಿರಲು ಸಹಾಯ ಮಾಡುತ್ತದೆ.

3. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:

ನಿಮ್ಮ ಹೃದಯದ ಆರೋಗ್ಯ ಕೆಡುವಲ್ಲಿ ಪ್ರಮುಖ ಕಾರಣ ಒತ್ತಡ. ಒತ್ತಡವನ್ನು ನಿವಾರಿಸುವ ಶಕ್ತಿ ವ್ಯಾಯಾಮಕ್ಕೆ ಇರುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯವಾಗಿದೆ. ನಿಯಮಿತ ವ್ಯಾಯಾಮವು ನಿಮ್ಮ ಹೃದಯ ಸ್ನಾಯುವನ್ನು ಬಲಪಡಿಸುತ್ತದೆ ಮತ್ತು ನಿಮ್ಮ ರಕ್ತದ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಆದರೆ ಇದು ಉಸಿರಾಟ ಮತ್ತು ಸ್ನಾಯುವಿನ ಸಂಕೋಚನವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೊಂದು ಕಿವಿಮಾತು: ಕೆಲಸ ಹೋಯಿತು ಎಂಬ ಬೇಸರದಿಂದ ಖಿನ್ನತೆಗೆ ಜಾರಬೇಡಿ, ಸಲಹೆಗಳು ನಿಮಗಾಗಿ

4. ಚಯಾಪಚಯವನ್ನು ಸುಧಾರಿಸುತ್ತದೆ:

ವಾಕಿಂಗ್ ಅಥವಾ ಓಟದಂತಹ ಹೃದಯರಕ್ತನಾಳದ ವ್ಯಾಯಾಮದಲ್ಲಿ ತೊಡಗಿಸಿಕೊಂಡಾಗ ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯೂ ಆರೋಗ್ಯವಾಗುತ್ತಾ ಹೋದ ಹಾಗೆ ಇದು ನಿಮ್ಮ ದೇಹದ ಹೆಚ್ಚು ಕ್ಯಾಲೋರಿಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

5. ಉತ್ತಮ ನಿದ್ದೆಗೆ ಸಹಾಯಕ:

ನೀವು ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ದೇಹವು ಸಾಕಷ್ಟು ದಣಿದಿರುತ್ತದೆ. ಆ ಸಮಯದಲ್ಲಿ ನಿಮ್ಮ ದೇಹಕ್ಕೆ ವಿಶಾಂತ್ರಿಯ ಅಗತ್ಯವಿರುತ್ತದೆ. ಆದ್ದರಿಂದ ವ್ಯಾಯಾಮಗಳು ನಿಮಗೆ ಉತ್ತಮ ನಿದ್ದೆಗೆ ಸಹಾಯಕವಾಗಿದೆ. ನೀವು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದರಿಂದ ನೀವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:47 am, Sun, 5 February 23