Hugging Benefits: ಪ್ರೀತಿಯ ಒಂದು ಅಪ್ಪುಗೆಯಲ್ಲಿ ನೀವು ಊಹಿಸಲು ಸಾಧ್ಯವಾಗದಷ್ಟು ಪ್ರಯೋಜನಗಳಿವೆ

ಪ್ರೀತಿಯ ಒಂದು ಅಪ್ಪುಗೆ(Hug) ನಿಮ್ಮ ದುಃಖವನ್ನು ಮರೆಸುತ್ತೆ, ಅದೇ ಅಪ್ಪುಗೆ ನಿಮ್ಮ ಖುಷಿಯನ್ನು ಇಮ್ಮಡಿಗೊಳಿಸುತ್ತೆ, ಅದೇ ಅಪ್ಪುಗೆಯು ನಿಮ್ಮ ಪ್ರೀತಿಪಾತ್ರರನ್ನು ಹತ್ತಿರ ತರುತ್ತೆ, ಅದೇ ಅಪ್ಪುಗೆ ನಿಮ್ಮ ಕಷ್ಟಗಳೆಲ್ಲವನ್ನೂ ದೂರ ಮಾಡುತ್ತೆ

Hugging Benefits: ಪ್ರೀತಿಯ ಒಂದು ಅಪ್ಪುಗೆಯಲ್ಲಿ ನೀವು ಊಹಿಸಲು ಸಾಧ್ಯವಾಗದಷ್ಟು ಪ್ರಯೋಜನಗಳಿವೆ
Hug
Follow us
ನಯನಾ ರಾಜೀವ್
|

Updated on: Dec 01, 2022 | 12:12 PM

ಪ್ರೀತಿಯ ಒಂದು ಅಪ್ಪುಗೆ(Hug) ನಿಮ್ಮ ದುಃಖವನ್ನು ಮರೆಸುತ್ತೆ, ಅದೇ ಅಪ್ಪುಗೆ ನಿಮ್ಮ ಖುಷಿಯನ್ನು ಇಮ್ಮಡಿಗೊಳಿಸುತ್ತೆ, ಅದೇ ಅಪ್ಪುಗೆಯು ನಿಮ್ಮ ಪ್ರೀತಿಪಾತ್ರರನ್ನು ಹತ್ತಿರ ತರುತ್ತೆ, ಅದೇ ಅಪ್ಪುಗೆ ನಿಮ್ಮ ಕಷ್ಟಗಳೆಲ್ಲವನ್ನೂ ದೂರ ಮಾಡುತ್ತೆ, ಅಪ್ಪ, ಅಮ್ಮ, ಅಕ್ಕ-ತಂಗಿ, ಅಣ್ಣ, ತಮ್ಮಂದಿರು, ಸ್ನೇಹಿತರು, ಸಂಗಾತಿ ಯಾರೇ ಇರಲಿ ಪ್ರೀತಿಯ ಒಂದು ಅಪ್ಪುಗೆ ನಿಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುವುದರ ಜತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಸಾಮಾನ್ಯವಾಗಿ ತುಂಬಾ ದಿನಗಳ ನಂತರ ಸಿಗುವ ಸ್ನೇಹಿತರು, ಅಥವಾ ದುಃಖವಾಗುವಾಗ ಸಿಗುವಾಗ ಸಂತೈಸುವವರು, ಅದನ್ನು ಹೊರತುಪಡಿಸಿ ನೀವು ಸಂಗಾತಿಯನ್ನು ಅಪ್ಪಿಕೊಳ್ಳುತ್ತೀರಿ. ಅಪ್ಪಿಕೊಳ್ಳುವುದು ತುಂಬಾ ಸಾಮಾನ್ಯ, ನಾವು ತುಂಬಾ ದುಃಖಿತರಾದಾಗ, ನಾವು ನಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುತ್ತೇವೆ, ಅಪ್ಪುಗೆ ಒಂದು ಹಿತವಾದ ಭಾವನೆ.

ಅಧ್ಯಯನಗಳು ಕೂಡ ಅದನ್ನೇ ಹೇಳುತ್ತವೆ. ಅಧ್ಯಯನದ ಪ್ರಕಾರ, ಇದು ನಿಜವಾಗಿಯೂ ಮ್ಯಾಜಿಲ್ ಎಂದೇ ಹೇಳಬಹುದು. ನೀವು ನಿಮ್ಮ ಪ್ರೀತಿ ಪಾತ್ರರನ್ನು ಕೇವಲ 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳಿ, ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾದಂತೆ ನಿಮಗೆ ಭಾಸವಾಗುತ್ತದೆ. ಮನಸ್ಸು ಸಂಪೂರ್ಣ ಶಾಂತವಾಗುತ್ತದೆ, ಈಗ ಪ್ರಶ್ನೆ ಏನೆಂದರೆ ಅಪ್ಪಿಕೊಳ್ಳುವುದಕ್ಕೂ ಸಂತೋಷದ ಹಾರ್ಮೋನ್ ಗೂ ಏನಾದರೂ ಸಂಬಂಧವಿದೆಯೇ? ಈ ಲೇಖನದಲ್ಲಿ ತಿಳಿಯಲಿದೆ.

1. ಡೋಪಮೈನ್ : ಡೋಪಮೈನ್ ಒಂದು ರಾಸಾಯನಿಕ ಸಂದೇಶವಾಹಕವಾಗಿದ್ದು ಅದು ಮೆದುಳನ್ನು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ, ಹೆಚ್ಚಿನ ಸಂಖ್ಯೆಯ ಡೋಪಮೈನ್ ರಾಸಾಯನಿಕವನ್ನು ಬಲವಂತವಾಗಿ ಬಿಡುಗಡೆ ಮಾಡಿದಾಗ, ಸಂತೋಷ ಮತ್ತು ವಿಶ್ರಾಂತಿಯಂತಹ ಅನೇಕ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಇದು ವ್ಯಕ್ತಿಗೆ ಆತ್ಮ ತೃಪ್ತಿಯನ್ನು ನೀಡುತ್ತದೆ.

2. ಸಿರೊಟೋನಿನ್ : ಸಿರೊಟೋನಿನ್ ನಮ್ಮ ಒತ್ತಡವನ್ನು ನಿಯಂತ್ರಿಸುತ್ತದೆ. ಇದು ಉತ್ತಮ ಮನಸ್ಥಿತಿಯನ್ನು ಉತ್ತೇಜಿಸುತ್ತದೆ ಮತ್ತು ಒಂಟಿತನದ ಭಾವನೆಗಳನ್ನು ಕಡಿಮೆ ಮಾಡುತ್ತದೆ.

ಮತ್ತಷ್ಟು ಓದಿ:Relationship: ನಿಮ್ಮ ಸಂಗಾತಿಯ ಮೇಲೆ ಅಸೂಯೆಯೇ? ಅದರಿಂದ ಹೊರ ಬರಲು ಸುಲಭ ಮಾರ್ಗಗಳು ಇಲ್ಲಿವೆ

3. ಆಕ್ಸಿಟೋಸಿನ್ : ಇದನ್ನು ಲವ್ ಹಾರ್ಮೋನ್ ಎಂದು ಕರೆಯಲಾಗುತ್ತದೆ, ಇದು ನಮ್ಮ ಒತ್ತಡವನ್ನು ನಿವಾರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.ಈ ಹಾರ್ಮೋನ್ ನಮ್ಮ ಹೃದಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ.

ಅಪ್ಪುಗೆಯ ಆಶ್ಚರ್ಯಕರ ಪ್ರಯೋಜನಗಳು ಇವು ಒತ್ತಡವನ್ನು ಕಡಿಮೆ ಮಾಡುತ್ತದೆ: ತಬ್ಬಿಕೊಳ್ಳುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕ್ರಮೇಣ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.

ಬಿಪಿ ನಿಯಂತ್ರಿಸುವುದು: ನಾರ್ತ್ ಕೆರೊಲಿನಾ ವಿಶ್ವವಿದ್ಯಾನಿಲಯದ ಸಂಶೋಧನೆಯು ಹೃದಯ ಬಡಿತವನ್ನು ಸಾಮಾನ್ಯಗೊಳಿಸುತ್ತದೆ ಎಂದು ತೋರಿಸುತ್ತದೆ.ಅಧ್ಯಯನದ ಪ್ರಕಾರ, 10 ನಿಮಿಷಗಳ ಕಾಲ ಕೈಗಳನ್ನು ಹಿಡಿದುಕೊಳ್ಳುವುದು ಮತ್ತು 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವುದು ನಿಮ್ಮ ರಕ್ತದೊತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಭಯವನ್ನು ಕಡಿಮೆ ಮಾಡುತ್ತದೆ: ಅಧ್ಯಯನದ ಪ್ರಕಾರ, ನಿಮ್ಮ ಆಪ್ತರನ್ನು ತಬ್ಬಿಕೊಳ್ಳುವುದರಿಂದ ನಿಮ್ಮ ಭಯವೂ ಕಡಿಮೆಯಾಗುತ್ತದೆ. ತಬ್ಬಿಕೊಳ್ಳುವುದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹ ಒಳ್ಳೆಯದು.

ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ನಿಮಗೆ ಸಾಕಷ್ಟು ಆತ್ಮವಿಶ್ವಾಸದ ಅಗತ್ಯವಿರುವಾಗ ಮತ್ತು ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತಿರುವ ಸಮಯದಲ್ಲಿ, ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳಬೇಕು, ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ