Relationship Tips: ಪ್ರೀತಿ ಉಳಿಸಿಕೊಳ್ಳುವ ಈ ಪಂಚ ಸೂತ್ರ ಪಾಲಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 22, 2024 | 5:24 PM

ಪ್ರೀತಿ ಎನ್ನುವುದು ಎರಡು ಮನಸ್ಸುಗಳ ನಡುವಿನ ಮಧುರವಾದ ಭಾವನೆ. ಕೆಲವರು ಪ್ರೀತಿ ವಿಚಾರದಲ್ಲಿ ನಿಷ್ಠಾವಂತರಾಗಿದ್ದರೆ, ಅರ್ಧದಷ್ಟು ಜನರು ಕೇರ್‌ಲೆಸ್ ಆಗಿರುತ್ತಾರೆ. ಇನ್ನೂ ಕೆಲವರು ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ಆದರೆ ಸಂಬಂಧದಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಈ ಸೂತ್ರಗಳನ್ನು ಅಳವಡಿಸಿಕೊಂಡರೆ ಸಂಗಾತಿಯ ಜೊತೆಗೆ ಪ್ರೀತಿಯ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಕಷ್ಟವೇನಲ್ಲ.

Relationship Tips: ಪ್ರೀತಿ ಉಳಿಸಿಕೊಳ್ಳುವ ಈ ಪಂಚ ಸೂತ್ರ ಪಾಲಿಸಿ
Follow us on

ಈಗಿನ ಕಾಲದಲ್ಲಿ ಪ್ರೀತಿಪ್ರೇಮಕ್ಕೆ ವ್ಯಾರಂಟಿ ಹಾಗೂ ಗ್ಯಾರಂಟಿ ಅನ್ನೋದೇ ಇಲ್ಲ. ಹೆಚ್ಚಿನವರು ಟೈಮ್ ಪಾಸ್ ಗೆಂದೇ ಲವ್ ಮಾಡುತ್ತಾರೆ. ಆದರೆ ಪ್ರೀತಿ ಪ್ರೇಮದ ವಿಚಾರಕ್ಕೆ ಬಂದಾಗ ಒಬ್ಬೊಬ್ಬರು ಒಂದೊಂದು ರೀತಿಯ ಮನೋಭಾವ ಹೊಂದಿರುತ್ತಾರೆ. ಹೀಗಾಗಿ ಎಲ್ಲರೂ ಒಂದೇ ರೀತಿ ಎಂದು ಹೇಳುವುದು ಕಷ್ಟ. ಪರಿಶುದ್ಧವಾಗಿ ಪ್ರೀತಿಸುವವರು ಈ ಕೆಲವು ತಪ್ಪುಗಳನ್ನು ಮಾಡದೇ ಇದ್ದಲ್ಲಿ ಸಂಬಂಧವು ದೀರ್ಘಕಾಲ ಉಳಿಯಲು ಸಾಧ್ಯ. ಹೀಗಾಗಿ ಪ್ರೀತಿಯನ್ನು ಉಳಿಸಿಕೊಳ್ಳುವ ಈ ಪಂಚ ಸೂತ್ರಗಳು ತಿಳಿದಿರಲಿ.

* ನೀವು ನಿಮ್ಮ ಸಂಗಾತಿಗೂ ಸ್ಪೇಸ್ ಕೊಡಿ : ಸಾಮಾನ್ಯವಾಗಿ ಗಂಡ ಹೆಂಡತಿಯಿರಲಿ ಪ್ರೇಮಿಗಳಿರಲಿ, ನಾನು ಹೇಳಿದ್ದು ಯಾವುದೂ ನಡೆಯುತ್ತಿಲ್ಲ ಎನ್ನುವ ಭಾವವೊಂದು ಒಂದಲ್ಲ ಒಂದು ಕ್ಷಣ ಬರಬಹುದು. ನನಗೆ ಸಮಯ ಕೊಡುವುದಿಲ್ಲ, ನಾನು ಹೇಳಿದಂತೆ ಮಾಡುವುದಿಲ್ಲ ಎಂದು ದೂರುತ್ತಿರಬಹುದು. ಆದರೆ ಸಂಗಾತಿಗೂ ತಮ್ಮ ಇಷ್ಟದ ಕೆಲಸದಲ್ಲಿ ತೊಡಗಿಕೊಳ್ಳಲು ಬಿಡಿ. ಸಂಗಾತಿಗೆ ಅವರಿಗೆ ಬೇಕಾದ ಸ್ಪೇಸ್‌ ಕೊಟ್ಟುಬಿಟ್ಟರೆ ಪ್ರೀತಿಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಸಾಧ್ಯ.

* ಭಾವನೆಗಳ ಜೊತೆಗೆ ಆಟ ಬೇಡ : ಯಾವ ಸಂಬಂಧದಲ್ಲಿ ಜಗಳಗಳು ಇರಲ್ಲ ಹೇಳಿ. ಕೋಪ, ಮುನಿಸು ಇಬ್ಬರೂ ವ್ಯಕ್ತಿಗಳನ್ನು ಹತ್ತಿರವಾಗಿಸಬೇಕೋ ಹೊರತು ದೂರವಲ್ಲ. ಹೆಚ್ಚಿನ ಸಂಬಂಧಗಳಲ್ಲಿ ಇಬ್ಬರ ಮಧ್ಯೆ ಕೋಪವಿದ್ದಾಗ ಸಂಗಾತಿಯನ್ನು ಇಗ್ನೋರ್‌ ಮಾಡುವುದು, ಹಿಡಿತವಿರದಂತೆ ಮಾತನಾಡುವುದು. ನಿನ್ನ ಜೊತೆಗೆ ಬದುಕಲು ಸಾಧ್ಯವಿಲ್ಲ, ಬ್ರೇಕಪ್ ಮಾಡಿಕೊಳ್ಳುವ ಎನ್ನುವ ಮಾತುಗಳು ಸಂಗಾತಿಯ ಮನಸ್ಸಿಗೆ ನೋವನ್ನು ಉಂಟು ಮಾಡಬಹುದು. ಇದು ಸಂಗಾತಿಗೆ ನೀವು ಭಾವನೆಗಳೊಂದಿಗೆ ಆಟ ಆಡುತ್ತಿದ್ದೀರ ಎಂದೆನಿಸಬಹುದು. ಹೀಗಾದಾಗ ಆಕೆ ಅಥವಾ ಆತನಲ್ಲಿ ಆಸಕ್ತಿ ಕಳೆದುಕೊಳ್ಳಬಹುದೇ ಹೊರತು ಆಪ್ತತೆಯೂ ಬೆಳೆಯದು.

* ಸಂಗಾತಿಯ ಆಸೆಗಳಿಗೆ ಬೆಲೆ ಕೊಡಿ : ಪ್ರತಿಯೊಬ್ಬರಲ್ಲಿ ನೂರಾರು ಆಸೆ ಕನಸುಗಳಿರುತ್ತದೆ. ಹೀಗಾಗಿ ಸಂಬಂಧದಲ್ಲಿ ಬೇಕಾಗಿರುವುದು ಪರಸ್ಪರ ಗೌರವ ಹಾಗೂ ಆಸೆ ಕನಸುಗಳಿಗೆ ಬೆಲೆ ಕೊಡುವ ವ್ಯಕ್ತಿಗಳು. ಹೀಗಾಗಿ ಜೊತೆಗಾತಿ ಅಥವಾ ಜೊತೆಗಾರನ ಆಸೆಗಳಿಗೆ ಬೆಲೆ ಕೊಟ್ಟು ಆ ಆಸೆಗಳನ್ನು ನೀವು ಪೂರೈಸಲು ಮುಂದಾಗಿ. ಒಂದು ವೇಳೆ ನೀವು ಅವರಿಗೆ ಹಾಗೂ ಅವರ ಆಸೆಗಳಿಗೆ ಗೌರವ ಕೊಡದೇ ಇದ್ದರೆ ಸಂಬಂಧವು ಹಾಳಾಗುತ್ತದೆ.

* ತಪ್ಪಿದ್ದಾಗ ಕ್ಷಮೆ ಕೇಳುವುದನ್ನು ಕಲಿಯಿರಿ : ತಪ್ಪು ಯಾರು ಮಾಡಲ್ಲ ಹೇಳಿ. ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೇನೇ ತಪ್ಪುಗಳು ಆಗಿ ಹೋಗುತ್ತವೆ. ಇದರಿಂದ ನಿಮ್ಮನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯ ಮನಸ್ಸಿಗೆ ನೋವಾಗಬಹುದು. ಅಂತಹ ಸಂದರ್ಭವು ಬಂದೋಗಿದರೆ ಹಿಂದೆ ಮುಂದೆ ನೋಡದೆ ಕ್ಷಮೆ ಕೇಳಿ. ಇದು ಪ್ರೀತಿ ಹಾಗೂ ಸಂಬಂಧವನ್ನು ಉಳಿಸಿಕೊಳ್ಳುವ ಮಾರ್ಗಗಳಲ್ಲಿ ಒಂದಾಗಿದೆ. ಸ್ವಚ್ಛ ಮನಸ್ಸಿನಿಂದ ಕ್ಷಮೆ ಕೇಳಿದರೂ ಸಂಗಾತಿಯೂ ನಿಮ್ಮನ್ನು ಕ್ಷಮಿಸಿಯೇ ಕ್ಷಮಿಸುತ್ತಾರೆ.

* ನಿಮ್ಮೊಳಗೆ ಚೌಕಟ್ಟು ಹಾಕಿಕೊಳ್ಳಿ : ಸಂಬಂಧದಲ್ಲಿ ಮುಚ್ಚು ಮರೆ ಇರಬಾರದು. ಆದರೆ ಚೌಕಟ್ಟನ್ನು ಹಾಕಿಕೊಳ್ಳುವುದು ಬಹಳ ಮುಖ್ಯ. ಸಂಗಾತಿಗಳಿಬ್ಬರ ನಡುವೆ ಸಂಘರ್ಷಗಳು ಉಂಟಾದಾಗ ನಮ್ಮನ್ನು ನಾವು ಕಂಟ್ರೋಲ್ ಮಾಡಿಕೊಳ್ಳಬೇಕು. ಮಾತಿಗೆ ಮಾತು ಬೆಳೆದು ಜಗಳ ನಡೆಯುವ ಸಂದರ್ಭಗಳು ಎದುರಾದರೆ ದನಿಯನ್ನು ತಗ್ಗಿಸಿ. ಈ ವೇಳೆಯಲ್ಲಿ ನೀವು ನಿಮಗೆ ಆದ ಕೆಲವು ಮಿತಿಯನ್ನು ಹಾಕಿಕೊಳ್ಳಬೇಕು. ಎಲ್ಲವೂ ತಣ್ಣಗಾದ ಬಳಿಕವಷ್ಟೇ ನಿಮ್ಮ ಅಭಿಪ್ರಾಯವನ್ನು ನೀವು ಹೇಳುವುದು ಸೂಕ್ತ.