Relationship Tips: ತಿಳಿದೋ ತಿಳಿದೆಯೋ ಈ ತಪ್ಪುಗಳನ್ನು ಮಾಡಬೇಡಿ, ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗಬಹುದು

| Updated By: ನಯನಾ ರಾಜೀವ್

Updated on: Dec 01, 2022 | 5:10 PM

ನೀವು ಪ್ರೀತಿ(Love) ಯಲ್ಲಿದ್ದರೆ ನೀವಿಬ್ಬರೂ ನಿಮ್ಮ ಅಭಿಪ್ರಾಯವನ್ನು ಪರಸ್ಪರ ಗೌರವಿಸುವುದನ್ನು ಕಲಿಯಬೇಕು.

Relationship Tips: ತಿಳಿದೋ ತಿಳಿದೆಯೋ ಈ ತಪ್ಪುಗಳನ್ನು ಮಾಡಬೇಡಿ, ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗಬಹುದು
Relationship
Follow us on

ನೀವು ಪ್ರೀತಿ(Love) ಯಲ್ಲಿದ್ದರೆ ನೀವಿಬ್ಬರೂ ನಿಮ್ಮ ಅಭಿಪ್ರಾಯವನ್ನು ಪರಸ್ಪರ ಗೌರವಿಸುವುದನ್ನು ಕಲಿಯಬೇಕು. ಏಕೆಂದರೆ ಪ್ರತಿಯೊಬ್ಬರೂ ನಮ್ಮದೇ ಆದ ಆಸೆ, ಆಕಾಂಕ್ಷೆಗಳು, ಅಭಿಪ್ರಾಯಗಳನ್ನು ಹೊಂದಿರುತ್ತಾರೆ, ಅದನ್ನು ಬೇರೆಯವರ ಬಳಿ ವ್ಯಕ್ತಪಡಿಸಿದಾಗ ಸಂಗಾತಿ ಅದನ್ನು ಒಪ್ಪಿಕೊಳ್ಳಬಹುದು, ಕೆಲವೊಮ್ಮೆ ಒಪ್ಪಿಕೊಳ್ಳದೆಯೂ ಇರಬಹುದು.

ತಪ್ಪನ್ನು ತಪ್ಪು ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಸಂಗಾತಿ ಹೇಳುವ ಎಲ್ಲಾ ಮಾತಿಗೂ ವಿರುದ್ಧವಾಗಿ ನೀವು ನಡೆದುಕೊಂಡರೆ ಆಕೆಗೆ ನಿಮ್ಮ ಮೇಲಿರುವ ಪ್ರೀತಿ ಕ್ರಮೇಣವಾಗಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೆಣ್ಣುಮಕ್ಕಳು ತಮ್ಮ ಸಂಗಾತಿಯಿಂದ ಪ್ರೀತಿಯನ್ನು ಬಯಸುವುದು ಮಾತ್ರವಲ್ಲದೆ ಗೌರವ ಹಾಗೂ ಸಹಾನುಭೂತಿಯನ್ನು ಬಯಸುತ್ತಾರೆ. ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಮಂದಿ ಪುರುಷರು ಸೋತುಹೋಗುತ್ತಾರೆ.

ಮತ್ತಷ್ಟು ಓದಿ: Relationship Tips: ಕೃತಜ್ಞತಾ ಭಾವ ಸಂಗಾತಿ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ

ಕೆಲವೊಮ್ಮೆ ಆಕೆ ದೂರವಾದ ಬಳಿಕ ಏಕೆ ದೂರವಾಗಿದ್ದಾಳೆ ದೂರವಾಗಲು ಕಾರಣ ಏನಿರಬಹುದು ಎಂದು ಹುಡುಕುತ್ತೀರಿ. ಆದರೆ ಕಾಲ ಮಿಂಚಿದ ಮೇಲೆ ಚಿಂತಿಸಿ ಫಲವಿಲ್ಲ, ಆಕೆಯನ್ನು ಉಳಿಸಿಕೊಳ್ಳಬೇಕಿದ್ದರೆ ನೀವು ನಿಮ್ಮ ಗುಣದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲೇಬೇಕು.

ಎಲ್ಲಾ ನಿರ್ಧಾರಗಳನ್ನು ನೀವೇ ಮಾಡಿದರೆ ಹೇಗೆ?
ಎಲ್ಲಾ ಪುರುಷರು ತಮ್ಮ ಜೀವನದ ನಿರ್ಧಾರವನ್ನು ತಾವು ಖುದ್ದಾಗಿ ತೆಗೆದುಕೊಳ್ಳಲು ಇಷ್ಟಪಡುತ್ತಾರೆ, ತಮ್ಮ ಸಂಗಾತಿಯನ್ನು ಅದರಲ್ಲಿ ಸೇರಿಸಲು ಇಷ್ಟಪಡುವುದಿಲ್ಲ. ಇದು ಮಹಿಳೆಯರಿಗೆ ಇಷ್ಟವಾಗುವುದಿಲ್ಲ, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ತಮ್ಮನ್ನು ಕೂಡ ಸೇರಿಸಿಕೊಳ್ಳಲಿ ಎಂದು ಮಹಿಳೆ ಬಯಸುತ್ತಿರುತ್ತಾಳೆ.

ನೀವು ಮಾಡುವ ತಮಾಷೆ ಹಿಡಿಸದೆ ಇರಬಹುದು
ಕೆಲವರು ತುಂಬಾ ತಮಾಷೆ ಮಾಡುವುದು, ಸಂಗಾತಿಯ ಕಾಲೆಳೆಯುವುದು ಮಾಡುತ್ತಾರೆ, ಎಲ್ಲಾ ಸಂದರ್ಭದಲ್ಲಿಯೂ ಆಕೆ ಒಂದೇ ರೀತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದಿರಿ.

ಬೇರೆ ಹೆಣ್ಣುಮಕ್ಕಳ ಜತೆ ಮಾತನಾಡುವುದನ್ನು ಇಷ್ಟಪಡುವುದಿಲ್ಲ
ಕೆಲವರಿಗೆ ಬೇರೆ ಹೆಣ್ಣುಮಕ್ಕಳ ಜತೆಗೆ ಫ್ಲರ್ಟ್​ ಮಾಡುವುದು, ತಮಾಷೆ ಮಾಡುವ ಅಭ್ಯಾಸವಿರುತ್ತದೆ, ಹಲವು ಮಂದಿ ಈ ಗುಣವನ್ನು ಇಷ್ಟಪಡುವುದಿಲ್ಲ.

ಆಕೆಯನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ ಸ್ವಾತಂತ್ರ್ಯ ನೀಡಿ
ಪ್ರೀತಿ ಮಾಡಿ ನಿಮ್ಮ ಬಾಳಿಗೆ ಬಂದ ಬಳಿಕ ಬಹಳಷ್ಟು ಮಂದಿ ಆಕೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಾರೆ, ಆಕೆಯ ಮೇಲೆ ತಮ್ಮಿಷ್ಟಗಳನ್ನು ಹೇರುತ್ತಾರೆ, ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಾರೆ . ಹಾಗಾದಾಗ ಆಕೆಗೆ ನಿಮ್ಮ ಮೇಲಿನ ಭರವಸೆ ಕಡಿಮೆಯಾಗುತ್ತಾ ಹೋಗುವ ಸಾಧ್ಯತೆ ಇರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ